*ಮಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಿರಿಗೆ ಯುವ ನಾಯಕ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಸನ್ಮಾನ್ಯ ಸುಹೈಲ್ ಕಂದಕ್ ರವರನ್ನು ಆದಷ್ಟು ಬೇಗ ನೇಮಿಸಬೇಕೆಂದು ಸಮಾನ ಮನಸ್ಕರ ವೇದಿಕೆಯಿಂದ ಆಗ್ರಹ*
ಸುಹೈಲ್ ಕಂದಕ್ ಈ ಹೆಸರು ಹೇಳದವರು ಹಾಗೂ ಕೇಳದವರು ಅತೀ ವಿರಳ ” ಎನ್.ಎಸ್. ಯು.ಐ ಹಾಗೂ ಯುವ ಕಾಂಗ್ರೆಸ್ ನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಇವರು ಯುವಕರ ಪಾಲಿಗೆ ದಿವ್ಯಜ್ಯೋತಿಯಾಗಿ ಮೂಡಿ ಬಂದಿದ್ದಾರೆ ” ಯಾಕೆಂದರೆ ಜಿಲ್ಲೆಯಲ್ಲಿ ಸಮಾಜಮುಖಿ ಹೋರಾಟದಲ್ಲಿ ಇವರು ಎತ್ತಿದ ಕೈ ಹಾಗೂ ಅನೇಕ ಬಾರಿ ಮಾಧ್ಯಮದ ಮೂಲಕ ಚರ್ಚಾಕೂಟದಲ್ಲಿ ಪಾಲ್ಗೊಂಡ ಇವರು ಪಕ್ಷದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದವರು ಹಾಗೂ ಕಾರ್ಯಕರ್ತರುಗಳ ಯಾವುದೇ ಅಹವಾಲಿಗೆ ತಕ್ಷಣ ಸ್ಪಂಧಿಸಿ ಕೈಗೆ ಎಟಕುವ ನಾಯಕ ಇವರೇ ಸುಹೈಲ್ ಕಂದಕ್ 💐 ಕಳೆದ ಮಹಾಮಾರಿ ಕೊರೋನಾ ಸಮಯದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿ ಅದೆಷ್ಟೋ ರೋಗಿಗಳ ಪಾಲಿಗೆ ನೆರವಾಗಿ ಆಸ್ಪತ್ರೆಯಲ್ಲಿ ವೆಚ್ಚ ಭರಿಸಲು ಅಸಾಧ್ಯವಾದ ಕುಟುಂಬಕ್ಕೆ ಆಸ್ಪತ್ರೆಯ ಆಡಳಿತ ಸಮಿತಿಯಲ್ಲಿ ತುರ್ತಾಗಿ ಮಾತುಕತೆ ನಡೆಸಿ ಅವರ ಪಾಲಿಗೆ ಆಪತ್ಭಾಂದವರಾಗಿ ನಿಂತ ನಾಯಕ ಇವರೇ ಸುಹೈಲ್ ಕಂದಕ್🤝 ಆ ಸಮಯದಲ್ಲಿ ಮನೆಯಿಂದ ಹೊರ ಬರಲಾಗದ ಸಂಧಿಗ್ದ ಪರಿಸ್ಥಿತಿಯಲ್ಲಿ ಕೂಡಾ ಯುವಕರ ತಂಡವನ್ನು ಕಟ್ಟಿಕೊಂಡು ವಿವಿಧ ಸಹಾಯಹಸ್ತವನ್ನು ಚಾಚಿ “ಆಕ್ಸಿಜನ್ ಮ್ಯಾನ್” ಎಂದೇ ಹೆಸರು ಗಳಿಸಿದ ಸುಹೈಲ್ ಕಂದಕ್ ರವರ ಹೋರಾಟದ ಸ್ಪೂರ್ಥಿ ಯುವಕರ ಪಾಲಿಗೆ ಆಕರ್ಷಣಿಯ ನಾಯಕತ್ವ ಹಾಗೂ ಸಂಘಟನಾ ಚತುರತೆಯ ಮೂಲಕ ಕಾರ್ಯಕರ್ತರ ಮನಗೆದ್ದ ಸುಹೈಲ್ ರವರು ನಿಜಕ್ಕೂ ಜಿಲ್ಲಾ ಕಾಂಗ್ರೆಸ್ ನ ಸಾರಥಿಯಾದರೆ ಪಕ್ಷದ ಗತವೈಭವ ಮರುಕಳಿಸುವುದು ಖಂಡಿತಾ ಜಿಲ್ಲೆಯುದ್ದಕ್ಕೂ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ತರಭೇತಿ ಶಿಬಿರದಲ್ಲಿ ಪಾಲ್ಗೊಲ್ಲುವ ಇವರು ಉತ್ತಮ ವಾಗ್ಮಿಯೂ ಬಹುಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅಪ್ಪಟ ಜ್ಯಾತ್ಯಾತೀತವಾದಿಯಾಗಿ ಕೋಮುವಾದಿಗಳ ಪಾಲಿಗೆ ಸಿಂಹಸ್ವಪ್ನರಾಗಿರುವ ಇವರು ಬಿಜೆಪಿ ಸಂಘಪರಿವಾರದ ನಾಯಕರಿಗೆ ಅದೆಷ್ಟೋ ಬಾರಿ ಚಾಟಿ ಬೀಸಿರುವ ಗಂಡೆದೆಯ ಗಟ್ಟಿಧ್ವನಿಯ ಧೈರ್ಯವಂತ ಯುವನಾಯಕ “🌹ನಮ್ಮ ವರಿಷ್ಟರು ಇಂಥವರ ಕೈಗೆ ಪಕ್ಷದ ಚುಕ್ಕಾಣಿ ನೀಡಿ ಪಕ್ಷವನ್ನು ಬಲಿಷ್ಠಗೊಳಿಸಲು ಈ ಬಾರಿ ಇವರಿಗೆ ಅವಕಾಶ ನೀಡಬೇಕಾಗಿ ಕಳಕಳಿಯ ವಿನಂತಿ*
*ಸಮಾನ ಮನಸ್ಕರ ವೇದಿಕೆ*
###########################
ಸುಹೈಲ್ ಕಂದಕ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕರ್ತರ ಅಭಿಯಾನ!
ಕಳೆದ ಕೆಲವು ದಿನಗಳಿಂದ ದ.ಕ ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ನಡೆದಿದೆ ಕುತೂಹಲಕಾರಿ ಬೆಳವಣಿಗೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷದ ನಾಯಕರು ನಿಗಮ ಮಂಡಳಿ, ಪ್ರಾಧಿಕಾರದ ಚುಕ್ಕಾಣಿ ಹಿಡಿಯಲು ತಮ್ಮ ತಮ್ಮ ಪರಿಚಯದ ನಾಯಕರ ಮೂಲಕ ಶಿಫಾರಸು ಮಾಡಿಸುವ ಕೆಲಸದಲ್ಲಿ ನಿರತರಾಗಿದ್ದರೆ, ಕರಾವಳಿ ಜಿಲ್ಲೆಯ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯ ಯುವನಾಯಕನಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಒತ್ತಾಯಿಸುತ್ತಿದ್ದಾರೆ.
ಪಕ್ಷ ಅಧಿಕಾರದಲ್ಲಿದ್ದಾಗ ಲಾಭದಾಯಕ ಮತ್ತು ಅಧಿಕಾರಯುತ ನಿಗಮ ಮಂಡಳಿ ಅಧಿಕಾರ ಪಡೆಯುವ ಕಡೆ ಗಮನಕೊಡದೆ ಪಕ್ಷ ಸಂಘಟನೆಯಲ್ಲೇ ನಿರತರಾಗಿರುವ ಸುಹೈಲ್ ಕಂದಕ್ ಗೆ ಅಧ್ಯಕ್ಷ ಸ್ಥಾನ ನೀಡಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಅವಕಾಶ ಕಲ್ಪಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಯುವ ಕಾರ್ಯಕರ್ತರು ಸುಹೈಲ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಈಗಾಗಲೇ 10,000 ಕ್ಕೂ ಹೆಚ್ಚಿನ ಟ್ವೀಟ್ ಮೂಲಕ #SuhailforDCC ಹಾಗೂ #SuhailforDK ಎಂದು ಒಕ್ಕೊರಲಿನಿಂದ ಆಗ್ರಹಿಸುತ್ತಾ ನೇರವಾಗಿ ಕೆಪಿಸಿಸಿ ಹಾಗೂ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನೇ ಟ್ಯಾಗ್ ಮಾಡಿ ತಮ್ಮ ಬೇಡಿಕೆ ಇಡುತ್ತಿದ್ದಾರೆ.
ಒಂದು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿತದೃಷ್ಟಿಯಿಂದಲೇ ಈ ರೀತಿಯ ಉತ್ಸಾಹ ಹಾಗೂ ಒಕ್ಕೊರಲಿನಿಂದ ಒಬ್ಬ ನಾಯಕನ ಪರವಾಗಿ ಯುವ ಸಮುದಾಯ ಧ್ವನಿ ಎತ್ತುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಇದೀಗ ನೂರಾರು ಈಮೇಲ್ ಮೂಲಕ ರಾಜ್ಯ ಹಾಗೂ ರಾಷ್ಟ್ರ ನಾಯಕರುಗಳಿಗೂ ಸುಹೈಲ್’ರನ್ನು ಜಿಲ್ಲಾಧ್ಯಕ್ಷರನ್ನಾಗಿ ಏಕೆ ನೇಮಕ ಮಾಡಬೇಕು ಎಂದು ಸುದೀರ್ಘ ಪತ್ರಗಳನ್ನು ಕಳುಹಿಸುವ, ಹಾಗೂ ಪೋಸ್ಟ್ ಮೂಲಕವೂ ನಾಯಕರುಗಳಿಗೆ ತಲುಪಿಸುವ ಕೆಲಸವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳ ಯುವ ಕಾರ್ಯಕರ್ತರು ಮಾಡುತ್ತಿರುವುದು ಕಂಡುಬಂದಿದೆ.
ದ.ಕ ಜಿಲ್ಲೆಗೆ ಎರಡು ಜಿಲ್ಲಾ ಸಮಿತಿ ರಚಿಸುವ ತೀರ್ಮಾನದ ನಂತರ ಒಂದು ಜಿಲ್ಲಾಧ್ಯಕ್ಷ ಸ್ಥಾನ ಸುಹೈಲ್ ಕಂದಕ್ ಗೆ ನೀಡುವ ಬಗ್ಗೆ ಜಿಲ್ಲೆ ಹಾಗೂ ಬೆಂಗಳೂರಿನಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದ್ದು, ಶೀಘ್ರದಲ್ಲೇ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.












