ಯುಗಯುಗಗಳಿಂದ ಈ ನಾಡಿನಲ್ಲಿ ಸಂತರು, ಶರಣರು, ಸಾಧಕರು ತಮ್ಮ ಜ್ಞಾನ ಮತ್ತು ಸೇವಾಕಾರ್ಯಗಳ ಮೂಲಕ ಮಾನವೀಯತೆಯನ್ನು ಎತ್ತಿಹಿಡಿದಿದ್ದಾರೆ. ಅಂತಹ ಶ್ರೇಷ್ಠ ಸಂತರಾದ, 10ನೇ ಶತಮಾನದಲ್ಲಿದ್ದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳು ತ್ಯಾಗ, ಸೇವೆ ಮತ್ತು ಆಧ್ಯಾತ್ಮಿಕ ಶಕ್ತಿಯ ಎಂದಿಗೂ ನಂದದ ದೀಪವನ್ನು ಬೆಳಗಿದ್ದಾರೆ. ಸಾವಿರ ವರ್ಷಗಳ ಪ್ರಾಚೀನ ಇತಿಹಾಸ, ಆಧ್ಯಾತ್ಮಿಕ ಹಿರಿಮೆಯುಳ್ಳ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಅಸಾಧಾರಣ ಪರಂಪರೆ ಹೊಂದಿರುವ ಸುತ್ತೂರು ಶ್ರೀಮಠವು, ಅಂದಿನಿಂದಲೇ ಧರ್ಮ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಅನುಕರಣೀಯ ಮತ್ತು ಆದರ್ಶಪ್ರಾಯವಾಗಿದೆ.

ಸುತ್ತೂರು ಶ್ರೀಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ವಿಶ್ವ ಒಕ್ಕಲಿಗ ಮಠದ ಪರಮಪೂಜ್ಯ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು, ಶ್ರೀ ಕನಕಪುರದ ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ಬಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ, ಜನರ ಭಕ್ತಿ, ಉತ್ಸಾಹಗಳೊಂದಿಗೆ, ಮಳವಳ್ಳಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವದಲ್ಲಿ ಇಂದು ಪಾಲ್ಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಚಿವರಾದ ಶ್ರೀ Eshwar Khandre, ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ಶಂಕರ ಬಿದರಿ, ಶಾಸಕರಾದ ನರೇಂದ್ರಸ್ವಾಮಿ, ಮಾಜಿ ಶಾಸಕರುಗಳಾದ ಶ್ರೀ ಅನ್ನದಾನಿ, ಶ್ರೀ ನಿರಂಜನ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರು ಸೇರಿದಂತೆ ಹಲವಾರು ಗಣ್ಯರು, ಬೃಹತ್ ಸಂಖ್ಯೆಯಲ್ಲಿ ಭಕ್ತಜನರು ಮಹೋತ್ಸವದಲ್ಲಿ ಉಪಸ್ಥಿತರಿದ್ದರು.
Vijayendra yediyurappa
President, BJP Karnataka












