26-10-2025.
ಈಡಿಗ ಸಮುದಾಯದ OBC ವರ್ಗದ ಪ್ರಕಾರ ಅಹಿಂದ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ S.ಬಂಗಾರಪ್ಪನವರ 92ನೇ ಜಯಂತಿಯ ಶುಭಶಯಗಳು.

ಯಾರೇ ಕಷ್ಟ ಹೇಳಿಕೊಂಡು ಬಂದರು Yes ಎಂದು
ಸಮಸ್ಯೆ ಬಗೆಹರಿಸುತ್ತಿದ್ದ S. ಬಂಗಾರಪ್ಪನವರು NO
ಎಂದು ಯಾರಿಗು ಹೇಳುತ್ತಿರಲಿಲ್ಲ…
ಸ್ವಾಭಿಮಾನಿ S.ಬಂಗಾರಪ್ಪನವರು‌ ಸಾಹಸಿ ರಾಜಕಾರಣಿಯಾಗಿದ್ದರು ವಿಪರೀತ ರಿಸ್ಕ್ ತೆಗೆದುಕೊಂಡು
ಛಲ ಸಾಧಿಸುತ್ತಿದ್ದರು…
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸಾರೇಕೊಪ್ಪ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದ S. ಬಂಗಾರಪ್ಪ ನವರಿಗೆ ಗಣಪತಿಯಪ್ಪನ­ವರು ಆರಂಭಿಸಿದ್ದ ಕಾಗೋಡು ಸತ್ಯಾಗ್ರಹವು ಅಪಾರ ಪ್ರಭಾವ ಬೀರುತ್ತದೆ.
ಸ್ವತಃ ವಕೀಲರಾಗಿದ್ದ S. ಬಂಗಾರಪ್ಪನವರು
ದಲಿತರು, OBC ಗಳು ಹಾಗೂ ಪ್ರಮುಖವಾಗಿ
ದೀವರ ಜಾತಿಯ ಸಾವಿರಾರು ಗೇಣಿದಾರರ ಭೂಮಿಯ ಹಕ್ಕುಗಳಿಗಾಗಿ ತಾವೇ ಕೋರ್ಟ್ ಫೀಸು ಕಟ್ಟಿ ನ್ಯಾಯಾಲಯದಲ್ಲಿ ಹೋರಾಟ ಮಾಡಿ ನ್ಯಾಯ ಕೊಡಿಸುತ್ತಾರೆ ನಮ್ಮ ಲೋಹಿಯ ಅವರ ಸಮಾಜವಾದಿ ಪಕ್ಷದಿಂದ ರಾಜಕೀಯ ಶುರು ಮಾಡುವ S.ಬಂಗಾರಪ್ಪನವರು ನಂತರ ದೇವರಾಜ ಅರಸು ಅವರ
ಆಹ್ವಾನದ ಮೇರೆಗೆ ಕಾಂಗ್ರೆಸ್ ಪಕ್ಷ ಸೇರುತ್ತಾರೆ,
ದೇವರಾಜ ಅರಸು ಅವರ ಸಮರ್ಥ ಗರಡಿಯಲ್ಲಿ ಪಳಗುವ S. ಬಂಗಾರಪ್ಪನವರು ಅಹಿಂದ ನಾಯಕರಾಗಿ ರೂಪುಗೊಳ್ಳುತ್ತಾರೆ….
ಲಿಂಗಾಯತ, ಬ್ರಾಹ್ಮಣ ಜಾತಿಯವರಿಂದ S.ಬಂಗಾರಪ್ಪನವರಿಗೆ ಮೂರು ಬಾರಿ ಮುಖ್ಯಮಂತ್ರಿ ಪದವಿ ತಪ್ಪುತ್ತದೆ,
ಒಮ್ಮೆ ಗೂಂಡುರಾವ್, ಇನ್ನೊಮ್ಮೆ ರಾಮಕೃಷ್ಣ ಹೆಗಡೆ,
ಹಾಗೂ ಮತ್ತೊಮ್ಮೆ ವೀರೇಂದ್ರ ಪಾಟೀಲನಿಂದ ಮುಖ್ಯಮಂತ್ರಿ ಹುದ್ದೆ ಕೈತಪ್ಪುತ್ತದೆ…
ಮೂರು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದರು ಕೂಡ ನಾಲ್ಕನೆಯ ಬಾರಿ 1990 ರಲ್ಲಿ
S. ಬಂಗಾರಪ್ಪನವರು ಮುಖ್ಯಮಂತ್ರಿಯಾಗುತ್ತಾರೆ.

1980 ರಲ್ಲಿ ದೇವರಾಜ ಅರಸು ವಿರುದ್ಧ ಇಂದಿರಾ ಗಾಂಧಿ ಅವರು S.ಬಂಗಾರಪ್ಪನವರನ್ನು ಮುಖ್ಯಮಂತ್ರಿ ಮಾಡುತ್ತಿನಿ ಎಂದು ಭರವಸೆ ನೀಡಿ ವಂಚಿಸಿ ಸ್ವಜಾತಿ ಬ್ರಾಹ್ಮಣ ಸಮುದಾಯದ ಗೂಂಡುರಾವನನ್ನು ಮುಖ್ಯಮಂತ್ರಿ ಮಾಡುತ್ತಾರೆ ಈ ಅನ್ಯಾಯದ ವಿರುದ್ಧ ತಿರುಗಿ ಬಿಳುವ S.ಬಂಗಾರಪ್ಪನವರು 1983 ರಲ್ಲಿ ದೇವರಾಜ ಅರಸು ಅವರು ಸ್ಥಾಪಿಸಿದ ಕ್ರಾಂತಿರಂಗ ಪಕ್ಷಕ್ಕೆ ಸೇರಿ, ಕ್ರಾಂತಿ ರಂಗದ ನಾಯಕರಾಗಿ ರಾಜ್ಯದ ತುಂಬಾ ಚುನಾವಣಾ ಪ್ರಚಾರ ಮಾಡಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ
ಜನತಾ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಾರೆ
ಅದರೆ S.ಬಂಗಾರಪ್ಪನವರಿಗೆ ದೊರೆಯಬೇಕಾದ ಮುಖ್ಯಮಂತ್ರಿ ಸ್ಥಾನ ಬ್ರಾಹ್ಮಣ ಜಾತಿಯ ಕುತಂತ್ರಿ ರಾಮಕೃಷ್ಣ ಹೆಗಡೆ ಕಬಳಿಸುತ್ತಾರೆ.
ಆಗಾ ಜನತಾ ಪರಿವಾರ ತ್ಯಜಿಸಿ ರಾಜೀವ ಗಾಂಧಿ ಅವರ
ಆಹ್ವಾನದ ಮೇಲೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ
1989 ರಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಪರವಾಗಿ
ಬಿರುಸಿನ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ S.ಬಂಗಾರಪ್ಪ ಅದರೆ ಅಲ್ಲಿಯ ತನಕ ಸುಮ್ಮನಿದ್ದ ಲಿಂಗಾಯತ ಜಾತಿವಾದಿ ಲಾಭಿಯು
ಕರ್ನಾಟಕ ಕಂಡ ಅತಿದೊಡ್ಡ ಜಾತಿವಾದಿ ವೀರೇಂದ್ರ
ಪಾಟೀಲನಿಗೆ ಮುಖ್ಯಮಂತ್ರಿ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗುತ್ತರೆ.
1989 ರಲ್ಲಿ ಮುಖ್ಯಮಂತ್ರಿಯಾಗುವ ವೀರೇಂದ್ರ ಪಾಟೀಲ,
ಅಹಿಂದ ರಾಜಕೀಯ OBC ನಾಯಕತ್ವ ನಾಶ ಮಾಡುವ ದುರುದ್ದೇಶದಿಂದ ಲಿಕ್ಕರ್ ಲೋಕದ ಅಧಿಪತಿಗಳು ಹಾಗೂ OBC, ಅಹಿಂದ ರಾಜಕೀಯದ ಮಹಾಪೊಷಕರಾದ ಈಡಿಗ, OBC ಲಿಕ್ಕರ್ ವ್ಯಾಪಾರಿಗಳಿಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಹಾಗೂ ಅಬಕಾರಿ ಇಲಾಖೆಯ ಮೂಲಕ ಅಪಾರ ತೊಂದರೆ ನೀಡುತ್ತಾರೆ ಅದರು ಕೂಡ S.ಬಂಗಾರಪ್ಪ ಛಲಬಿಡದೆ ರಾಜಕಾರಣ ಮಾಡುತ್ತಾರೆ,
ಅವರ ಬೆಂಬಲಿಗರಿಗೆ ವಿಶ್ವಾಸ ತುಂಬುತ್ತಾರೆ,
ಇದೆ ಅವಧಿಯಲ್ಲಿ
ಅಹಿಂದ ವಿರೋಧಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲನ
ಅರೋಗ್ಯ ಸ್ಥಿತಿಯು ಹದಗೆಟ್ಟ ಕೃಷವಾಗುತ್ತದೆ,
ಆಗಾ ಬೆಂಗಳೂರಿಗೆ ಬರುವ ಪ್ರಧಾನಿ ರಾಜೀವ್ ಗಾಂಧಿಯು
ವೀರೇಂದ್ರ ಪಾಟೀಲನನ್ನು ಮುಖ್ಯಮಂತ್ರಿ ಹುದ್ದೆಯಿಂದ
ತೆಗೆದುಹಾಕಿ 1990 ರಲ್ಲಿ S.ಬಂಗಾರಪ್ಪನವರನ್ನು
ಮುಖ್ಯಮಂತ್ರಿ ಮಾಡುತ್ತಾರೆ
S.ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದ 2 ವರಗಷಗಳ ಅವಧಿಯಲ್ಲಿ ಅಹಿಂದ ವರ್ಗಕ್ಕೆ ಬಲ ತುಂಬುತ್ತಾರೆ.
ಅಹಿಂದ ವರ್ಗಕ್ಕೆ S.ಬಂಗಾರಪ್ಪನವರ ರಾಜಕೀಯ ಜೀವನ ಒಂದು ಪಾಠವಾಗಿದೆ…..
ಅಹಿಂದ ವರ್ಗವು ರಾಜಕೀಯ ಅಧಿಕಾರದ ಜೊತೆಗೆ
ಭದ್ರವಾದ ಸಂಘಟನೆಯನ್ನು ಬುನಾದಿಯಾಗಿ ಮಾಡಿಕೊಳ್ಳಬೇಕಿದೆ…

ಸೂರ್ಯಪ್ರಕಾಶ ಕೋಲಿ.
ಅಹಿಂದ ಚಳುವಳಿ.
ಬೆಂಗಳೂರು.
9945138515