ನೆನ್ನೆ ಮಾಧ್ಯಮಗಳ ಮೇಲೆ ಸಿಡಿಮಿಡಿಗೊಂಡು ಬುದ್ಧಿ ಹೇಳಿದ ರಾಹುಲ್ ಗಾಂಧಿಯವರಿಗೆ ‘ಇದು’ ಗೊತ್ತಿರದ ವಿಷಯವೇನಲ್ಲ..!

 

ಭಾರತ ದೇಶದ ಭಾಗಶಃ ಮಾಧ್ಯಮಗಳು ಆಳುವವರ್ಗದ, ಸದ್ಯದ ಸರ್ಕಾರಗಳ ಪರವಾಗಿರುತ್ತದೆ. ಅವರಿಗಾಗಿ‌ ಅವರ ಪರವಾಗಿ ಕೆಲಸ ಮಾಡುತ್ತವೆ. ಹಾಗೆ ಮಾಡಿಯೇ ಹಣ ಕೀರ್ತಿ ಗಳಿಸುತ್ತವೆ. ಇದು 1947 ರಿಂದಲೂ ಭಾರತದ ಮಾಧ್ಯಮಗಳಿಗೆ ಅಭ್ಯಾಸವಾಗಿದೆ. ಆಳುವ ಸರ್ಕಾರಗಳೂ ಮಾಧ್ಯಮಗಳನ್ನು ಹೀಗೆಯೇ ಬಳಸಿಕೊಳ್ಳುತ್ತವೆ.ಅದು‌ ಕಾಂಗ್ರೆಸ್ ಆಗಲೀ ಬಿಜೆಪಿಯಾಗಲೀ ಯಾವುದೇ ಮನುವಾದಿ ಪಕ್ಷಗಳಾಗಲೀ ಇದು ಹೀಗೆಯೇ…!!

 

ಭಾರತ ಸ್ವತಂತ್ರಗೊಂಡಾಗ ಬೇಷರತ್ ಅಧಿಕಾರಕ್ಕೆ ಬಂದದ್ದು‌ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷವು ಸುಮಾರು ಐದಾರು ದಶಕಗಳು ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾಗ ಮಾಧ್ಯಮಗಳು ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ‌ಸರ್ಕಾರಗಳ ಪರವಾಗಿದ್ದವು..! ಬರಿ ಮಾಧ್ಯಮಗಳು ಮಾತ್ರವಲ್ಲ, ಆಗ ಚುನಾವಣಾ ಆಯೋಗ, ಪೋಲೀಸು, ಕೋರ್ಟು , ಸಿಬಿಐ, ಆರ್ಬಿಐ, ಐಟಿ, ಇಡಿ, ಖಾಸಗೀ ಉದ್ಯಮ, ಸರ್ಕಾರಿ ಅಧಿಕಾರಿಗಳು ಕಾರ್ಪೊರೇಟ್ ಕುಳಗಳು ಎಲ್ಲವೂ ಎಲ್ಲರೂ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಸರ್ಕಾರಗಳ ಪರವಾಗಿದ್ದವು..!! ಆ ಕಾಲದಲ್ಲಿನ ಕಾಂಗ್ರೇಸ್ಸೇತರ ಪಕ್ಷಗಳು ಈಗ ರಾಹುಲ್ ಗಾಂಧಿಯವರು ಸಿಟ್ಟುಗೊಂಡಂತೆಯೇ ಮಾಧ್ಯಮಗಳ ಮೇಲೆ ಅಸಹನೆಯಿಂದ ಸಿಡಿಮಿಡಿಗೊಳ್ಳುತ್ತಿದ್ದರು..!

 

ಈಗ ಕಾಂಗ್ರೆಸ್ಸಿನ ಜಾಗದಲ್ಲಿ ಬಿಜೆಪಿ ಇದೆ.! ಅಂದು ಕಾಂಗ್ರೆಸ್ ಪರವಿದ್ದ ಮಾಧ್ಯಮಗಳು ಈಗ ಸಹಜವಾಗಿ ಬಿಜೆಪಿ ಪರವಿದೆ.! ಮಾಧ್ಯಮ ಎಂಬುದೂ ಉದ್ಯಮ ತಾನೆ..?

 

ಸೋ, ಎಲ್ಲಾ ವಿಷಯಗಳಲ್ಲಿಯೂ ಕಾಂಗ್ರೆಸ್ ಹಳೇ ಮಳ್ಳ; ಬಿಜೆಪಿ ಹೊಸ ಕಳ್ಳ..! ಅಷ್ಟೇ ವ್ಯತ್ಯಾಸ

 

ಜನವಿರೋಧಿಯಾದ ಕಾಂಗ್ರೆಸ್ ಬಿಜೆಪಿ ಮುಂತಾದ ಮನುವಾದಿ ಆಳುವ ಸರ್ಕಾರಗಳು, ಮನುವಾದಿ ಮಾಧ್ಯಮಗಳು, ಮನುವಾದಿ ಸರ್ಕಾರಗಳ ಅಂಗಸಂಸ್ಥೆಗಳು, ಮನುವಾದಿ ಉದ್ಯಮಿಗಳು, ಮನುವಾದೀ ಅಧಿಕಾರಶಾಹಿ ಶಕ್ತಿಗಳು ಈ ಎಲ್ಲರ ನಡುವೆ ಸದಾ ಒಂದು ಕಾಮನ್ ಅಂಡರ್ ಸ್ಟಾಂಡಿಂಗ್ ಇದ್ದೇ ಇರುತ್ತದೆ. ಇವರೆಲ್ಲರಿಂದ ಸದಾ ಯಾಮಾರತ್ತಾ ಭ್ರಮೆಯಲ್ಲಿ ಬದುಕುತ್ತಾ ದಿನನಿತ್ಯ ನಷ್ಟಕ್ಕೆ ಸಂಕಷ್ಟಕ್ಕೆ ಒಳಗಾಗುವವರು, ಶ್ರಮಪಟ್ಟು ದುಡಿದು ತೆರಿಗೆ ಕಟ್ಟುವ ಅಮಾಯಕ ಮತದಾರರು ಮಾತ್ರ…!!

 

ಬಹುಜನರೇ ಎಚ್ಚತ್ತುಕೊಳ್ಳಿ ಕಾಂಗ್ರೆಸ್ ಐವತ್ತು ವರ್ಷಗಳ ಕಾಲ ನಮ್ಮನ್ನಾಳಿದೆ. ಆದರೆ ಜಾತೀಯತೆ ಕೋಮುದ್ವೇಷ ಅಸ್ಪೃಶ್ಯತೆ ಬಡತನ ನಿರುದ್ಯೋಗ ಹೋಗಲಿಲ್ಲ.! ಈಗ ಹತ್ತನ್ನೆರಡು ವರ್ಷಗಳಿಂದ ಕೇಂದ್ರದಲ್ಲಿ ಮನುವಾದಿ ಬಿಜೆಪಿಯು ಮತ್ತು ಸದ್ಯ ರಾಜ್ಯವನ್ನು ಮತ್ತದೇ ಜಾತೀವಾದಿ ಕಾಂಗ್ರೆಸ್ ಆಳುತ್ತಿದೆ. ಈಗಲೂ ನಮ್ಮ ಬಹುಜನರದ್ದು ಅದೇ ಪರಿಸ್ಥಿತಿ..! ಅದೇ ಜಾತೀಯತೆ ಅದೇ ಅಸ್ಪೃಶ್ಯತೆ ಅದೇ ಬಡತನ ಅದೇ ಭ್ರಷ್ಟಾಚಾರ ಅದೇ ನಿರುದ್ಯೋಗ ಅದೇ ಕೆಟ್ಟ ವ್ಯವಸ್ಥೆ ಮುಂದುವರಿಯುತ್ತಿದೆ. ಸಾಕು, ಬನ್ನಿ ನಮ್ಮದೇ ಬಹುಜನ ತತ್ವ ಸಿದ್ದಾಂತ ನಮ್ಮದೇ ಪಕ್ಷ ನಮ್ಮದೇ ಓಟು ನಮ್ಮದೇ ರಾಜ್ಯ ದೇಶ ನಮ್ಮದೇ ಸರ್ಕಾರ ನಮ್ಮದೇ ಆಡಳಿತ ಆದಾಗ ಮಾತ್ರ ನಮ್ಮ ಸಮಸ್ಯೆಗಳು ಅಂದರೆ ದೇಶದ ಸಮಸ್ಯೆಗಳು‌ ಬಗೆಹರಿಯುತ್ತವೆ… ಆ ನಿಟ್ಟಿನಲ್ಲಿ‌ ಶೀಘ್ರವಾಗಿ ಆಲೋಚಿಸಿ ಸ್ವಾಭಿಮಾನಿಗಳಾಗಿ ಒಂದು ಪವಿತ್ರ ಚಳವಳಿಗಾಗಿ ಒಂದಾಗೋಣ ಬನ್ನಿ…. ಜೈಭೀಮ್..💙✊🙏

 

-ಡಾ. ಹ.ರಾ.ಮಹಿಶ