ಬೆಂಗಳೂರು ಜುಲೈ 24: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ , ಮಂಗಳೂರು ಮೂಲದ ಡಾ.ಯು ಟಿ ಇಫ್ತಿಕರ್ ಫರೀದ್ ರವರನ್ನು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿ ಅಲೈಡ್ ಅಂಡ್ ಹೆಲ್ತ್ ಕೇರ್ ಕೌನ್ಸಿಲ್ ರಚಿಸಿ ಅದರ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಈ ಸಮಿತಿಯಲ್ಲಿ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಅಪ್ರತಿಮ ಸಾಧನ ಮಾಡಿದ ಇನ್ನು ಕೆಲವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಹಿರಿಯ ಕಾಂಗ್ರೆಸ್ ಮುಖಂಡ , ಸೋಲಿಲ್ಲದ ಸರದಾರ ಉಳ್ಳಾಲದ ಮಾಜಿ ಶಾಸಕ ದಿI ಯು ಟಿ ಫರಿದ್ ಸಾಹೇಬರ ಪುತ್ರರಾಗಿದ್ದಾರೆ ಇಫ್ತಿಕರ್. ಮಂಗಳೂರು (ಉಳ್ಳಾಲ) ಶಾಸಕ, ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅವರ
ಸಹೋದರಾಗಿದ್ದಾರೆ. ಖಾದರ್ ಅವರ ಸಕ್ರಿಯ ಜನಸೇವೆಗೆ ಬೆನ್ನೆಲುಬು ಆಗಿ ನಿಂತಿದ್ದಾರೆ ಇಫ್ತಿಕಾರ್ . ಕರ್ನಾಟಕ ಮತ್ತು ನೆರೆ ರಾಜ್ಯದ ಹಲವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಲಹೆಗಾರರಾಗಿ , ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕರಾವಳಿ ಕರ್ನಾಟಕ ಮಾತ್ರವಲ್ಲ ದೇಶ ವಿದೇಶಗಳಲ್ಲಿಯೂ ಇಫ್ತಿಕರ್ ರವರ ಸಮಾಜಸೇವೆ, ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ಯಾವುದೇ ಜಾತಿ, ಧರ್ಮ, ಪಕ್ಷ ,ಪ್ರದೇಶ ಎಂಬ ಭೇದಭಾವ ಮಾಡದೆ ಎಲ್ಲರಿಗೂ ಸಹಾಯ ಮಾಡುತ್ತಾರೆ. ಅವರ ಈ ನಿಸ್ವಾರ್ಥ ಸೇವಾ ಮನೋಭಾವ ಮನಗೊಂಡು ರಾಜ್ಯ ಸರ್ಕಾರ ಉತ್ತಮ ಸ್ಥಾನ ನೀಡಿದೆ.

ಮುಂದೆಯೂ ಜನಪ್ರತಿನಿಧಿಯಾಗಿ ಚುನಾಯಿತರಾಗುವ ಸಂಭವವಿದೆ. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಹಿರಿಯರು ಒತ್ತಡ ಹೇರಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚಿಸಿತ್ತು. ರಾಜ್ಯದ ಹಲವಾರು ಉದ್ಯಮಿಗಳು ,ರಾಜಕೀಯ ಮತ್ತು ಸಾಮಾಜಿಕ ನಾಯಕರುಗಳು ಡಾ.ಯು ಟಿ ಇಫ್ತಿಕಾರ್ ರವರಿಗೆ ಅಭಿನಂದನ ಸಲ್ಲಿಸಿದ್ದಾರೆ ಮತ್ತು ಶುಭ ಹಾರೈಸಿದ್ದಾರೆ












