*ಮಳೆಗಾಲದಲ್ಲಿ ಕಳ್ಳರ ಹಾಗೂ ದರೋಡೆಕಾರರ ಹಾವಳಿ ಹೆಚ್ಚಾಗುವುದರಿಂದ ಕೈಗೊಳ್ಳಬೇಕಾದ ಕೆಲವು ಸುರಕ್ಷಾ ಸಲಹೆಗಳು
*ಮಳೆಗಾಲದಲ್ಲಿ ಕಳ್ಳರ ಹಾಗೂ ದರೋಡೆಕಾರರ ಹಾವಳಿ ಹೆಚ್ಚಾಗುವುದರಿಂದ ಕೈಗೊಳ್ಳಬೇಕಾದ ಕೆಲವು ಸುರಕ್ಷಾ ಸಲಹೆಗಳು*
*1. ಮನೆಯ ಎದುರು ಬಾಗಿಲಿಗೆ ಸೆಂಟರ್ ಲಾಕ್ ಹಾಕಿ ಭದ್ರ ಪಡಿಸಿಕೊಳ್ಳುವುದು.*
*2. ಮನೆಯ ಮುಂಭಾಗ ಹಾಗೂ ಹಿಂಬದಿ ಬಾಗಿಲಿಗೆ ಒಳಗಡೆಯಿಂದ ಕಬ್ಬಿಣದ ಅಡ್ಡ ಪಟ್ಟಿಯನ್ನು ಅಳವಡಿಸುವುದು.*
*3.ಮನೆಯಿಂದ ಕಾರ್ಯಕ್ರಮ, ಜಾತ್ರೆ,ಗಳಿಗೆ ಹೋಗುವಾಗ ಮನೆಯಲ್ಲಿ ಕನಿಷ್ಟ ಪಕ್ಷ ಒಬ್ಬರಾದರೂ ಮನೆಯಲ್ಲಿ ಉಳಿದುಕೊಳ್ಳುವುದು.*
*4.ಗುಜರಿ ಹೆಕ್ಕುವವರು,ಹಾಸಿಗೆ ಮಾರಾಟ, ಬೆಡ್ ಸಿಟ್ ಮಾರಾಟ,ಸ್ಟವ್ ರಿಪೇರಿ ಬಂದಲ್ಲಿ ಅವರ ಆದಾರ್ ಕಾರ್ಡ್ ನ ಪೋಟೋ ಹಾಗೂ ಅವರ ಪೋಟೊ ಮೊಬೈಲ್ ನಲ್ಲಿ ತೆಗೆದಿಡುವುದು.*
*5. ಗ್ಯಾಸ್ ಸಿಲಿಂಡರ್ ಬದಲಿಸುವ ಸಮಯ ಗ್ಯಾಸ್ ಸಿಲಿಂಡರ್ ಗಳನ್ನು ರಸ್ತೆ ಬದಿಯಲ್ಲಿ ಇಟ್ಟು ಹೋಗಬಾರದು.*
*6. ಹಗಲು/ರಾತ್ರಿ ಹೊತ್ತಿನಲ್ಲಿ ಸಂಶಯಾಸ್ಪದವಾಗಿ ಯಾವುದೇ ವಾಹನ ರಸ್ರೆಯಲ್ಲಿ ನಿಂತಿದ್ದರೆ ನೋಂದಣಿ ನಂಬ್ರ ಬರುವಂತೆ ಪೊಟೋ ತೆಗೆದಿಟ್ಟುಕೊಳ್ಳುವುದು.*
*7. ರಸ್ತೆಗೆ ಕಾಣುವಂತೆ ಬಾಗಿಲಿಗೆ, ಗೇಟಿಗೆ ಬೀಗ ಹಾಕಬಾರದು.*
*8. ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡುವುದು.*
*9. ಮುಂಬಾಗಿಲು ಮತ್ತು ಹಿಂಬಾಗಿಲಿಗೆ ಸಮಾನ ಪ್ರಾಮುಖ್ಯತೆ ನೀಡುವುದು.*
*11. ಮನೆಯ ಬಾಗಿಲು ತಟ್ಟಿದಾಗ ,ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡು ವ್ಯವಹರಿಸುವುದು.*
*12. ಅಪರಿಚಿತರು ಮನೆ ಬಳಿ ಬಂದು ನೀರು ವಿಳಾಸ ಇತ್ಯಾದಿ ಕೇಳಲು ಬಂದಾಗ ಅವರಲ್ಲಿ ಜಾಗೃತೆಯಿಂದ ವ್ಯವಹರಿಸುವುದು.*
*13.ನೆರೆಹೊರೆಯವರೊಂದಿಗೆ ಸಂಬಾಷಣೆಯಲ್ಲಿ ತೊಡಗಲು ಅಥವಾ ಸಮಯ ಕಳೆಯಲು ತೆರಳುವಾಗ ಮನೆಗೆ ಮತ್ತು ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡಿ.*
*14. ಮನೆಗಳಲ್ಲಿ ಅಪ್ರಾಪ್ತ ವಯಸ್ಸಿನವರನ್ನು, ವಯೊವೃದ್ದರನ್ನು ಬಿಟ್ಟು ಹೋಗುವುದನ್ನು ತಪ್ಪಿಸಿ.*
*15.ಅಂಚೆ ಕೊರಿಯರ್ ಪಾರ್ಸೆಲ್ ಉಡುಗೊರೆಗಳನ್ನು ಪಡೆದು ಕೊಳ್ಳುವಾಗ ಖಚಿತಪಡಿಸಿಕೊಂಡು ವ್ಯವಹರಿಸಿಕೊಳ್ಳುವುದು.*
*16.ಕಿಟಕಿಯ ಪಕ್ಕ ಬೆಲೆ ಬಾಳುವ ವಸ್ತುಗಳು ಮೊಬೈಲ್ ಫೋನ್ ಇಡುವುದು ತಪ್ಪಿಸಿ.*
*17. ಬೆಲೆ ಬಾಳುವ ವಸ್ತುಗಳನ್ನು ಆದಷ್ಟು ಬ್ಯಾಂಕ್ ಲಾಕರ್ ಗಳಲ್ಲಿ ಇಡುವುದು ಉತ್ತಮ.*
*18. ಮನೆ ಬಾಗಿಲುಗಳಿಗೆ ಮ್ಯಾಜಿಕ್ ಅಲಾರ್ಮ್ ಸಿಸ್ಟಮ್ ಗಳಂತಹ ಸುರಕ್ಷಾ ಸಾಮಾಗ್ರಿಗಳ ಬಗ್ಗೆ ಒತ್ತು ಕೊಡಿ.*
*19. ನೀವು ಮನೆಯಲ್ಲಿ ಮಲಗುವ ಸಮಯದಲ್ಲಿ ಬಾಗಿಲು , ಕಿಟಕಿ ಬೀಗ ಹಾಕಿ ಭದ್ರಪಡಿಸಿರುವುದನ್ನು ಪುನ; ಖಚಿತ ಪಡಿಸಿಕೊಳ್ಳುವುದು.*
*20. ಮನೆಗೆ ಬೀಗ ಹಾಕಿ ಪರ ಊರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದವರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.*
*21. ಹೊಸದಾಗಿ ಬಾಡಿಗೆ ಬರುವ ವ್ಯಕ್ತಿಗಳ ಬಗ್ಗೆ ಮನೆ ಕೆಲಸದವರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಭಾವ ಚಿತ್ರವನ್ನು ಅದಾರ್ ಕಾರ್ಡ್ ,ಅವರ ರಕ್ತ ಸಂಬಂದಿಗಳ ಮೊಬೈಲ್ ನಂ ಪಡೆಯಲು ಮರೆಯಬೇಡಿ.*
*22. ಅನುಮಾನಾಸ್ಪದ ವ್ಯಕ್ತಿ ವಸ್ತು ವಾಹನಗಳ ಬಗ್ಗೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.*
*23.ಚಿನ್ನದ ಒಡವೆಗಳನ್ನು ಪಾಲೀಶ್ ಮಾಡುತ್ತೆನೆಂದು ಚಿನ್ನದ ಒಡವೆ ಮಾರಾಟ ಮಾಡಲು ಮನೆಯ ಬಳಿ ಬರುವವರ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.*
.
*24. ಜನರಿಲ್ಲದ ಪ್ರದೇಶದಲ್ಲಿ ಒಂಟಿಯಾಗಿ ಹೆಂಗಸರು ಓಡಾಡುವುದನ್ನು ಆದಷ್ಟು ತಪ್ಪಿಸುವುದು.*
*25. ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ಬಂದು ವಿಳಾಸ ಕೇಳುವುದು,ಮಾತನಾಡಿಸುವುದು ಪ್ರಯತ್ನ ಮಾಡಿದಾಗ ಎಚ್ಚರದಿಂದ ವ್ಯವಹರಿಸುವುದು.*
26.ಬ್ಯಾಂಕ್ ಅಂಗಡಿ ಪೊಸ್ಟ್ ಆಫಿಸ್ ಬಳಿ ಅಪರಿಚಿತರು *ನಿಮ್ಮ ಹಣ ಕೆಳಗೆ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ ಬಳಿಯಿರುವ ಹಣ ಸುಭದ್ರವಾಗಿದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.*
*27.ಮೋಹಕ್ಕೆ ಬಲಿಯಾಗಿ ಸುಲಿಗೆಗೆ ಒಳಗಾಗಬೇಡಿ, ಒಂಟಿಯಾಗಿ ಓಡಾಡಿವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರದ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈ ಗೆಟುಕುವ ಅಂತರದಲ್ಲಿ ನಿಲ್ಲಬೇಡಿ.*
*28. ಜನನಿಬಿಡ ಪ್ರದೇಶದಲ್ಲಿ ಪಾರ್ಕ್ , ಕತ್ತಲೆಯಲ್ಲಿ ಕುಳಿತುಕೊಳ್ಳುವ ಹವ್ಯಾಸ ತಪ್ಪಿಸಿ.*
*29. ಅಪರಿಚಿತರು ನಂಬಿಸುವ ಅತೀಂದ್ರ ಶಕ್ತಿಗಳು , ಮಹಾನ್ ಪುರುಷರೆಂದು ಹೇಳಿದಾಗ ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಅವರ ನಿಯಂತ್ರಣಕ್ಕೆ ಒಳಗಾಗಿ ಮೋಸ ಹೋಗಬೇಡಿ.*
*30. ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ.*
*31. ವಾಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆಮಾಡಿಕೊಳ್ಳಿ.*
*32. ಅನಾವಶ್ಯವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ ಕಳ್ಳರನ್ನು ಆಕರ್ಶಿಸಬೇಡಿ.*
33. ಆನ್‌ಲೈನ್ ವಂಚನೆ ಬಗ್ಗೆ ಎಚ್ಚರಿಕೆಯಿಂದ ಇರಿ.
34. ಅಗತ್ಯ ಸಮಯದಲ್ಲಿ 112 ಗೆ ಕರೆ ಮಾಡಿ ನಿಮ್ಮ ಸಮಸ್ಯೆ ಯನ್ನು ತಿಳಿಸಿ.












