ಅಪ್ಪಟ ಪ್ರಜಾಪ್ರಭುತ್ವವಾದಿ, ಸ್ವತಂತ್ರ ಹೋರಾಟಗಾರ, ಡಾ. ಬಾಬು ಜಗಜೀವನ್ ರಾಮ

 

ಸ್ವತಂತ್ರ ಪೂರ್ವ ಭಾರತದಲ್ಲಿ ಬ್ರಿಟಿಷ್ಟು ಸರಕಾರ ಆಡಳಿತ ನೆಡೆಸುತ್ತಿತ್ತು. ಆಗ ಬಾಬು ಜಗಜೀವನ್ ರಾಮ್ ರವರು ಸಂಸದರಾಗಿ ಆಯ್ಕೆ ಆಗಿರುತ್ತಾರೆ. ಬ್ರಿಟಿಷ್ ಸರಕಾರ ಬಾಬುಜಿಯವರಿಗೆ ಮಂತ್ರಿ ಸ್ಥಾನ ಕೊಡಲು ಬಾಬುಜಿ ಮನೆಗೆ ಬರುತ್ತಾರೆ.. ಆಗ ಅವರು ಹೀಗೆ ಹೇಳುತ್ತಾರೆ. “ನೋಡಿ ಬ್ರಿಟಿಷರೆ ನೀವು ಕೊಡುವುದಾದರೆ ಭಾರತಕ್ಕೆ ಸ್ವಾತಂತ್ರ್ಯ ಕೊಡಿ ಇಲ್ಲದಿದ್ರೆ ನನಗೆ ನಿಮ್ಮ ಮಂತ್ರಿ ಸ್ಥಾನ ಬೇಡ ಎನ್ನುತ್ತಾರೆ. ಬಾಬುಜಿಯವರ ಮನೆಯ ಬಾಗಿಲಿಗೆ ಬಂದ ಮಂತ್ರಿ ಸ್ಥಾನವನ್ನು ತಿರಸ್ಕಾರ ಮಾಡಿದರು. ಇವರ ದೇಶ ಅಭಿಮಾನಕ್ಕೆ ಮೆಚ್ಚಿ ಇಡಿ ದೇಶ ಇವರ ಕಡೆ ತಿರುಗಿ ನೋಡಿತು. ಗಾಂಧೀಜಿ ಮತ್ತು ಅನೇಕ ಘಟಾನು ಘಟಿ ನಾಯಕರು ಇವರ ನಿರ್ಧಾರಕ್ಕೆ ಶಹಬಾಷ್ ಎಂದರು. ಈ ಸಂಧರ್ಭ ಸ್ವತಂತ್ರ ಹೋರಾಟದ ಕಿಚ್ಚು ಜ್ವಲಾಮಯ ರೂಪ ಪಡೆಯಲು ಸ್ಫೂರ್ತಿ ಆಯಿತು. ಆಸಹಕಾರ ಸೂತ್ರದಾರರಲ್ಲಿ ಡಾ ಬಾಬುಜಿ ಕೂಡ ಒಬ್ಬರು – Refer ಬಾಬು ಜಗಜೀವನ್ ರಾಮ್ ಜೀವನ ಚರಿತ್ರೆ, ಲೇಖಕಿ ಡಾ ಇಂದ್ರಾಣಿ.

 

ದೇಶಕ್ಕಾಗಿ ಮಂತ್ರಿಗಿರಿ ಸ್ಥಾನ ನಿರಾಕರಿಸಿದ ದೇಶಪ್ರೇಮ ಬಾಬುಜ ಚಳುವಳಿಯ ಜಗಜೀವನ್ ರಾಮ್

 

ಬ್ರಿಟಿಷರ ಆಡಳಿತ ಕಾಲದಲ್ಲಿ ರೈಲ್ವೆ ಪ್ರಯಾಣಿಕರಿಗೆ “ಹಿಂದು ಪಾನಿ” ಮತ್ತು “ಮುಸ್ಲಿಂ ಪಾನಿ” ಎಂದು ಪ್ರತ್ಯೇಕ ಪ್ರತ್ಯೇಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದಿತ್ತು. ಅಂದರೆ ಆಯಾಯ ಜನಾಂಗದವರಿಗೆ ಆಯಾಯ ಮತದವರೆ ನೀರು ಕೊಡುತ್ತಿದ್ದರು. ಸ್ವಾತಂತ್ರ್ಯ ಬಂದ ಮೇಲೆ ಎಲ್ಲ ಜನಾಂಗದವರಿಗೆ ಒಟ್ಟಾಗಿ ಕುಡಿಯುವ ನೀರು ಪೂರೈಸಲು “ಪಂಡಿತ್ ಪಾನಿ” ಎಂಬ ಹೊಸ ವ್ಯವಸ್ಥೆ ಮಾಡಲಾಯಿತು. ಇದರಲ್ಲಿ ಅಸ್ಪೃಶ್ಯರಿಗೆ ಅವಕಾಶವಿರಲಿಲ್ಲವಾಗಿ ಬಾಬು ಜಗಜೀವನ ರಾಮ್ ರವರು ರೈಲ್ವೆ ಮಂತ್ರಿಯಾದಾಗ ಈ ಪದ್ಧತಿಯನ್ನು ರದ್ದುಪಡಿಸಿ ಅಸ್ಪೃಶ್ಯರು ಸೇರಿದಂತೆ ಯಾವ ಜಾತಿ ಮತದವರಾದರು ನೀರು ಸರಬರಾಜು ಮಾಡುವಂತ ಅವಕಾಶ ಕಲ್ಪಿಸಿದರು.ಇದಕ್ಕೆ ತೀವ್ರ ಪ್ರತಿಭಟನೆ ಬರಬಹುದೆಂದು ಊಹಿಸಿದ್ದರೂ ಯಾವ ಗೊಂದಲವಿಲ್ಲದೆ ಸರ್ವರೂ ಒಪ್ಪಿಕೊಂಡರು. ಇದರಿಂದ ಹಿಂದೂ ಸಮಾಜದಲ್ಲಿದ್ದುಕೊಂಡೆ ಅಸ್ಪೃಶ್ಯತೆ ಯ ವಿರುದ್ಧ ಹೋರಾಡಿ ಜಯ ಸಾಧಿಸಬಹುದೆಂಬ ವಿಧಾನವನ್ನು ಜಗಜೀವನ ರಾಮರು ಕಂಡುಕೊಂಡರು.

 

ಜಗಜೀವನರಾಮರು ರಕ್ಷಣಾ ಮಂತ್ರಿಯಾಗಿದ್ದಾಗ ಸೇನೆಯ ನೇಮಕಾತಿಯಲ್ಲಿ ಎಲ್ಲಾ ಜಾತಿಯವರಿಗೂ ಅವಕಾಶ ಮಾಡಿಕೊಟ್ಟು ಸೇನೆಯಲ್ಲಿ ಕ್ಷತ್ರಿಯರಿಗೆ ಹೆಚ್ಚಿಗೆ ಸ್ಥಾನಗಳು ಮತ್ತು ಕ್ಷತ್ರಿಯರೇತರರಿಗೆ ಕಡಿಮೆ ಎಂಬ ಹಳೇ ಕಾಲದ ಪದ್ಧತಿಯನ್ನು ತಪ್ಪಿಸಿದರು. ತಾಂತ್ರಿಕತೆ ಮುನ್ನಡೆದಿರುವ ವರ್ತಮಾನ ಕಾಲದಲ್ಲಿ ಕ್ಷತ್ರಿಯ ವರ್ಗದವರೆ ಯುದ್ಧ ಮಾಡಬೇಕೆಂಬ ಕಲ್ಪನೆ ಸರಿಯಲ್ಲ ಎಂದು ಬಾಬೂಜಿಯವರು ಭಾವಿಸಿದ್ದರು. ಬಾಬೂಜಿಯವರ ಆಪ್ತ ಸೇವಾ ವರ್ಗದಲ್ಲಿ ಎಲ್ಲ ಜಾತಿಗಳಿಂದ ಬಂದವರು ಇದ್ದರು. ಅವರ ಹತ್ತಿರ ಬ್ರಾಹ್ಮಣ ಸೇವಕನೊಬ್ಬ ಸುಮಾರು 23 ವರ್ಷ ಸೇವೆ ಮಾಡಿರುವ ಉದಾಹರಣೆಯಿದೆ. ಅದು ಒಂದು ಉತ್ತಮ ಸಂಪ್ರದಾಯ.

 

ಸ್ವತಂತ್ರ ಪೂರ್ವ ರಾಜಕೀಯದಲ್ಲಿ ದಿಗ್ವಿಜಯ ಸಾಧಿಸಿದ ದಿಗ್ಗಜ ಇವರು. ಎಮರ್ಜೆನ್ಸಿ ಸಮಯದಲ್ಲಿ ಕೈ ಪಕ್ಷದ ವಿರುದ್ಧ ಬಂದಾಯ ಎದ್ದು ಹೋರಾಟ ಮಾಡಿ.. ಸಂವಿಧಾನ ವಿರೋಧಿ ಎಮರ್ಜೆನ್ಸಿ ಕಾನೂನು ಜಾರಿ ಮಾಡಿದ ಕೈ ಪಕ್ಷಕ್ಕೆ ರಾಜೀನಾಮೆ ಕೊಟ್ಟು 1977ರ ಇತಿಹಾಸಿಕ ಸೋಲಿನ ರುಚಿ ಕಾಂಗ್ರೆಸ್ ಪಕ್ಷಕ್ಕೆ ತೋರಿಸಿ ಕೊಟ್ಟ ಅಪ್ಪಟ ಪ್ರಜಾಪ್ರಭುತ್ವವಾದಿ.

 

1952 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ 1986 ರಲ್ಲಿ ಅವರು ಸಾಯುವವರೆಗೂ ಸಂಸತ್ ಸದಸ್ಯರಾಗಿದ್ದರು. ನಲವತ್ತು ವರ್ಷಗಳ ಕಾಲ ಸಂಸದರಾಗಿದ್ದರು. ಅವರು ಬಿಹಾರದ ಸಸಾರಾಮ್ ಸಂಸತ್ ಕ್ಷೇತ್ರದಿಂದ ಆಯ್ಕೆಯಾದರು. 1936 ರಿಂದ 1986 ರವರೆಗೆ ಸಂಸತ್ತಿನಲ್ಲಿ ಅವರ ನಿರಂತರ ಪ್ರಾತಿನಿಧ್ಯವು ವಿಶ್ವ ದಾಖಲೆಯಾಗಿದೆ. ತೆಲಂಗಾಣ ಸರಕಾರ ಏಪ್ರಿಲ್ 5 ಬಾಬು ಜಗಜೀವರಾಮ್ ಜನ್ಮದಿನದ ಪ್ರಯುಕ್ತ ರಜಾ ಘೋಷಣೆ ಮಾಡಿದೆ. ಅಪ್ಪಟ ಪ್ರಜಾಪ್ರಭುತ್ವವಾದಿ, ಸಮಾನತೆ ಹರಿಕಾರ, ಸ್ವತಂತ್ರ ಹೋರಾಟಗಾರ ಡಾ ಬಾಬು ಜಗಜೀವನ್ ರಾಮ್ ರವರು.

 

– ನಾಗಲಿಂಗ ಮಾಳೇಕೊಪ್ಪ,