ಭಾರತ ಇಂದು ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸುತ್ತಿದೆ ಮತ್ತು ಹಳೆಯ ವಸಾಹತುಶಾಹಿ ಆದರ್ಶಗಳಿಂದ ವಿಮುಖವಾಗುತ್ತಿದೆ: ಉಪರಾಷ್ಟ್ರಪತಿ 

ಭಾರತೀಯ ಸಾರ್ವಜನಿಕ ಆಡಳಿತವು ವಸಾಹತುಶಾಹಿ ಮನಸ್ಥಿತಿಯಿಂದ ದೂರವಿರುವ ಭಾರತೀಯ ಗುಣಲಕ್ಷಣಗಳನ್ನು ಹೊಂದಿರಬೇಕು : ಉಪರಾಷ್ಟ್ರಪತಿ
ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸಾಂಸ್ಕೃತಿಕ ಸಾಮರ್ಥ್ಯವು ಸರ್ಕಾರಿ ಅಧಿಕಾರಿಗಳಿಗೆ ಅಂಚಿನಲ್ಲಿರುವ ಮತ್ತು  ಹಿಂದುಳಿದವರ ಹೋರಾಟಗಳನ್ನು ಅರ್ಥಮಾಡಿಕೊಳ್ಳಲು ಅವಶ್ಯಕ: ಉಪರಾಷ್ಟ್ರಪತಿ

ಸಾರ್ವಜನಿಕ ಆಡಳಿತದಲ್ಲಿ ತಂತ್ರಜ್ಞಾನದ ಅಳವಡಿಕೆಯು ಅಂತರ್ಗತವಾಗಿರಬೇಕು ಮತ್ತು ‘ಅಂತ್ಯೋದಯ’ ದಿಂದ ಪ್ರೇರಿತವಾಗಿರಬೇಕು : ಉಪರಾಷ್ಟ್ರಪತಿ
ಕಲ್ಯಾಣ ನೀತಿಗಳ ಪ್ರಭಾವವನ್ನು ಮೌಲ್ಯಮಾಪನ ಮಾಡಲು ಪುರಾವೆ ಆಧಾರಿತ ಅಧ್ಯಯನಗಳು ಅತ್ಯಗತ್ಯ ಎಂದು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು
<ನೀತಿ ನಿರೂಪಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಹಾನುಭೂತಿ ಮತ್ತು ಸೂಕ್ಷ್ಮ ಆಡಳಿತವನ್ನು ಉತ್ತೇಜಿಸುತ್ತದೆ ಎಂದು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು

<span;>ಐಐಪಿಎ ಮಹಾಸಭೆಯ 70ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಉಪರಾಷ್ಟ್ರಪತಿಗಳು ಮಾತನಾಡಿದರು

<span;>ಭಾರತವು ವಸಾಹತುಶಾಹಿ ಮನಸ್ಥಿತಿಯನ್ನು ತ್ವರಿತವಾಗಿ ತೊರೆಯುತ್ತಿದೆ, ನಾವು ಈಗ ಹಳೆಯ ವಸಾಹತುಶಾಹಿ ಆದರ್ಶಗಳು ಮತ್ತು ಸಂಕೇತಗಳನ್ನು ಧಿಕ್ಕರಿಸುತ್ತಿದ್ದೇವೆ ಮತ್ತು ಸ್ವತಂತ್ರವಾದ ನಂತರ ಭಾರತೀಯ ಸಾರ್ವಜನಿಕ ಆಡಳಿತವು ವಸಾಹತುಶಾಹಿ ಮನಸ್ಥಿತಿಯಿಂದ ದೂರವಿದ್ದು, ನಮ್ಮ ಆಶಯಗಳೊಂದಿಗೆ ಭಾರತೀಯ ಗುಣಲಕ್ಷಣಗಳನ್ನು ಹೊಂದಿರಬೇಕು ಎಂದು ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಹೇಳಿದರು.

<span;><span;>ನವದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಐಐಪಿಎ) ಸಂಸ್ಥೆಯ 70ನೇ ವಾರ್ಷಿಕ ಸಭೆಯಲ್ಲಿ ಇಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು “ಸ್ವತಂತ್ರವಾದ ನಂತರ ಭಾರತೀಯ ಸಾರ್ವಜನಿಕ ಆಡಳಿತವು ವಸಾಹತುಶಾಹಿ ಮನಸ್ಥಿತಿಯಿಂದ ದೂರವಿರುವ ನಮ್ಮ ಆಶಯಗಳೊಂದಿಗೆ ಹೊಂದಿಕೆಯಾಗುವ ಭಾರತೀಯ ಗುಣಲಕ್ಷಣಗಳನ್ನು ಹೊಂದಿರಬೇಕು.  ಒಟ್ಟಾರೆ ಆದ ಅಭಿವೃದ್ಧಿಯನ್ನು ನೋಡಿ, ವಿಶೇಷವಾಗಿ ಕಳೆದ ದಶಕದಲ್ಲಿ.

>”ನಾವು ಈಗ ಹಿಂದಿನ ವಸಾಹತುಶಾಹಿ ಕಲ್ಪನೆಗಳು ಮತ್ತು ಚಿಹ್ನೆಗಳನ್ನು ಧಿಕ್ಕರಿಸುತ್ತಿದ್ದೇವೆ. ಕಿಂಗ್ಸ್ ವೇ ಈಗ ʼಕರ್ತವ್ಯ ಪಥʼವಾಗಿದೆ ಮತ್ತು ರೇಸ್ ಕೋರ್ಸ್ ರಸ್ತೆಯು ʼಲೋಕ ಕಲ್ಯಾಣ ಮಾರ್ಗʼವಾಗಿದೆ. ಒಂದು ಕಾಲದಲ್ಲಿ ಕಿಂಗ್ ಜಾರ್ಜ್ ಅವರ ಪ್ರತಿಮೆ ಇದ್ದ ಮೇಲಾವರಣದಲ್ಲಿ ನೇತಾಜಿ ಈಗ ನಿಂತಿದ್ದಾರೆ. ನಮ್ಮ ತ್ರಿವರ್ಣ ಧ್ವಜವನ್ನು ಸೇರಿಸಲು ಭಾರತೀಯ ನೌಕಾಪಡೆಯ ಚಿಹ್ನೆಯನ್ನು ಬದಲಾಯಿಸಲಾಗಿದೆ. 1500 ವಸಾಹತುಶಾಹಿ ಯುಗದ ಶಾಸನಗಳು ಇನ್ನು ಮುಂದೆ ಕಾನೂನು ಪುಸ್ತಕದಲ್ಲಿರುವುದಿಲ್ಲ.

ಹೊಸ ಕ್ರಿಮಿನಲ್ ಕಾನೂನುಗಳು – ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ ಎಸ್ ಎಸ್), ಮತ್ತು ಭಾರತೀಯ ಸಾಕ್ಷಿ ಅಧಿನಿಯಮ – ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ವಸಾಹತುಶಾಹಿ ಪರಂಪರೆಯಿಂದ ಕಳಚಿದೆ. ಸಂತ್ರಸ್ತರ ಹಿತಾಸಕ್ತಿಗಳನ್ನು ರಕ್ಷಿಸಲು, ಕಾನೂನು ಕ್ರಮವನ್ನು ಸಮರ್ಥವಾಗಿ ನಿರ್ವಹಿಸಲು, ಇತರ ಹಲವು ಅಂಶಗಳ ನಡುವೆ ಸುಧಾರಣೆಗಳನ್ನು ಪರಿಣಾಮ ಬೀರುವ ‘ದಂಡ’ ಸಂಹಿತೆ ಈಗ ‘ನ್ಯಾಯ’ ಸಂಹಿತೆಯಾಗಿ ಮಾರ್ಪಟ್ಟಿರುವುದು ಒಂದು ಸ್ಮರಣೀಯ ಮತ್ತು ಕ್ರಾಂತಿಕಾರಿ ಬದಲಾವಣೆಯಾಗಿದೆ. ಭಾರತವು ವಸಾಹತುಶಾಹಿ ಮನಸ್ಥಿತಿಯನ್ನು ತ್ವರಿತವಾಗಿ ತೊಡೆದುಹಾಕುತ್ತಿದೆ. ಈಗ ನಿಮಗೆ ವೈದ್ಯಕೀಯ ಅಥವಾ ತಂತ್ರಜ್ಞಾನವನ್ನು ಕಲಿಯಲು ಇಂಗ್ಲಿಷ್ ನ  ಅಗತ್ಯವಿಲ್ಲ” ಎಂದು ಅವರು ಹೇಳಿದರು

2022ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಮಂತ್ರಿಯವರು ಪುನರುಚ್ಚರಿಸಿದ ‘ಪಂಚ ಪ್ರಾಣʼಗಳನ್ನು ನೆನಪಿಸಿಕೊಂಡ ಶ್ರೀ ಧನಕರ್ ಅವರು, “. ನಾವು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತ ಭಾರತವನ್ನು ನಿರ್ಮಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿಯವರು ನಮಗೆ ನೆನಪಿಸಿದರು. ಆ ನಿಟ್ಟಿನಲ್ಲಿ ಪಂಚ ಪ್ರಾಣ ಅಥವಾ ಐದು ಸಂಕಲ್ಪಗಳನ್ನು ನೀಡಿದರು. (ಎ) ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ, (ಬಿ) ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹುಗಳನ್ನು ತೆಗೆದುಹಾಕುವುದು, (ಸಿ) ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು, (ಡಿ) ನಮ್ಮ ಏಕತೆಯ ಶಕ್ತಿ ಮತ್ತು (ಇ) ಪ್ರಾಮಾಣಿಕತೆಯಿಂದ ನಾಗರಿಕರ ಕರ್ತವ್ಯಗಳನ್ನು ಪೂರೈಸುವುದು. ಈ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ನಮ್ಮ ಸಾರ್ವಜನಿಕ ಆಡಳಿತವು ರಾಷ್ಟ್ರೀಯ ಮನಸ್ಥಿತಿ ಮತ್ತು ಮನೋಭಾವದೊಂದಿಗೆ ಹೊಂದಿಕೆಯಾಗುವುದಿಲ್ಲ.” ಎಂದು ಹೇಳಿದರು.

ಸಾರ್ವಜನಿಕ ಅಧಿಕಾರಿಗಳಲ್ಲಿ ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಮೃದುಕೌಶಲ್ಯಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಾ, ಶ್ರೀ ಧನಕರ್ ಹೇಳಿದರು, “ಇದರ ತರಬೇತಿ ಪಡೆಯುವವರ ಭಾವನಾತ್ಮಕ ಬುದ್ಧಿವಂತಿಕೆಯ ಮೇಲೆ ಹೆಚ್ಚು ಗಮನಹರಿಸಿ. ಸಾರ್ವಜನಿಕ ಅಧಿಕಾರಿಗಳಲ್ಲಿ ಮೃದು ಕೌಶಲ್ಯಗಳು, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸಾಂಸ್ಕೃತಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ನಿರ್ಣಾಯಕವಾಗಿದೆ ಆದ್ದರಿಂದ ಅಧಿಕಾರಿಗಳು ಅಂಚಿನಲ್ಲಿರುವ ಮತ್ತು ಹಿಂದುಳಿದವರ ಹೋರಾಟಗಳನ್ನು ಅರ್ಥಮಾಡಿಕೊಳ್ಳಬಹುದು; ಆ ಸವಾಲುಗಳನ್ನು ನಿಜವಾಗಿಯೂ ಪರಿಹರಿಸುವ ನೀತಿಗಳನ್ನು ವಿನ್ಯಾಸಗೊಳಿಸಿ ಮತ್ತು ಕಾರ್ಯಗತಗೊಳಿಸಿರಿ.” ಎಂದು ಹೇಳಿದರು.

ತಮ್ಮ ಭಾಷಣದಲ್ಲಿ, ನಾಗರಿಕ ಸೇವಕರ ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಹೆಚ್ಚಿಸುವ ಮತ್ತು ನೈತಿಕ ನಾಯಕತ್ವವನ್ನು ಬಲಪಡಿಸುವ ಅಗತ್ಯದ ಬಗ್ಗೆ ಶ್ರೀ ಧನಕರ್ ಅವರು ಒತ್ತಿ ಹೇಳಿದರು, ನೈತಿಕ ಮಾನದಂಡಗಳು ನಮ್ಮ ನಾಗರಿಕತೆಗೆ ಮೂಲಭೂತವಾಗಿವೆ ಮತ್ತು ಅವರು ಪ್ರಲೋಭನೆಯನ್ನು ವಿರೋಧಿಸುವ ನಿರಂತರ ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು.

ಸಾರ್ವಜನಿಕ ಆಡಳಿತದಲ್ಲಿ ತಂತ್ರಜ್ಞಾನದ ಅಳವಡಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, “ನಮ್ಮ ತರಬೇತಿ ಕಾರ್ಯಕ್ರಮಗಳು [ಐಐಪಿಎ] ಮತ್ತು ಸಂಶೋಧನಾ ಉಪಕ್ರಮಗಳು ಸಾರ್ವಜನಿಕ ಸೇವೆ ವಿತರಣೆಯಲ್ಲಿ ನೈತಿಕ ಮತ್ತು ಜವಾಬ್ದಾರಿಯುತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಾಗ ಕೃತಕ ಬುದ್ಧಿಮತ್ತೆ, ಬ್ಲಾಕ್ ಚೈನ್ ಮತ್ತು ದಂತ್ತಾಂಶ ವಿಶ್ಲೇಷಣೆಯಂತಹ  ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಬೇಕು. . ಪರಿಣಾಮಕಾರಿ ಸಾರ್ವಜನಿಕ ಆಡಳಿತದ ಮೂಲಾಧಾರವೆಂದರೆ ನಿರಂತರ ಕಲಿಕೆ ಮತ್ತು ಸಾಮರ್ಥ್ಯ ವೃದ್ಧಿ.”

ಡಿಜಿಟಲ್ ಕೊರತೆ ಮತ್ತು ಅಂತರ್ಗತ ವಿಧಾನದ ಅಗತ್ಯದ ಬಗ್ಗೆ ಗಮನ ಸೆಳೆದ ಶ್ರೀ ಧನಕರ್, “ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಾಗ, ಅದು ಮತ್ತಷ್ಟು ವಿಭಜನೆಗಳನ್ನು ಸೃಷ್ಟಿಸದಂತೆ  ನಾವು ಖಚಿತಪಡಿಸಿಕೊಳ್ಳಬೇಕು. ಕ್ಷಿಪ್ರವಾಗಿ ಮುಂದುವರಿದ ತಂತ್ರಜ್ಞಾನವು ಸಮಾಜದ ಅತ್ಯಂತ ದುರ್ಬಲ ವರ್ಗಗಳನ್ನು ಹೊರಗಿಡಬಹುದು. ಆದ್ದರಿಂದ, ನಮ್ಮ ವಿಧಾನವು ಅಂತರ್ಗತವಾಗಿರಬೇಕು ಮತ್ತು ‘ಅಂತ್ಯೋದಯʼ ದಿಂದ ಪ್ರೇರಿತವಾಗಿರಬೇಕು, ತಾಂತ್ರಿಕ ಪ್ರಗತಿಗಳು ಎಲ್ಲಾ ಮೂಲೆಗಳ ನಮ್ಮ ಜನರನ್ನು ತಲುಪುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಲ್ಯಾಣ ಉಪಕ್ರಮಗಳ ಪ್ರಭಾವವನ್ನು ನಿರ್ಣಯಿಸಲು ದತ್ತಾಂಶ ಚಾಲಿತ ಮತ್ತು ಪುರಾವೆ ಆಧಾರಿತ ಅಧ್ಯಯನಗಳ ಅಗತ್ಯವನ್ನು ಒತ್ತಿಹೇಳುತ್ತಾ, ಶ್ರೀ ಧನಕರ್ ಅವರು “ನಾವು ಆಡಳಿತದ ಹೊಸ ಯುಗಕ್ಕೆ ಪ್ರಗತಿಯಲ್ಲಿರುವಾಗ, ನಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ದತ್ತಾಂಶವು ಮುಂಚೂಣಿಯಲ್ಲಿರಬೇಕು. ವಿವಿಧ ಕಲ್ಯಾಣ ನೀತಿಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಪುರಾವೆ ಆಧಾರಿತ ಅಧ್ಯಯನಗಳು ಅತ್ಯಗತ್ಯ.  ಪ್ರಾಯೋಗಿಕ ಪುರಾವೆಗಳನ್ನು ಆಧರಿಸಿದ ಮೌಲ್ಯಮಾಪನಗಳು ನಮ್ಮ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದಲ್ಲದೆ ಆಡಳಿತದಲ್ಲಿ ಸಾರ್ವಜನಿಕರ ನಂಬಿಕೆಯನ್ನು ನಿರ್ಮಿಸುತ್ತವೆ. ಇದು ನಮ್ಮ ಸಂಸ್ಥೆಗಳಿಗೆ ಕಳಂಕ ತರಲು  ಪ್ರಯತ್ನಿಸುವವರಿಗೆ ಮತ್ತು ಭಾರತದ ಅಸಾಧಾರಣ ಬೆಳವಣಿಗೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದವರಿಗೆ ತಕ್ಕ ಉತ್ತರವನ್ನು ನೀಡುತ್ತದೆ.

>“ನಾವು ತಂತ್ರಜ್ಞಾನವನ್ನು ಸಂಯೋಜಿಸಿದಂತೆ, ನಾವು ಸೈಬರ್ ಭದ್ರತೆ ಮತ್ತು ದತ್ತಾಂಶ ಗೌಪ್ಯತೆಗೆ ಆದ್ಯತೆ ನೀಡಬೇಕು. ನಾಗರಿಕರು ತಮ್ಮ ಮಾಹಿತಿ ಸುರಕ್ಷಿತವಾಗಿದೆ ಮತ್ತು ಜವಾಬ್ದಾರಿಯುತವಾಗಿ ಬಳಸುತ್ತಾರೆ ಎಂದು ಭಾವಿಸುವ ವಿಶ್ವಾಸದ ವಾತಾವರಣವನ್ನು ಬೆಳೆಸಬೇಕು” ಎಂದು ಅವರು ಹೇಳಿದರು.

ಮಹಿಳೆಯರ ಅನುಕರಣೀಯ ಆಡಳಿತದ ಚಾತುರ್ಯವನ್ನು ಗುರುತಿಸಿ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವನ್ನು ಶ್ಲಾಘಿಸಿದ ಶ್ರೀ ಧನಕರ್ “ಈ ನಿರ್ಧಾರವು ಮಹಿಳೆಯರ ನಾಯಕತ್ವದ ಸಾಮರ್ಥ್ಯವನ್ನು ಗುರುತಿಸುವುದಲ್ಲದೆ, ಸಾಮಾಜಿಕ ನ್ಯಾಯದ ವಿಶೇಷ ಅಂಶವನ್ನು ಪೂರೈಸುತ್ತದೆ. ನೀತಿಗಳ ರಚಿಸುವಲ್ಲಿ  ಮಹಿಳೆಯರ ಹೆಚ್ಚಿದ ಭಾಗವಹಿಸುವಿಕೆಯು ಸಹಾನುಭೂತಿ ಮತ್ತು ಸೂಕ್ಷ್ಮ ಆಡಳಿತವನ್ನು ಉತ್ತೇಜಿಸುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ.” ಎಂದು ಹೇಳಿದರು

ಭಾರತವು ಜಾತ್ರೆಗಳು ಮತ್ತು ಉತ್ಸವಗಳ ನಾಡು, ಈ ಆಚರಣೆಗಳು ಕೆಲವೊಮ್ಮೆ ತಪ್ಪಿಸಬಹುದಾದ ಅಪಘಾತಗಳಿಂದ ಹಾಳಾಗುತ್ತವೆ, ಅಂತಹ ಸಂದರ್ಭಗಳಲ್ಲಿ ಐಐಪಿಎ ರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲಾಡಳಿತವನ್ನು ಸಂವೇದನಾಶೀಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಸರಿಯಾದ ಮುನ್ನೆಚ್ಚರಿಕೆಯ ಕ್ರಮಗಳು ಮತ್ತು ಸುಧಾರಿತ ಯೋಜನೆಗಳೊಂದಿಗೆ, ವಿಶೇಷವಾಗಿ ಸೌಕರ್ಯಗಳು ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ, ಅಂತಹ ಘಟನೆಗಳನ್ನು ಕಡಿಮೆ ಮಾಡಬಹುದು ಎಂದು ಅವರು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಐಐಪಿಎ ಮಹಾನಿರ್ದೇಶಕರಾದ ಶ್ರೀ ಸುರೇಂದ್ರ ನಾಥ್ ತ್ರಿಪಾಠಿ, ಭಾರತದ ಉಪರಾಷ್ಟ್ರಪತಿಗಳ ಕಾರ್ಯದರ್ಶಿ ಶ್ರೀ ಸುನೀಲ್ ಕುಮಾರ್ ಗುಪ್ತಾ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.