ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಮಾನ್ಯ ಶ್ರೀ ಜಗದೀಪ್ ಧನಕರ್ ಅವರು ತಮ್ಮ ಧರ್ಮಪತ್ನಿಯವರಾದ ಶ್ರೀಮತಿ ಸುದೇಶ್ ಧನಕರ್ ಅವರೊಂದಿಗೆ ಮಾಜಿ ಪ್ರಧಾನಿಗಳಾದ ಶ್ರೀ ದೇವೇಗೌಡ ಅವರ ನಿವಾಸಕ್ಕೆ ಸೌಹಾರ್ದ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗೌರವಾನ್ವಿತ ಉಪ ರಾಷ್ಟ್ರಪತಿಗಳು ವಿಶೇಷವಾಗಿ ನಮ್ಮ ತಾಯಿಯವರಾದ ಶ್ರೀಮತಿ ಚನ್ನಮ್ಮ ದೇವೇಗೌಡರ ಆರೋಗ್ಯ ವಿಚಾರಿಸಿ, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.
ಬಳಿಕ ಮಾಜಿ ಪ್ರಧಾನಿಗಳ ಜತೆಯಲ್ಲಿಯೇ ಉಪ ರಾಷ್ಟ್ರಪತಿಗಳು ಉಪಹಾರ ಸೇವಿಸಿದರು. ಶ್ರೀಯುತರ ಆಗಮನ ನನಗೆ, ನಮ್ಮ ಇಡೀ ಕುಟುಂಬಕ್ಕೆ ಬಹಳ ಸಂತೋಷ ಉಂಟು ಮಾಡಿದೆ. ಅವರ ಪ್ರೀತಿ-ವಿಶ್ವಾಸ, ಔದಾರ್ಯಕ್ಕೆ ಆಭಾರಿ ಆಗಿದ್ದೇನೆ.
Honorable Vice-President of India, Shri Jagdeep Dhankhar along with Smt. Sudesh Dhankhar, paid a cordial visit to the residence of former Prime Minister Shri H D Devegowda avaru to enquire about the health of our respected mother, Smt. Chennamma Deve Gowda, and wished her a speedy recovery.
I am grateful for their warmth, affection, and generosity. Their visit brought immense joy to me and my entire family.
Vice President of India
H D Kumarswami
Union Minister