ಇರಾನ್‌ನ ರಾಜ್ಯ ಮಾಧ್ಯಮವು ಶನಿವಾರ ಸ್ಥಳೀಯ ಸಮಯದ ಬೆಳಿಗ್ಗೆ ಪ್ರಾರಂಭವಾದ ಇಸ್ರೇಲ್ ಮತ್ತು ಅಮೆರಿಕಾದಿಂದ ಇರಾನ್‌ನಾದ್ಯಂತ ನಡೆದ ದಾಳಿಗಳ ನಂತರ ಸರ್ವೋಚ್ಚ ನಾಯಕ ಅಲಿ ಖಾಮೆನೇಯಿ ಹತ್ಯೆಯಾಗಿರುವುದನ್ನು ದೃಢಪಡಿಸಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಾಮೆನೇಯಿ ಮೃತಪಟ್ಟಿದ್ದಾರೆ ಎಂದು ಹೇಳಿದ ನಂತರ ಹಾಗೂ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು “ಶಕ್ತಿಶಾಲಿ, ಆಕಸ್ಮಿಕ ದಾಳಿ”ಯಲ್ಲಿ ಖಾಮೆನೇಯಿಯ ತೆಹ್ರಾನ್ ನಿವಾಸ ಸಂಕೀರ್ಣ ನಾಶವಾಗಿದೆ ಎಂದು ಘೋಷಿಸಿದ ನಂತರ ರಾಜ್ಯ ಮಾಧ್ಯಮವು ಆಯತೊಲ್ಲಾ ಖಾಮೆನೇಯಿಯವರ ಮರಣವನ್ನು ಪ್ರಕಟಿಸಿತು.
ತೆಹ್ರಾನ್‌ನ ಅಣು ಕಾರ್ಯಕ್ರಮದ ಕುರಿತು ಅಮೆರಿಕಾ–ಇರಾನ್ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಮುಗಿದ ಎರಡು ದಿನಗಳ ಬಳಿಕ ನಡೆದ ಈ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ದೇಶವು ಇಸ್ರೇಲ್ ಹಾಗೂ ಅಮೆರಿಕಾ ಸೈನಿಕ ತಾಣಗಳನ್ನು ಹೊಂದಿರುವ ಏಳು ಅರಬ್ ರಾಷ್ಟ್ರಗಳಾದ ಬಹ್ರೇನ್, ಕುವೈತ್, ಖತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಕಡೆಗೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿತು.
ಇರಾನಿನ ಸರ್ವೋಚ್ಚ ನಾಯಕ ಅಲಿ ಖಾಮೆನೇಯಿ
ಮಶ್ಹಾದ್ ಎಂಬ ಪೂರ್ವ ಇರಾನಿನ ಪವಿತ್ರ ನಗರದಲ್ಲಿ ಸಾಮಾನ್ಯ ಆದಾಯ ಹೊಂದಿದ್ದ ಸಣ್ಣ ಧಾರ್ಮಿಕ ಪಂಡಿತರ ಮಗನಾಗಿ ಜನಿಸಿದ ಖಾಮೆನೇಯಿ, 1960ರ ದಶಕದ ಆರಂಭದ ಸುಧಾರಣೆ ಮತ್ತು ಬಂಡಾಯ ವಾತಾವರಣದಲ್ಲಿ ತನ್ನ ಮೊದಲ ರಾಜಕೀಯ ಹೆಜ್ಜೆಗಳನ್ನು ಇಟ್ಟರು. ಆಗಿನ ಸಾಮ್ರಾಜ್ಯ ಶಾಹಿಗಳ ಗುಲಾಮ ರಾಜ ಶಾಹ್ ಮೊಹಮ್ಮದ್ ರೆಝಾ ಪಹ್ಲವಿ ಇರಾನಿನ ರಾಜನಾಗಿದ್ದ. ಆತ ದೇಶದ ಸುಧಾರಣಾ ವಾದಿ ಧಾರ್ಮಿಕ ಮುಖಂಡರು ಬಹುಪಾಲು ತಿರಸ್ಕರಿಸಿದ ದುರ್ಬಲ ಯೋಜನೆಯನ್ನು ಆರಂಭಿಸಿದ್ದನು.
ಶಿಯಾ ಧರ್ಮಶಾಸ್ತ್ರದ ಕೇಂದ್ರವಾದ ಕುಮ್‌ನಲ್ಲಿ ಯುವ ಧಾರ್ಮಿಕ ವಿದ್ಯಾರ್ಥಿಯಾಗಿದ್ದ ಖಾಮೆನೇಯಿ, ಶಿಯಾ ಇಸ್ಲಾಂ ಪರಂಪರೆಗಳನ್ನೂ ಎತ್ತಿ ಹಿಡಿದ ಹಾಗೂ ಸುಧಾರಣಾ ವಾದಿಗಳ ಉದಯೋನ್ಮುಖ ನಾಯಕ ಆಯತೊಲ್ಲಾ ರೂಹುಲ್ಲಾ ಖೋಮೇನಿ ಅವರ ಇಸ್ಲಾಮಿ ರಾಜಕೀಯ ಚಿಂತನೆಗಳನ್ನೂ ಅಳವಡಿಸಿಕೊಂಡರು. 1960ರ ದಶಕದ ಅಂತ್ಯದ ವೇಳೆಗೆ, ದೇಶದಿಂದ ಗಡಿಪಾರು ಮಾಡಲ್ಪಟ್ಟ ರೂಹುಲ್ಲ ಖುಮೇನಿಗಾಗಿ, ಖಾಮೆನೇಯಿ ರಹಸ್ಯ ಕಾರ್ಯಗಳನ್ನು ನಡೆಸುತ್ತಿದ್ದರು. ಹಾಗೂ ಇಸ್ಲಾಮಿಸ್ಟ್ ಚಳವಳಿಗಳ ಜಾಲಗಳನ್ನು ಸಂಘಟಿಸುತ್ತಿದ್ದರು.
ಖಾಮೆನೇಯಿ ಇತರೆ ಪ್ರಭಾವಗಳನ್ನೂ ಸ್ವೀಕರಿಸಿದ್ದನರು. ಪಾಶ್ಚಾತ್ಯ ಸಾಹಿತ್ಯದ, ವಿಶೇಷವಾಗಿ ಲಿಯೋ ಟಾಲ್ಸ್ಟಾಯ್, ವಿಕ್ಟರ್ ಹ್ಯೂಗೋ ಮತ್ತು ಜಾನ್ ಸ್ಟೈನ್‌ಬೆಕ್ ಅವರ ಕೃತಿಗಳ ಅಭಿಮಾನಿಯಾಗಿದ್ದರು, ಯುವ ಕಾರ್ಯಕರ್ತನು ಆ ಕಾಲದ ವಸಾಹತು ವಿರೋಧಿ ಸಿದ್ಧಾಂತಗಳಲ್ಲೂ ಹಾಗೂ ಅವುಗಳೊಂದಿಗೆ ಸಂಬಂಧಿಸಿದ್ದ ಪಾಶ್ಚಾತ್ಯ ವಿರೋಧಿ ಮನೋಭಾವದಲ್ಲೂ ತೀವ್ರವಾಗಿ ತೊಡಗಿಕೊಂಡಿದ್ದನು. ಮಾರ್ಕ್ಸಿಸಂ ಮತ್ತು ಇಸ್ಲಾಮಿಸಂ ಅನ್ನು ಸೇರಿಸಿ ಹೊಸ ಸಿದ್ಧಾಂತಗಳನ್ನು ರೂಪಿಸಲು ಯತ್ನಿಸಿದ ಚಿಂತಕರನ್ನು ಅವರು ಭೇಟಿಯಾದರು; ತನ್ನ ದೇಶದ “ವೆಸ್ಟಾಕ್ಸಿಫಿಕೇಶನ್” (ಪಾಶ್ಚಾತ್ಯೀಕರಣದ ಅತಿರೇಕ) ಅನ್ನು ವಿವರಿಸುವ ಕೃತಿಗಳನ್ನು ಅವರು ಮೆಚ್ಚಿದ್ದನು; ಹಾಗೂ ಇಸ್ಲಾಮಿಸ್ಟ್ ಚಳವಳಿಗಳಿಗೆ ಹೊಸ ಪೀಳಿಗೆಯ ಪ್ರೇರಣೆಯಾಗಿದ್ದ ಈಜಿಪ್ಟ್‌ನ ಇಕ್ವಾನುಲ್ ಮುಸ್ಲಿಮೀನ್ ಸಂಘಟನೆಯ ಸಯ್ಯಿದ್ ಕುತುಬ್ ಅವರ ಕೃತಿಗಳನ್ನು ಸ್ಥಳೀಯ ಫಾರ್ಸಿ ಭಾಷೆಗೆ ಅನುವಾದಿಸಿದ್ದರು. ಯುವಕರಿಗೆ ವಿತರಿಸಿದರು. ಇಸ್ಲಾಮಿ ರಾಜಕೀಯ ವ್ಯವಸ್ಥೆ ಅನುಷ್ಠಾನಕ್ಕಾಗಿ ಹೋರಾಡಿದರು.
ಇರಾನದ ಭೀತಿದಾಯಕ ಭದ್ರತಾ ಸೇವೆಗಳ ಮೂಲಕ ಹಲವು ಬಾರಿ ಕಾರಾಗೃಹಕ್ಕೆ ಒಳಗಾದರೂ, 1978ರ ಭ್ರಷ್ಟ ರಾಜ ಪೆಹಲವಿ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳಲ್ಲಿ ಖಾಮೆನೇಯಿ ಭಾಗವಹಿಸಲು ಸಾಧ್ಯವಾಯಿತು; ಅವು ಕೊನೆಗೆ ಸಾಮ್ರಾಜ್ಯ ಶಾಹಿಗಳ ಗುಲಾಮ ರೇಝ ಶಾಹ್ ದೇಶ ತೊರೆಯಲು ಕಾರಣವಾದವು. ಮತ್ತು ಖೋಮೇನಿಗೆ ಮರಳಲು ಅವಕಾಶ ನೀಡಿದವು. ಅಚಲ ಮನೋಭಾವದ ಧಾರ್ಮಿಕ ನಾಯಕರ ಶಿಷ್ಯನಾಗಿದ್ದ ಅವರು, ಅಧಿಕಾರವನ್ನು ಕಬಳಿಸಿದ ಇಸ್ಲಾಮಿ ಆಡಳಿತದ ಕ್ರಮಬದ್ಧ ಶ್ರೇಣಿಯಲ್ಲಿ ವೇಗವಾಗಿ ಏರಿಕೆಯಾಗಿದ್ದು, 1981ರ ವೇಳೆಗೆ ಒಂದು ಕೈಯ ಬಳಕೆಯನ್ನು ಕಳೆದುಕೊಳಿಸಿದ ಹತ್ಯಾ ಪ್ರಯತ್ನದಿಂದ ಪಾರಾದ ನಂತರ, ಬಹುಪಾಲು ಆಚರಣಾತ್ಮಕವಾದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
1989ರಲ್ಲಿ ಖೋಮೇನಿ ನಿಧನರಾದಾಗ, ಕಡಿಮೆ ಧಾರ್ಮಿಕ ಅರ್ಹತೆ ಹೊಂದಿದವರಿಗೂ ಆ ಹುದ್ದೆಯನ್ನು ವಹಿಸಲು ಸಂವಿಧಾನದಲ್ಲಿ ಬದಲಾವಣೆ ಮಾಡಲಾಗಿದ್ದ ಬಳಿಕ, ಹಾಗೂ ಹಿಂದಿನಿಗಿಂತ ಹೆಚ್ಚಿನ ಅಧಿಕಾರಗಳೊಂದಿಗೆ, ಖಾಮೆನೇಯಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಇವುಗಳನ್ನು ಬಳಸಿಕೊಂಡು, ಕ್ರಾಂತಿಯ ನಂತರದ ಇರಾನದ ವಿಶಾಲ ಮತ್ತು ವಿಭಜಿತ ರಾಜ್ಯ ವ್ಯವಸ್ಥೆಯ ಮೇಲಿನ ತನ್ನ ನಿಯಂತ್ರಣವನ್ನು ಅವರು ಶೀಘ್ರವಾಗಿ ದೃಢಪಡಿಸಿದನು.
ಮುಖ್ಯ ಅಧಿಕಾರದ ಆಧಾರಗಳಲ್ಲಿ ಒಂದಾಗಿದ್ದದ್ದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) — ಹೊಸ ಆಡಳಿತದ ಚಟುವಟಿಕೆಗಳ ಸ್ಪಂದನ ಹೃದಯವಾಗಿದ್ದು, ಬಲವಾದ ಸೈನಿಕ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯಾಗಿತ್ತು. ಆದರೆ ಖಾಮೆನೇಯಿ ಎಂದಿನಂತೆ ಇತರ ಬಲಿಷ್ಠ ಮಿತ್ರರು ಮತ್ತು ಅನುಯಾಯಿಗಳನ್ನೂ ಜಾಗರೂಕತೆಯಿಂದ ಹುಡುಕಿಕೊಂಡರು. ಭಾರತದ ಆತ್ಮೀಯ ಮಿತ್ರರಾಗಿದ್ದರು. ಭಾರತ – ಇರಾನ್ ವ್ಯಾಪಾರ ವಹಿವಾಟು ನೂರಾರು ಪಟ್ಟು ಹೆಚಿಸಿದರು.












