“ಕನ್ನಡ ನಾಡಿನ ಪರಮಪವಿತ್ರ
ಆಧ್ಯಾತ್ಮಿಕ ಸಿರಿಯೇ ಸಿರಿಗೆರೆ”

ತರಳಬಾಳು ಜಗದ್ಗುರುಗಳಾದ ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ಬಸವಾದಿ ಶರಣರ ಸಾಮಾಜಿಕ ಕ್ರಾಂತಿಯ ಹಾದಿಯಲ್ಲಿಯೇ ಸಿರಿಗೆರೆಯಲ್ಲಿ ವಿಶ್ವಬಂಧು ಗೌರವ ಪಡೆದ ಮರುಳ ಸಿದ್ಧರಂತಹ ಪುಣ್ಯ ಪುರುಷರು ಬೆಳಗಿದ ಜ್ಯೋತಿ ಇಂದು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಮೂಲಕ ಪ್ರಜ್ವಲಿಸಿ ಲಕ್ಷಾಂತರ ಭಕ್ತರು ಹಾಗೂ ವಿದ್ಯಾರ್ಥಿಗಳಿಗೆ ಬದುಕಿನ ಮಾರ್ಗ ತೋರಿಸಿಕೊಡುತ್ತಿದೆ ಎಂದರೆ ಅದು ಸಿರಿಗೆರೆ ಬೃಹನ್ಮಠದ ಆಧ್ಯಾತ್ಮಿಕ ಶಕ್ತಿ. ಸ್ವತಃ ಮಹಾನ್ ವಿದ್ವತ್ ಸಾಧನೆ ಮಾಡಿರುವ ಪೂಜ್ಯ ಶ್ರೀಗಳು ಸಮ ಸಮಾಜವನ್ನು ಕಟ್ಟಲು ತ್ರಿವಿಧ ದಾಸೋಹದ ಕ್ರಾಂತಿಯ ಜೊತೆಗೆ ಕೈಗೊಂಡಿರುವ ಜಲ ಕ್ರಾಂತಿಯಂತಹ ಮಹತ್ ಕಾರ್ಯಗಳನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ Govind M Karjol, ಹಿರಿಯ ಕಲಾವಿದರಾದ ಶ್ರೀ ಮುಖ್ಯಮಂತ್ರಿ ಚಂದ್ರು, ಶಾಸಕರಾದ ಶ್ರೀ ಬಿ.ಪಿ ಹರೀಶ್, ಶ್ರೀ ಡಿ.ಸಿ.ತಮ್ಮಯ್ಯ, ಶ್ರೀ ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ನವೀನ್, ಶ್ರೀ ಧನಂಜಯ ಸರ್ಜಿ, ವಕೀಲರಾದ ಶ್ರೀ ಸಂದೀಪ್ ಪಾಟೀಲ್, ವಿವಿಧ ಮಠಗಳ ಪರಮಪೂಜ್ಯರು ಹಾಗೂ ಹರಗುರು ಚರಮೂರ್ತಿಗಳು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

Vijayendra yediyurapa

State president BJP, Karnataka