ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ – 2026

ಅಭ್ಯರ್ಥಿ: ಮೊಹಮ್ಮದ‌ಸಾ.ಎ. ಮುಲ್ಲಾ

 

ವಕೀಲರು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು.

 

ನಾನು ಮೊಹಮ್ಮದಸಾ.ಎ.ಮುಲ್ಲಾ. ಕಳೆದ 25 ವರ್ಷಗಳಿಂದ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸತತವಾಗಿ ವಕೀಲ ವೃತ್ತಿಯನ್ನು ನಿರ್ವಹಿಸುತ್ತಾ ಬಂದಿದ್ದೇನೆ. ನನ್ನ ವೃತ್ತಿಜೀವನದ ಆರಂಭದಿಂದಲೂ ಎನ್. ಎಸ್.ಹಿರೇಮಠ್ ಅವರ ಸಹೋದ್ದೋಗಿಯಾಗಿ ಹಿರೇಮಠ್ ಅಂಡ್ ಮುಲ್ಲಾ ಅಸೋಸಿಯೇಟ್ಸನಲ್ಲಿ ವಕೀಲರ ವೃತ್ತಿ ಮಾಡುತ್ತಿದ್ದನೇ. 25ವರ್ಷಗಳ ಸುದೀರ್ಘ ಅನುಭವದೊಂದಿಗೆ, ಈ ವರ್ಷ ನಡೆಯಲಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು, ಇಂದು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ವಕೀಲ ಮಿತ್ರರ ಜೊತೆಗೂಡಿ ನಾಮಪತ್ರವನ್ನು ಸಲ್ಲಿಸಿದ್ದೇನೆ.

 

ನನ್ನ ಚುನಾವಣಾ ಉದ್ದೇಶಗಳು:

 

ವಕೀಲರು ಎದುರಿಸುತ್ತಿರುವ ಜೀವನದ ಅನಿಶ್ಚಿತತೆ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮತ್ತು ಸಾಮಾಜಿಕ ಭದ್ರತೆ ಒದಗಿಸುವುದು ನನ್ನ ಮುಖ್ಯ ಉದ್ದೇಶವಾಗಿದೆ.

25 ಲಕ್ಷ ರೂಪಾಯಿಗಳ ಸಂತ್ರಸ್ತ ನಿಧಿ: ವಕೀಲರು ಅಕಾಲಿಕ ಮರಣಕ್ಕೀಡಾದಲ್ಲಿ, ಅವರ ಕುಟುಂಬದ ಹಿತದೃಷ್ಟಿಯಿಂದ ಸರ್ಕಾರದ ಜೊತೆಗೂಡಿ ವಕೀಲರ ಸಂತ್ರಸ್ತ ನಿಧಿಯಿಂದ ಕನಿಷ್ಠ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.

 

5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ: ಹೃದಯಾಘಾತ, ಕ್ಯಾನ್ಸರ್ ಅಥವಾ ಪಾರ್ಶ್ವವಾಯುವಿನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ವಕೀಲರ ಚಿಕಿತ್ಸೆಗಾಗಿ ಕನಿಷ್ಠ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ (Insurance Cover) ಸೌಲಭ್ಯವನ್ನು ಜಾರಿಗೆ ತರಲು ಹೋರಾಟ ನಡೆಸುತ್ತೇನೆ.

 

ಒಗ್ಗಟ್ಟಿನ ಧ್ವನಿ: ಪರಿಷತ್ತಿಗೆ ಆಯ್ಕೆಯಾಗುವ ಎಲ್ಲಾ 25 ಸದಸ್ಯರು ಮತ್ತು ರಾಜ್ಯದ ಎಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷರುಗಳನ್ನು ಒಗ್ಗೂಡಿಸಿ, ಸರ್ಕಾರದ ಮಟ್ಟದಲ್ಲಿ ನಮ್ಮ ಹಕ್ಕುಗಳಿಗಾಗಿ ಪ್ರಬಲವಾಗಿ ಧ್ವನಿ ಎತ್ತುತ್ತೇನೆ.

 

ನಮ್ಮ ವಕೀಲ ಸಮೂಹದ ಪ್ರೀತಿ ಮತ್ತು ಬೆಂಬಲವೇ ನನಗೆ ಶ್ರೀರಕ್ಷೆ. ವಕೀಲರ ಕಲ್ಯಾಣಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಲು ನನಗೆ ಒಂದು ಅವಕಾಶ ಮಾಡಿಕೊಡಬೇಕೆಂದು ನಿಮ್ಮಲ್ಲಿ ವಿನಮ್ರವಾಗಿ ವಿನಂತಿಸುತ್ತೇನೆ.

 

ವಂದನೆಗಳೊಂದಿಗೆ, ಮೊಹಮ್ಮದ‌ಸಾ ಎ. ಮುಲ್ಲಾ (ಹಿರೇಮಠ್ ಅಂಡ್ ಮುಲ್ಲಾ ಅಸೋಸಿಯೇಟ್ಸ್)@