ಸ್ವಸ್ಥ ಸಮಾಜದ ನಿರ್ಮಾಣ ನಮ್ಮದಾಗಲಿ – ಡಾ ವಿಶ್ವನಾಥ್

ಮಾನವೀಯತೆಗೆ ಆದ್ಯತೆ ನೀಡೋಣ – ಮೇಯರ್ ಮನೋಜ್ ಕುಮಾರ್

ಮಂಗಳೂರು, ಜ.9 : ದಿ. ಸಾರಾ ಅಬೂಬಕರ್ ಸಂಸ್ಮರಣ ವೇದಿಕೆ – ನಾಡು ನುಡಿಯ ವಿಷದಲ್ಲಿ ನಾವು ವಿಶಾಲ ಮನೋಭಾವ ಹೊಂದಿರಬೇಕು, ಎಲ್ಲವನ್ನು ಮಾನವೀಯತೆ ದೃಷ್ಟಿಯಿಂದ ನೋಡಬೇಕು. ಕಲೆ ಮತ್ತು ಸಂಸ್ಕೃತಿ ಪೋಷಣೆಯಿಂದ ವ್ಯಕ್ತಿಯು ಉದಾರ ಮನೋಭಾವ ಬೆಳೆಸಿಕೊಳ್ಳುತ್ತಾನೆ. ಅಂಥವರು ಸಮಾಜದ ಆಸ್ತಿಯಾಗುತ್ತಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಮನೋಜ್ ಕುಮಾರ್ ಅವರು 20ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

9 ಜನವರಿ,2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರ ಭವನದಲ್ಲಿ ಮಂಜುನಾಥ್ ಎಜುಕೇಶನ್ ಟ್ರಸ್ಟ್ ರಿ., ಹೃದಯವಾಹಿನಿ ಮಂಗಳೂರು ಮತ್ತು ಎಸ್ ಕೆ ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ರಿ. ಸಂಯುಕ್ತವಾಗಿ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸಮ್ಮೇಳನವನ್ನು ಆಯೋಜಿಸಿದ್ದವು.

ಸಮ್ಮೇಳನಾಧ್ಯಕ್ಷರಾದ ನಿವೃತ್ತ ಜಿಲ್ಲಾಧಿಕಾರಿ ಮತ್ತು ಖ್ಯಾತ ಲೇಖಕರಾದ ಡಾ. ಡಿ.ಎಸ್ ವಿಶ್ವನಾಥ್ ತಮ್ಮ ಭಾಷಣದಲ್ಲಿ , ಪ್ರತಿಯೊಬ್ಬರಲ್ಲೂ ಅಧ್ಯಯನಶೀಲತೆ ನಿರಂತರವಾಗಿರಬೇಕು ಅದು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ದೃಢತೆ ಮತ್ತು ಧೈರ್ಯವನ್ನು ಕೊಡುತ್ತದೆ. ಇದರಿಂದ ಸ್ವಸ್ಥ ಮತ್ತು ಸೌಹಾರ್ದತೆಯ ಸಮಾಜದ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ ಪಿ ಮಂಜುನಾಥ್ ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ 2004 ರಿಂದ ಈವರೆಗೆ 19 ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಕರುನಾಡು ಮತ್ತು ಹೊರನಾಡ ಕನ್ನಡಿಗರ ನಡುವೆ ಸಾಹಿತ್ಯ ಮತ್ತು ಸಾಂಸ್ಕೃತಿ ಸೇತುವೆಯಾಗಿ ಸಮ್ಮೇಳನವನ್ನು ರೂಪಿಸಲಾಗಿದೆ. ಈ ಉದ್ದೇಶಕ್ಕೆ ಸಿಗುತ್ತಿರುವ ಹೊರನಾಡ ಕನ್ನಡಿಗರ ಅನನ್ಯ ಬೆಂಬಲ ನಿರಂತರವಾಗಿರುವುದರಿಂದ ಸಂಸ್ಥೆ ರಜತಮಹೋತ್ಸವದತ್ತ ದಾಪುಗಾಲನ್ನಿಡುತ್ತಿದೆ ಎಂದರು.

ವೇದಿಕೆಯಲ್ಲಿದ್ದ ಗಣ್ಯರಾದ ನಿವೃತ್ತ ಪೊಲೀಸ ಅಧಿಕಾರಿ ಶ್ರೀ ಜಿ. ಎ ಬಾವ, ಎಸ್ ಕೆ ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ಪೂರ್ವಾಧ್ಯಕ್ಷ ಶ್ರೀ ಶಿವರಾಜ್ ಪಾಂಡೇಶ್ವರ, ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರಾದ ಮೊಹಮ್ಮದ್ ಹಾಜಿ ಕುಕ್ಕುಳ್ಳಿ, ಅಮೃತಾ ಪ್ರಕಾಶ ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಮತ್ತು ಪೋಲಿ ಆಂತರಿಕ ಭದ್ರತಾ ವಿಭಾಗದ ಏಎಸ್ಐ ಗೋಪಾಲ ಕೃಷ್ಣ ಬಜ್ಪೆ ಸಾಂದರ್ಭಿಕವಾಗಿ ಮಾತನಾಡಿದರು.

ವಿವಿಧ ಕ್ಷೇತ್ರದ ಸಾಧನ ಶೀಲರಾದ ಕತಾರ್ ಅನಿವಾಸಿ ಕನ್ನಡಿಗ ದಿವಾಕರ್ ಪೂಜಾರಿ ಉಡುಪಿ, ಬಾಳೆಹೊನ್ನೂರಿನ ಶ್ರೀ ಅಬ್ದುಲ್ ರೆಹಮಾನ್ ಮತ್ತು ಜೋಹರ ದಂಪತಿ, ಶಿವಮೊಗ್ಗದ ಪ್ರಗತಿಪರ ಕೃಷಿಕ ಕೆ ಸಿ ಮೂರ್ತಿ ಮತ್ತು ತಾರಸಿ ತೋಟ ಕೃಷಿಕ ಕೃಷ್ಣಪ್ಪ ಗೌಡ ಪಡ್ಡಂಬೈಲು ಇವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಂಸ್ಕೃತಿಯ ಕಾರ್ಯಗಳ ಅಂಗವಾಗಿ ನಾಮದೇವ್ ಮತ್ತು ತಂಡದವರಿಂದ ಚೆಂಡೆ ವಾದನ ಪ್ರದರ್ಶನ,
ಬೆಂಗಳೂರಿನ ಸುರಣ್ಯ ಸುರಭಿ ಡಾನ್ಸ್ ಅಂಡ್ ಮ್ಯೂಸಿಕಲ್ ಅಕಾಡೆಮಿಯ ವಿಶೇಷ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜ್ಞಾನ ಮಂದಾರ ಅಕಾಡೆಮಿ ಹೊಡಿಪು ಮತ್ತು ಉಜಿರೆ ಮಕ್ಕಳಿಂದ ವೈವಿಧ್ಯಮಯ ನೃತ್ಯಗಳು, ದುರ್ಗಾ ಸ್ವಾತಿ ನೃತ್ಯಾಲಯ ಅಸೈಗೋಳಿ ಕಲಾವಿದರಿಂದ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡವು.

ಮಸ್ಕಟ್ ನ ಅನಿವಾಸಿ ಸಾಹಿತಿ ಆನ್ಸಾರ್ ಕಾಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು ಕವಿಗಳಾದ ಎಚ್ ಭೀಮರಾವ್ ವಾಷ್ಠರ್ ಸುಳ್ಯ, ಆರ್ ಎನ್ ಗೋಗೇರಿ ಹುಬ್ಬಳ್ಳಿ, ಡಾ ಸುರೇಶ್ ನೆಗಲಗುಳಿ, ಎನ್ ನಾಗೇಂದ್ರ ಮಂಗಳೂರು, ಎಂಎಸ್ ವೆಂಕಟೇಶ್ ಗಟ್ಟಿ ಸೌದಿ ಅರೇಬಿಯಾ, ವೀಣಾ ರಾಜ್ ವಾಮಂಜೂರು, ಕಸ್ತೂರಿ ಜಯರಾಮ್ ಕಾವೂರು ಮತ್ತು ಹರಿಣಾಕ್ಷಿ ಕಾಶಿಪಟ್ಟಣ ತಮ್ಮ ಕವನಗಳನ್ನು ಅರ್ಥಗರ್ಭಿತವಾಗಿ ಪ್ರಸ್ತುತಪಡಿಸಿದರು.

ಮಹಿಳೆಯರಿಗಾಗಿ ನಡೆದ ರಂಗೋಲಿ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಲಿಖಿತ ರಸಪ್ರಶ್ನೆ ಸ್ಪರ್ಧೆಯ ತೀರ್ಪುಗಾರರಾಗಿ ಸುಧಾಕರ್ ನಾಯಕ್ ಸುರತ್ಕಲ್, ಉಪನ್ಯಾಸಕಿ ಡಾ. ವಿಜಯಲಕ್ಷ್ಮಿ ಮತ್ತು ಪ್ರತಿಭಾ ಸಾಲಿಯಾನ್ ಮಂಗಳೂರು ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಿದರು
ನಟರಾಜ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು

ಕತಾರ್ ಅನಿವಾಸಿ ಕನ್ನಡಿಗ ಸಮಾಜ ಸೇವೆ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಕೊಡುಗೆಗಾಗಿ ಗೌರವ ಪ್ರಶಸ್ತಿ ಪ್ರದಾನ.

ನಾಮದೇವ್ ಮತ್ತು ತಂಡದವರಿಂದ ತಿಂಡಿ ವಾದನ ಪ್ರದರ್ಶನ.

ಜ್ಞಾನ ಮಂದಾರ ಅಕಾಡೆಮಿ ಮುಡಿಪು ಮತ್ತು ಉಜಿರೆ ಕಲಾವಿದರಿಂದ ನೃತ್ಯರೂಪಕ