ಉಂಟೂರು ಕಟ್ಟೆ ಕೈಮರ-ಯಡೂರು-ಮಾಸ್ತಿಕಟ್ಟೆ ಇಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಮಾಡುವಂತೆ
ತೀರ್ಥಹಳ್ಳಿಯಿಂದ-ಉಂಟೂರು ಕಟ್ಟೆ ಕೈಮರ-ಯಡೂರು-ಮಾಸ್ತಿಕಟ್ಟೆ ಮೂಲಕ ನಗರ ಹೋಬಳಿ ಕಛೇರಿಗೆ ಹೋಗಲು ಈ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ಬೆಳಿಗ್ಗೆಯಿಂದ ಮಧ್ಯಾಹ್ನ 2-00 ಗಂಟೆ ತನಕ ಮಾರ್ಗದಲ್ಲಿ ಬಸ್ಸಿನ ಸಂಚಾರ ಇರುವುದಿಲ್ಲ. ಹೊಸನಗರ ತಾಲ್ಲೂಕಿಗೆ ಸೇರಿದ ಕೊರನಕೀಟೆ, ಗಾರ್ಡರಗದ್ದೆ ಈ ಭಾಗದ ಜನರಿಗೆ ಹೊಸನಗರ ತಾಲ್ಲೂಕು ಕೇಂದ್ರಕ್ಕೆ ಹೋಗಲು ಸುಮಾರು 120 ಕಿ.ಮೀ. ಪ್ರಯಾಣಿಸಬೇಕಾಗಿದೆ. ನಗರ ನಾಡ ಕಚೇರಿಗೆ, ಹೊಸನಗರ ತಾಲ್ಲೂಕು ಕೇಂದ್ರಕ್ಕೆ ಹೋಗುವ ರೈತರಿಗೆ ಮತ್ತು ವೃದ್ಧಾಪ್ಯ ವೇತನ ಮುಂತಾದ ಸೌಲಭ್ಯಕ್ಕಾಗಿ ಹೋಗಲು ಸಾರ್ವಜನಿಕರಿಗೆ ತೊಂದರೆ ಆಗಿದೆ. ಆದ್ದರಿಂದ ಜನರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದಿಂದ 4-6 ಟ್ರಿಪ್ಪುಗಳನ್ನು ಉಂಟೂರು ಕಟ್ಟೆ ಕೈಮರ-ಯಡೂರು-ಮಾಸ್ತಿಕಟ್ಟೆ ನಗರಕ್ಕೆ ಹೋಗಿ ಬರುವಂತಹ ವ್ಯವಸ್ಥೆಯನ್ನು ಮಾಡಬೇಕೆಂದು ಕೋರಿ ಯಡೂರು ಮೂರ್ತಿ ರವರು ಗ್ರಾಮಸ್ಥರ ಪರವಾಗಿ ಮನವಿಯನ್ನು ಸಲ್ಲಿಸಿದ್ದರು. ಸದರಿಯವರ ಮನವಿಯನ್ನು ಡಾ.ಆರತಿ ಕೃಷ ಉಪಾಧ್ಯಕ್ಷರು, ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ರವರು ಪತ್ರ ಮುಖೇನ ಬಸ್ ವ್ಯವಸ್ಥೆಯನ್ನು ಕಲ್ಪಿಸಲು ಮಾನ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರನ್ನು ಖುದ್ದು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. ಸದರಿ ಮನವಿಗೆ ಸ್ಪಂದಿಸಿದ ಮಾನ್ಯ ಸಚಿವರು ಈ ಕೂಡಲೇ ಕೋರಿರುವ ಮಾರ್ಗದಲ್ಲಿ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ.
ಶ್ರೀ ಹಾಲಿಗೆ ದೊಡ್ಡಮ್ಮ ದೇವಸ್ಥಾನದ ಸಮೂಹ ಧ್ಯಾನ ಮಂದಿರ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ರೂ. 5.00 ಲಕ್ಷ ಅನುದಾನ ಬಿಡುಗಡೆ ಮಾಡಲು ಸೂಚನೆ
ಶ್ರೀ ಹಾಲಿಗೆ ದೊಡ್ಡಮ್ಮ ದೇವಸ್ಥಾನದ ಸಮೂಹ ಧ್ಯಾನ ಮಂದಿರ ನಿರ್ಮಾಣ ಮಾಡುತ್ತಿದ್ದು, ಈ ದೇವಸ್ಥಾನವು ವಾರಾಹಿ ಮುಳುಗಡೆ ಹಿನ್ನೀರಿನಿಂದ ಮುಳುಗಡೆಯಾಗಿರುತ್ತದೆ. ಈಗಾಗಲೇ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ಸುಮಾರು 50 ಲಕ್ಷ ರೂ.ಗಳನ್ನು ಖರ್ಚು ಮಾಡಿರುತ್ತಾರೆ. ಈಗ ಹಣದ ಅಡಚಣೆಯಿಂದ ಕೆಲಸ ಪೂರ್ಣ ಮಾಡಲು ಸಾಧ್ಯವಾಗುತ್ತಿಲ್ಲ. ಸದರಿಯವರು ಮನವಿಯಲ್ಲಿ ತಮ್ಮ ಇಲಾಖಾ ವತಿಯಿಂದ 20.00 ಲಕ್ಷ ಅನುದಾನವನ್ನು ಮಂಜೂರು ಮಾಡುವಂತೆ ಯಡೂರು ಮೂರ್ತಿ, ಹಾಲಿಗೆ ವಿಶ್ವನಾಥ್, ಹೆಚ್.ಎನ್. ನರೇಶ್ ಮತ್ತು ಇತರೆ ಗ್ರಾಮಸ್ಥರು ಕೋರಿದ್ದರು. ಸದರಿಯವರ ಮನವಿಯನ್ನು ಡಾ.ಆರತಿ ಕೃಷ್ಣ ಉಪಾಧ್ಯಕ್ಷರು, ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ರವರು ಪತ್ರ ಮುಖೇನ ಅನುದಾನ ಮಂಜೂರು ಮಾಡಲು ಮಾನ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರನ್ನು ಖುದ್ದು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. ಸದರಿ ಮನವಿಗೆ ಸ್ಪಂದಿಸಿದ ಮಾನ್ಯ ಸಚಿವರು ರೂ. 05.00 ಲಕ್ಷ ಅನುದಾನವನ್ನು ಮಂಜೂರು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ.












