ಉಳ್ಳಾಲ: ಅಗಸ್ಟ್ 29:- ಉಳ್ಳಾಲ ನಗರಸಭೆ ಚುನಾವಣೆ ಕಾವೇರಿದೆ. ಈ ಬಾರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗ ಎಸ್ ಸಿ ಮಹಿಳೆಗೆ ಮೀಸಲಾಗಿದ್ದವು.   ಒಟ್ಟು ಚುನಾಯಿತ 31 ಸದಸ್ಯರಲ್ಲಿ 2 ಸದಸ್ಯರು ಮಾತ್ರ ಈ ಬಾರಿಯ ಸ್ಪರ್ಧಾ ಕಣದಲ್ಲಿದ್ದು . ಇಂದು ನಡೆದ ಚುನಾವಣೆಯಲ್ಲಿ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಗರ ಸಭೆ ಅಧ್ಯಕ್ಷೆ ಯಾಗಿ ಶಶಿಕಲಾ 23 ಮತಗಳ ಸ್ಪಷ್ಟ ಬಹುಮತ ದೊಂದಿಗೆ ಆಯ್ಕೆ ಗೊಂಡರು.

ಅಧ್ಯಕ್ಷೆ ಪಡೆದ ಮತಗಳು.

ಕಾಂಗ್ರೆಸ್ ಪಕ್ಷದ 13, ಎಸ್ ಡಿ ಪಿ ಐ ಪಕ್ಷದ 6, ಪಕ್ಷೇತರ 2 (ಅಜೀಜ್ ಮತ್ತು ಮುಸ್ತಾಕ್) ,ಜೆಡಿಎಸ್ ಚುನಾಯಿತರಾಗಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಇಬ್ಬರು ಸದಸ್ಯರು (ಜಬ್ಬಾರ್, ಖಲೀಲ್ ,) ಸೇರಿ ಒಟ್ಟು ಸೇರಿ 23 ಬಹುಮತದಲ್ಲಿ ಶಶಿಕಲಾ ವಿಜೇತರಾದರು.

ಬಿಜೆಪಿಯ ಅಧ್ಯಕ್ಷ ಅಭ್ಯರ್ಥಿ ಭವಾನಿ ಯವರಿಗೆ ಅವರ ಪಕ್ಷದ ಕೇವಲ ಆರು ಮತಗಳು ಮಾತ್ರ ಬಿದ್ದು ಸೋಲುಂಡರು.ಜೆಡಿಎಸ್ ಸದಸ್ಯರು ಗಳಾದ ದಿನಕರ್ ಉಳ್ಳಾಲ್ ಮತ್ತು ಬಶೀರ್ ತಟಸ್ಥರಾಗಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಾಂಗ್ರೆಸ್ ಪಕ್ಷದ ಸಪ್ನಾ ಹರೀಶ್ ರವರು 17 ಮತಗಳನ್ನು ಪಡೆದು ವಿಜೇತರಾದರು.ಕಾಂಗ್ರೆಸ್ 13+ ಜೆಡಿಎಸ್ 2( ಜಬ್ಬಾರ್ ಖಲೀಲ್) +ಪಕ್ಷೇತರ ಎರಡು . ಎಸ್ ಡಿ ಪಿ ಐ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ  ಅಭ್ಯರ್ಥಿ ಝರೀನಾ ರಯುಫ್ ರವರು ಕೇವಲ ತಮ್ಮ ಪಕ್ಷದ ಆರು ಸದಸ್ಯರಗಳ ಮತಗಳನ್ನು ಮಾತ್ರ ಪಡೆದರು. ಬಿಜೆಪಿಯ ಉಪಾಧ್ಯಕ್ಷ ಅಭ್ಯರ್ಥಿ ನಮಿತಾ ಗಟ್ಟಿ  ತಮ್ಮ ಪಕ್ಷದ ಆರು ಮತಗಳನ್ನು ಮಾತ್ರ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸಪ್ನಾ ಹರೀಶ್ 17 ಮತಗಳ ದೊಂದಿಗೆ ಆಯ್ಕೆ ಯಾದರು.ಕಾಂಗ್ರೆಸ್ 13+ ಜೆಡಿಎಸ್ 2( ಜಬ್ಬಾರ್ ಖಲೀಲ್) +ಪಕ್ಷೇತರ ಎರಡು_ SDPI, ಬಿಜೆಪಿ ತಲಾ 6 ಮತಗಳು ಪಡೆದರೆ.* ಜೆಡಿಎಸ್ ದಿನಕರ್, ಬಷೀರ್ ತಟಸ್ಥ ರಾಗಿದ್ದರು

ನಗರ ಸಭೆಯ ಅಧ್ಯಕ್ಷ ಸ್ಥಾನದ ಮೊದಲ ಅವಧಿಯಲ್ಲಿಯೂ ಅಧ್ಯಕ್ಷ ಉಪಾಧ್ಯಕ್ಷ ಎರಡು ಕಾಂಗ್ರೆಸ್ ಪಕ್ಷದ ಪಾಲಾಗಿತ್ತು. ಆಗ ಕಾಂಗ್ರೆಸ್ ನ ಚಿತ್ರಕಲಾ ವಿಜೇತರಾಗಿದ್ದರು. ಕಳೆದ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಿಯ ಹಿಡಿಯಲು ಎಸ್ ಡಿ ಪಿ ಐ ಪಕ್ಷ ಪರೋಕ್ಷವಾಗಿ ಬೆಂಬಲ ನೀಡಿತ್ತು. ಅಂದು ಜೆಡಿಎಸ್ ಬಿಜೆಪಿ ಕಾಂಗ್ರೆಸ್ ಮಧ್ಯೆ ತೀವ್ರವಾದ ವೈಪೋಟಿ ಇತ್ತು ಅಂತಹ ಸಂದರ್ಭದಲ್ಲಿ ಎಸ್ ಜಿ ಪಿ ಐ ಪಕ್ಷದ ಪರೋಕ್ಷ ಬೆಂಬಲದಿಂದ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಈ ಬಾರಿ ನೈತಿಕವಾಗಿ ಉಪಾಧ್ಯಕ್ಷ ಸ್ಥಾನ ಎಸ್ ಡಿ ಪಿ ಪಕ್ಷಕ್ಕೆ ಕಾಂಗ್ರೆಸ್ ನೀಡ ಬಹುದು ಎಂದು ಸಾರ್ವಜನಿಕರು ಅಂದಾಜು ಹಾಕಿದ್ದರು. ಆದರೆ ಕಾಂಗ್ರೆಸ್ ಉಪಕಾರ ಸ್ಮರಣೆಯನ್ನು ಮಾಡದೆ ಸ್ವಾರ್ಥ ರಾಜಕಾರಣ ಮಾಡುತ್ತಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

2018 ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಒಟ್ಟು 31 ಸದಸ್ಯರು ಚುನಾಯಿತರಾಗಿದ್ದರು. ಕಾಂಗ್ರೆಸ್‌ 13, ಬಿಜೆಪಿ, 6 ಪಕ್ಷೇತರ, 2 ಎಸ್‌ ಡಿಪಿಐ 6 ಜೆಡಿಎಸ್ ನಾಲ್ಕು ಸದಸ್ಯರಿದ್ದರು.