ತೋನ್ಸೆ ಹೆಲ್ತ್ ಸೆಂಟರ್ ತೊನ್ಸೇ, ಹೊಡೆ ಇವರ ವತಿಯಿಂದ ತೊನ್ಸೇ ವಿಜಯ ಕುಮಾರ್ ಶೆಟ್ಟಿ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ 2 ಆಗಸ್ಟ್ ರಂದು ಸೆಂಟರಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಕಾಡಿ ಕುಟುಂಬದ ಹಿರಿಯರಾದ ಹುಸೈನ್ ಸಾಹೇಬ್ ಅವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಯುತ ಜನಾರ್ಧನ ತೋನ್ಸೆ, ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ ಇದರ ನಿವೃತ್ತ ಪ್ರಾಂಶುಪಾಲರಾದ ಡಾಕ್ಟರ್ ಜೆರಾಲ್ಡ್ ಪಿಂಟೋ,ಕೆಮ್ಮಣ್ಣು ಕಂಡಾಲ ಕುಟುಂಬದ ಹಿರಿಯರಾದ ಕೆ ರಘುರಾಮ್ ಶೆಟ್ಟಿ,ತೋನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಸುಮ, ಉದಯ್ ಕಿಚನ್ ಗ್ರೂಪ್ ಇದರ ಚೇರ್ಮನ್ ರಮೇಶ್ ಕೆ ಬಂಗೇರ, ಸೈಮ ಗ್ರೂಪ್ ಉಡುಪಿ ಇದರ ಇಂಜಿನಿಯರ್ ಇಮ್ತಿಯಾಜ್,ಸತೀಶ್ ಶೆಟ್ಟಿ ಅಧ್ಯಕ್ಷರು ಗಣಪತಿ ವ್ಯವಸಾಯಕ ಸಂಘ ಕೆಮ್ಮಣ್ಣು,ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಕೆಮ್ಮಣ್ಣು ಶ್ರೀಮತಿ ಸುಲೋಚನಾ ಹಾಗೂ ತೋನ್ಸೆ ಹೆಲ್ತ್ ಸೆಂಟರ್ ಇದರ ಚೇರ್ಮನ್ ಬಿ ಎಂ ಜಾಫರ್,ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ ಶ್ರುತ ಉಪಸ್ಥಿತರಿದ್ದರು.

 

ಸಂಸ್ಥೆಯ ಚೇರ್ಮನ್ ರವರು ಅತಿಥಿಗಳನ್ನು ಸ್ವಾಗತಿಸಿದರು.ಸಂಸ್ಥೆಯ ಮ್ಯಾನೇಜರ್ ಹರೀಶ್ ಶೆಟ್ಟಿ ಇವರು ಬೈಕಾಡಿ ಹಸನ್ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನಡೆದುಬಂದ ದಾರಿ ಮತ್ತು ಅದರ ವಾರ್ಷಿಕ ಚಟುವಟಿಕೆಯ ಬಗ್ಗೆ ವರದಿಯನ್ನು ಪ್ರಸ್ತಾವಿಸಿದರು.ಸನ್ಮಾನ ಸಮಾರಂಭದ ಸನ್ಮಾನ ಪತ್ರವನ್ನು ಡಾ ಶ್ರುತಾರವರು ಸಲ್ಲಿಸಿದರು.ತದನಂತರ ನಡೆದ ಸನ್ಮಾನ ಕಾರ್ಯಕ್ರಮವು ವೇದಿಕೆಯಲ್ಲಿರುವ ಎಲ್ಲಾ ಗಣ್ಯರ ಉಪಸ್ಥಿತಿಯಲ್ಲಿ ಪೇಟ,ಶಾಲು,ಪಲಪುಷ್ಪ ಸನ್ಮಾನಪತ್ರದ ಮೂಲಕ ನೆರವೇರಿತು.

ಸನ್ಮಾನವನ್ನು ಸ್ವೀಕರಿಸಿದ ಸನ್ಮಾನ್ಯ ವಿಜಯ ಕುಮಾರ್ ಶೆಟ್ಟಿ ಇವರು ತಮ್ಮ ಭಾಷಣದಲ್ಲಿ ತನ್ನ ವಾಕ್ಚಾತುರ್ಯ ಮತ್ತು ವಿಭಿನ್ನ ರೀತಿಯ ಅಭಿನಯದ ಮೂಲಕ ಸೇರಿದ ಸಭಿಕರಿಗೆ ತನ್ನ ಪ್ರತಿಭೆಯ ಕಿರು ಪರಿಚಯ ಮಾಡಿಸಿ ಕೇಂದ್ರಬಿಂದು ಎನಿಸಿಕೊಂಡರು.

ಅತಿಥಿಗಳಾದ. ಜನಾರ್ಧನ ತೋನ್ಸೆ,ಜೆರಾಲ್ಡ್ ಪಿಂಟೋ,ರಘುರಾಮ್ ಶೆಟ್ಟಿ,ಸತೀಶ್ ಶೆಟ್ಟಿ ಹಾಗೂ ಕುಸುಮ ಇವರುಗಳ ಕಿರು ಭಾಷಣದ ಕಿವಿಮಾತುಗಳು ಸಭಾಕಾರ್ಯಕ್ರಮದ ಸೌಂದರ್ಯವನ್ನು ಹೆಚ್ಚಿಸಿತು.

ಸಭಾಧ್ಯಕ್ಷರಾದ ಹುಸೇನ್ ಸಾಹೇಬ್ ಇವರ ಸೌಹಾರ್ದತೆಯ ಚುಟುಕು ಮಾತುಗಳು ಎಲ್ಲರಿಗೂ ಮನದಟ್ಟುವಂತಿತ್ತು.

ಕೊನೆಯಲ್ಲಿ ಮ್ಯಾನೇಜರ್ ಹರೀಶ್ ಶೆಟ್ಟಿಯವರಿಂದ ವಂದನಾರ್ಪಣೆ ಹಾಗೂ ಕಾರ್ಯಕ್ರಮದ ನಿರೂಪಣೆ ದೀಪ್ತಿ ಅವರಿಂದ ನೆರವೇರಿತು.