*ಮುಸ್ಲಿಂ ವಿವಾಹ ನೋಂದಣಿ ಸರ್ಟಿಫಿಕೇಟ್ (Registered Marriage Certificate) ನೋಂದಾಯಿಸುವವರ ಗಮನಕ್ಕೆ.*
-ಆಶಿಕ್ ಕುಕ್ಕಾಜೆ
ಇತ್ತೀಚೆಗೆ ವಕ್ಫ್ ಬೋರ್ಡ್ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ, ಹಲವರು ತೊಂದರೆಗೆ ಒಳಗಾಗಿದ್ದಾರೆ. ನೋಂದಣಿ ಇಲಾಖೆಯಲ್ಲಿ *Special Marriage (other forms)* ನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಇದ್ದರೂ ಮಾಹಿತಿ ಕೊರತೆಯಿಂದ ಹಲವರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ನೋಂದಣಿ ಕಚೇರಿಯಿಂದ ಸರ್ಟಿಫಿಕೇಟ್ ಪಡೆಯಲು 30 ದಿನ ಸಮಯ ತೆಗೆದುಕೊಳ್ಳುತ್ತದೆ. ಅರ್ಜಿ ಹಾಕಿದ 30 ದಿನದ ನಂತರ 90 ದಿನದ ಒಳಗೆ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. 30 ದಿನಗಳ ನೋಟಿಸ್ ಅವಧಿ ಖಡ್ಡಾಯವಾಗಿರುತ್ತದೆ. ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರು ನೋಂದಣಿ ಕಚೇರಿಗೆ ಹಾಜರಾಗಬೇಕಾಗುತ್ತದೆ.
*ವಿವಾಹ ಆದ ನಂತರವೇ ಅರ್ಜಿ ಹಾಕಬೇಕೆಂದಿಲ್ಲ.*
ಕೆಲವರು ವಿವಾಹವಾಗಿ 10-15 ದಿನದಲ್ಲಿ ವಿದೇಶ ಪ್ರಯಾಣಿಸುವವರು ಇದ್ದಾರೆ. ಅಂತವರು ಮದುವೆಗೆ ಮುಂಚಿತವಾಗಿ *Special Marriage (Intended Marriage Notice)* ನಲ್ಲಿ ನೋಂದಾಯಿಸಬಹುದು. 30 ದಿನದ ನಂತರ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.
*ಬೇಕಾದ ದಾಖಲೆಗಳು*
ವಿವಾಹ ನಂತರ ಅರ್ಜಿ ಹಾಕುವವರು Special Marriage (other forms)
* ಶಾಲಾ ದಾಖಲಾತಿ ಅಥವಾ ಜನನ ಪ್ರಮಾಣ ಪತ್ರ.
* ವಿಳಾಸದ ದಾಖಲೆಗಾಗಿ ರೇಶನ್ ಕಾರ್ಡ್/ಆಧಾರ್ ಕಾರ್ಡ್/ವೋಟರ್ ಐಡಿ/ಪಾಸ್ಪೋರ್ಟ್ ಯಾವುದಾದರೂ ಒಂದು.
* ನಿಖಾಹ್ ನಾಮ ಮತ್ತು ಆಮಂತ್ರಣ ಪತ್ರಿಕೆ (Invitation card)
* ಗಂಡ ಹೆಂಡತಿ ಜೊತೆಗೆ ಇರುವ ಪೊಟೊ
* 3 ಸಾಕ್ಷಿದಾರರ ಆಧಾರ್ ಕಾರ್ಡ್.
ವಿವಾಹದ ಮೊದಲು ಅರ್ಜಿ ಹಾಕುವವರು) Special Marriage (Intended Marriage Notice)
* ಶಾಲಾ ದಾಖಲಾತಿ ಅಥವಾ ಜನನ ಪ್ರಮಾಣ ಪತ್ರ.
* ವಿಳಾಸದ ದಾಖಲೆಗಾಗಿ ರೇಶನ್ ಕಾರ್ಡ್/ಆಧಾರ್ ಕಾರ್ಡ್/ವೋಟರ್ ಐಡಿ/ಪಾಸ್ಪೋರ್ಟ್ ಯಾವುದಾದರೂ ಒಂದು.
* ಇಬ್ಬರ ಪೊಟೊ
* 3 ಸಾಕ್ಷಿದಾರರ ಆಧಾರ್
*-ಆಶಿಕ್ ಕುಕ್ಕಾಜೆ*
+91 9591557448












