ಉಳಾಲದ ನಾಗರಿಕರಿಗೆ  ರಿಯಾಯಿತಿ ದರದಲ್ಲಿ ವೈದ್ಯಕೀಯ ಸೇವ
ಉಳಾಲ ಸೆಂಟ್ರಲ್ ಕಮಿಟಿ ಮೂಲಕ  ಉಳಾಲದ ನಾಗರಿಕರಿಗೆ  ಉಚಿತವಾಗಿ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಈ ಕಾರ್ಡ್ ಹೊಂದಿದವರು
ದೇರಳಕಟ್ಟೆಯ ಕನಚೂರು ಆಸ್ಪತ್ರೆಯ  ಹಲವು ಸೌಲಭ್ಯಗಳು ಉಚಿತ ಮತ್ತು ಕೆಲವು ಸೌಲಭ್ಯಗಳು ರಿಯಾಯಿತಿ ದರದಲ್ಲಿ ಸಿಗಲಿದೆ. ಆಸ್ಪತ್ರೆಯಲ್ಲಿ ಆರೋಗ್ಯ ಸಂಬಂಧ ವಿವಿಧ ಸಮಸ್ಯೆಗಳಿಗೆ ಒಳರೋಗಿ ಮತ್ತು ಹೊರಗೆ ರೋಗಿ ಗಳು ಇದರ ಉಪಯೋಗ ಪಡೆಯಬಹುದು.  ಮೊದಲ ಬಾರಿ 100  ಜನರಿಗೆ ಉಚಿತವಾಗಿ ಕಾರ್ಡ್ ವಿತರಿಸಲಾಗುವುದು. ಮುಂದೆ ಹಂತ ಹಂತವಾಗಿ ಅಗತ್ಯಾನುಸಾರ ಕಾರ್ಡ್ ಸಂಖ್ಯೆಗಳು ಹೆಚ್ಚಿಸಲಾಗುವುದು. ಆಸಕ್ತರು ಇದರ ಸದುಪಯೋಗ ಪಡೆಬಹುದು ಎಂದು ಉಳ್ಳಾಲ ಸೆಂಟ್ರಲ್ ಕಮಿಟಿ ಅಧ್ಯಕ್ಷ ನವಾಝ್ ಉಳಾಲ್ ತಿಳಿಸಿದ್ದಾರೆ.  ಆಸಕ್ತ ಬಡವರು  ಈ ಕೆಳಗಿನ ದೂರವಾಣಿ ಸಂಖ್ಯೆ ಮೂಲಕ ಕಮಿಟಿಯ ಪದಾಧಿಕಾರಿಗಳ ಮೊಬೈಲ್ ಸಂಖ್ಯೆ ಯಲಿ ಸಂಪರ್ಕಿಸಬಹುದು. ನವಾಝ್ ಉಳಾಲ್  – 9620733737.  ಮುಸ್ತಫ – =9164521920,   ಕೌನ್ಸಿಲರ್ ಜಬ್ಬಾರ್- 9620391666.