*ಗಲ್ಫ್ ರಿಟಾಯರೀಸ್* *ಎಸೋಸಿಯೇಶನ್ ನಿಂದ* *ಡಾ.ಆರತಿ ಕೃಷ್ಣರವರಿಗೆ ಮನವಿ*ಸಲ್ಲಿಕೆ*

ಮಂಗಳೂರಿಗೆ ಆಗಮಿಸಿದ ಕರ್ನಾಟಕ ರಾಜ್ಯ ಅನಿವಾಸಿ ಕನ್ನಡ ಕೋಶದ ಉಪಾಧ್ಯಕ್ಷರಾದ ಡಾ.ಆರತಿಕೃಷ್ಣ ರವರನ್ನು ಮಂಗಳೂರು ಗಲ್ಫ್ ರಿಟಾಯರೀಸ್ ಎಸೋಸಿಯೇಶನ್ ನ ಅಧ್ಯಕ್ಷರಾದ ಹಂಝ ಮಿತ್ತೂರು ಮತ್ತು ಆಡಳಿತ ಸಮಿತಿ ಸದಸ್ಯರು ಭೇಟಿಯಾಗಿ ಮನವಿ ಸಲ್ಲಿಸಿದರು.
ಗಲ್ಫ್ ರಾಜ್ಯಗಳಲ್ಲಿ ಸಣ್ಣ ಸಣ್ಣ ಉದ್ಯೋಗಗಳನ್ನು ನಿರ್ವಹಿಸಿ ರಾಜ್ಯಕ್ಕೆ ವಿದೇಶೀ ವಿನಿಮಯ ಗಳಿಸಿಕೊಟ್ಟು ವಯಸ್ಸಾಗಿ ವಾಪಸು ಬಂದ ಅನೇಕರು ಇಂದು ಆರೋಗ್ಯ ಸಮಸ್ಯೆಗಳಿಂದ ತೊಂದರೆಗೊಳಗಾಗಿ ಯಾವುದೇ ಉದ್ಯೋಗವಿಲ್ಲದೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ಹಣವಿಲ್ಲದೆ ತೊಂದರೆಯಲ್ಲಿದ್ದಾರೆ.

ಕೇರಳ ರಾಜ್ಯದಲ್ಲಿ ಇಂಥಹ ಅನಿವಾಸಿ ಭಾರತೀಯರಿಗೆ ಪೆನ್ಶನ್, ಆರೋಗ್ಯವಿಮೆ,ಅಪಘಾತ ವಿಮೆ,ಮಕ್ಕಳಿಗೆ ಸ್ಕಾಲರ್ಶಿಪ್ ಮುಂತಾದ ಹಲವು ಯೋಜನೆಗಳಿಗೆ ವಾರ್ಷಿಕ ರೂ.350 ಕೋಟಿ ಅನುದಾನ ನೀಡಲಾಗುತ್ತಿದೆ. ಅದೇ ರೀತಿ ಯೋಜನೆಗಳನ್ನು ಈಗ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಅನಿವಾಸಿಗಳು ಮತ್ತು ಈಗಾಗಲೇ ಕೆಲಸದಿಂದ ನಿವೃತ್ತಿ ಹೊಂದಿ ಕರ್ನಾಟಕಕ್ಕೆ ವಾಪಾಸು ಬಂದು ನೆಲೆಸಿರುವವರಿಗೂ ಕೇರಳ ಮಾದರಿಯಲ್ಲಿ ಯೋಜನೆ ರೂಪಿಸಲು ಈ ಸಲದ ಬಜೆಟ್ ನಲ್ಲಿ ಅನುದಾನ ಮಂಜೂರು ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕೆಂದು ಕೋರಿಕೆ ಸಲ್ಲಿಸಿದರು.
ನಿಯೋಗದಲ್ಲಿ ಸಾಲಿಹ್ ಕೋಯಾ ತಂಗಳ್, ಸತೀಶ್ ಕುಮಾರ್ ಬಜಾಲ್ KSA, ಮೊಹಮ್ಮದ್ ಹುಸೈನ್,
GRA ಉಪಾಧ್ಯಕ್ಷ ಆದಂ ಬ್ಯಾರಿ, ಕಾರ್ಯದರ್ಶಿ ಜಮಾಲುದ್ದೀನ್, ಕೋಶಾಧಿಕಾರಿ ಬಾವ ಅಬ್ದುಲ್ ಖಾದರ್, ಜತೆ ಕಾರ್ಯದರ್ಶಿ ಯೂಸುಫ್ ಆಲಡ್ಕ, ಮತ್ತು ಸಲಹೆಗಾರರಾದ ಸಾಹುಲ್ ಹಮೀದ್ ತಂಗಳ್ ಮತ್ತು ಮಹಮದ್ ಬ್ಯಾರಿ ಬೊಳ್ಳಾಯಿ ಉಪಸ್ಥಿತರಿದ್ದರು.