ಮಂಗಳೂರು, ಮಾ.17(ಕ.ವಾ):- 2026-27 ನೇ ಶೈಕ್ಷಣಿಕ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ಅಭ್ಯರ್ಥಿಗಳಿಗೆ ಪಿ.ಯು.ಸಿ ಶಿಕ್ಷಣದೊಂದಿಗೆ ಎರಡು ವರ್ಷಗಳ ಓಇಇಖಿ/IIಖಿ-ಎಇಇ/ಏ-ಅಇಖಿ/Iಅಂಖ/ಅUಇಖಿ/ಅಐಂಖಿ/ಅಂ-ಈಔUಓಆಂಖಿIಔಓ ಪ್ರವೇಶ ಪರೀಕ್ಷೆಗಳಿಗೆ ವಸತಿ ಮತ್ತು ಇತರೆ ಅನುಕೂಲತೆಗಳೊಂದಿಗೆ ಉಚಿತ ತರಬೇತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಪಾಸ್ ಆಗಿರಬೇಕು. ಅಭ್ಯರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.8 ಲಕ್ಷಗಳನ್ನು ಮೀರಿರಬಾರದು. ಜಾಲತಾಣ hಣಣಠಿs://eಡಿಠಿ.ಜom.ಞಚಿಡಿಟಿಚಿಣಚಿಞಚಿ.gov.iಟಿ/ಛಿoe ಮುಖಾಂತರ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನ

ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮಂಗಳೂರು(08242433078), ಬಂಟ್ವಾಳ (08255232470), ಬೆಳ್ತಂಗಡಿ(0826295335), ಪುತ್ತೂರು(08251237078), ಸುಳ್ಯ(08257230666) ಅಥವಾ ಇಲಾಖೆಯ ವೆಬ್‍ಸೈಟ್ hಣಣಠಿs://ಜom.ಞಚಿಡಿಟಿಚಿಣಚಿಞಚಿ.gov.iಟಿ ಅಥವಾ ಸಹಾಯವಾಣಿ: 8277799990ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.