ಉಳ್ಳಾಲ ಏಪ್ರಿಲ್ 4: ಮುಸ್ಲಿಂ ಸಮುದಾಯದ ಹಿರಿಯ ಮುಖಂಡ, ಯಶಸ್ವಿ ಮೀನು ಉದ್ಯಮಿ, ಕೊಡುಗೈ ದಾನಿ ರಜಾಕ್ ಹಾಜಿ ಅವರು ಇಂದು ನಿಧನ ಹೊಂದಿದರು. ಅನಾರೋಗ್ಯ ಪೀಡಿತರಾಗಿದ್ದರು ಇತ್ತೀಚಿನವರೆಗೂ ಕಂಕನಾಡಿ ಸಲಫಿ ಮಸೀದಿಗೆ ಜಮಾತ್ ನಲ್ಲಿ ನಮಾಜ್ ನಿರ್ವಹಿಸಲು ಬರುತ್ತಿದ್ದರು.

ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಅಧ್ಯಕ್ಷರಾಗಿ ಧಾರ್ಮಿಕ ಸಾಮಾಜಿಕ ಮತ್ತು ಶಿಕ್ಷಣ ಸೇವೆ ಸಲ್ಲಿಸುತ್ತಿದ್ದರು. ಕರಾವಳಿ ಕರ್ನಾಟಕದಲ್ಲಿ ಸಲಫಿ ಸಂಘಟನೆಗಳನ್ನು ಕಟ್ಟಿ ಬೆಳೆಸುವ ಮೊದಲ ನಾಯಕರುಗಳ ಸಾಲಿನಲ್ಲಿ ಅವರಿದ್ದರು. ಕರಾವಳಿ ಭಾಗದಲ್ಲಿ ಹಲವಾರು ಮಸೀದಿ ಸ್ಥಾಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಶಿಕ್ಷಣ ಸಂಸ್ಥೆ ಮತ್ತು ಮದರಸಾಗಲನ್ನು ಸಹ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉಲ್ಲಾಲ ಆಜಾದ್ ನಗರದ ಅವರ ಸ್ವಗ್ರಹದಲ್ಲಿ ಮತ ದೇಹವನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ. ಸರ್ವಶಕ್ತನಾದ ಅಲ್ಲಾಹನು ಅವರಿಗೆ ಮಫ್ಫಿರತ್ ಮತ್ತು ಮರ್ಹಮತ್ ನೀಡಲಿ. ಅವರ ಕುಟುಂಬಸ್ಥರು ಮತ್ತು ಮಿತ್ರ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿ ಅಲ್ಲಾಹನು ನೀಡಲಿ ಎಂದು ಹಾರೈಸುವ.