ಉಳ್ಳಾಲ ಜನವರಿ 5, ಇಲ್ಲಿನ ಸೆಂಟ್ರಲ್ ಕಮಿಟಿ ವತಿಯಿಂದ ಕನ್ನಡಕ ವಿತರಣೆ ಸರಳ ಸಮಾರಂಭ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು.   ಕನಚೂರು ಆಸ್ಪತ್ರೆಯ ಸಹಯೋಗದಲ್ಲಿ ಇತ್ತೀಚಿಗೆ  . ಕರಾವಳಿ ಕರ್ನಾಟಕದ ಖ್ಯಾತ ಸಮಾಜ ಸೇವಕ ಮರುಹುಮ್ ಬಿ ಎಂ ಮುಮ್ತಾಜ್ ಅಲಿ ನೆನಪಿಗಾಗಿ ವೈದ್ಯಕೀಯ ತಪಾಸಣಾ ಶಿಬಿರ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಕಣ್ಣಿನ ಪರೀಕ್ಷೆ ನಡೆಸಲಾಗಿತ್ತು.

ಆ ಫಲಾನುಭವಿಗಳಿಗೆ ಇಂದು ಕನ್ನಡಕ ವಿತರಿಸಲಾಯಿತು. ಅಧ್ಯಕ್ಷ ನವಾಜ್ ಉಳಾಲ್ ರವರು ಕಾರ್ಯಕ್ರಮದ ಅಧ್ಯಕ್ಷ್ಯ ಭಾಷಣೆ ಮಾಡಿದರು.ಉಪಾಧ್ಯಕ್ಷ  ತಾಹಾ  ಹಾಜಿ ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಎವರೆಸ್ಟ್ ಮುಸ್ತಫ ಸ್ವಾಗತಿಸಿದರು. ಕೌನ್ಸಿಲರ್ ಜಬ್ಬಾರ್ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೌನ್ಸಿಲರ್ ಬಶೀರ್ ಉಲ್ಲಾಳ, ಇಸ್ಮಾಯಿಲ್, ರೆಹ್ಮಾನ್  ಮತ್ತು ಟ್ರಸ್ಟಿನ ಪದಾಧಿಕಾರಿಗಳು ಭಾಗವಹಿಸಿದ್ದರು