- *ಅಭಿವೃದ್ಧಿಯ ಹರಿಕಾರರಾದ ಉಳ್ಳಾಲ ಶ್ರೀನಿವಾಸ್ ಮಲ್ಯಾರವರ 123ನೇ ಜನ್ಮ ಜಯಂತಿಯಂದು ಅವರಿಗೆ ನನ್ನ ಅಗಣಿತ ನಮನಗಳು*🙏
*ಶ್ರೀಯುತ ದಿ. ಉಳ್ಳಾಲ ಶ್ರೀನಿವಾಸ ಮಲ್ಯ( ಶೀನಪ್ಪ ಮಲ್ಯ) ಇವರು ಆಧುನಿಕ ಕೆನರಾ ಪ್ರಾಂತ್ಯದ ಹರಿಕಾರರು.18ವರ್ಷ ಸಂಸತ್ ಸದಸ್ಯರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ತೊಟ್ಟವರು. ನವೆಂಬರ್ 21, 1902ರಲ್ಲಿ ಜನಿಸಿದ ಇವರು ಮಂಗಳೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿರುತಾರೆ.ತಮ್ಮ ಹದಿಹರೆಯದಲ್ಲೇ ಸ್ವಾತಂತ್ರ್ಯ ಹೋರಾಟ ಸೇರಿದ ಇವರು ಹಲವಾರು ಬಾರಿ ಜೈಲು ವಾಸ ಅನುಭವಿಸಿದ್ಧಾರೆ, ಹಲವಾರು ಪ್ರಮುಖ ನಾಯಕರೊಂದಿಗೆ ಒಡನಾಟ ಹೊಂದಿದ್ದ ಇವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಬುದ್ಧಿವಂತಿಕೆ, ಪ್ರಾಮಾಣಿಕತೆ ಒಂದು ಕೆಲಸವನ್ನು ಹಿಡಿದರೆ ಸಾಧಿಸದೆ ವಿಶ್ರಾಂತಿ ಪಡೆಯರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿ, ಬಳಿಕ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಸದಸ್ಯರಾಗಿದ್ದರು. ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರುರ ಆಪ್ತರಾಗಿದ್ದರು. 1951ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜೊತೆಗೆ AICC ಕಾರ್ಯದರ್ಶಿಯಾದರು. ದೇಶ ಕಂಡ ಧೀಮಂತ ನಾಯಕರಾದ ಬಾಬು ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಅಬ್ದುಲ್ ಕಲಾಂ ಅಜಾದ್ ಹಾಗೂ ಅಂಬೇಡ್ಕರ್ ಜೊತೆ ಕೆಲಸ ನಿರ್ವಹಿಸಿದವರು.ನವ ಮಂಗಳೂರು ಬಂದರ್, ಮಂಗಳೂರು – ಬೆಂಗಳೂರು ರೈಲು ಮಾರ್ಗ, ರಾಷ್ಟೀಯ ಹೆದ್ದಾರಿ, ಕರ್ನಾಟಕ ರಿಜಿನಲ್ ಇಂಜಿನಿಯರಿಂಗ್ ಕಾಲೇಜು ಸುರತ್ಕಲ್(ಈಗ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ಮಂಗಳೂರು ವಿಮಾನ ನಿಲ್ದಾಣ ಬಜ್ಪೆ, ಮಂಗಳೂರು ಆಕಾಶವಾಣಿ ಇದೆಲ್ಲಾ ಮಂಗಳೂರಿಗರಿಗೆ ದಿ. ಶ್ರೀನಿವಾಸ ಮಲ್ಯರ ಕೊಡುಗೆ. ತಮ್ಮ ತನು ಮನ ಧನವನ್ನು ದೇಶಕ್ಕಾಗಿ ಅರ್ಪಿಸಿದ ಅಪ್ಪಟ ದೇಶಪ್ರೇಮಿ. ನವ ಮಂಗಳೂರಿನ ಹರಿಕಾರ ಎಂದರು ತಪ್ಪಾಗಲಾರದು*.
*ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನಮ್ಮ ಜಿ.ಎಸ್.ಬಿ ಸಮುದಾಯದ,ಎಂದೂ ಮರೆಯಲಾಗದ ಧೀಮಂತ ನಾಯಕರಾದ ಶ್ರೀನಿವಾಸ್ ಮಲ್ಯರವರಂತಹ ಅಭಿವೃದ್ಧಿಯ ರಾಜಕಾರಣಿ ಮತ್ತೊಮ್ಮೆ ಹುಟ್ಟಿ ಬರಲೆಂದು ನಾನು ಆಶಿಸುತ್ತೇನೆ*🙏
*ಮಂಜುಳಾ ನಾಯಕ್*
ಕಾಂಗ್ರೆಸ್ ಮುಖಂಡರು, ದ.ಕ ಜಿಲ್ಲೆ