*ಎಸ್ ಡಿ ಪಿ ಐ, ನೋಟಾ,* *ಕಮ್ಯುನಿಸ್ಟ್, ಆಮ್ ಆದ್ಮಿ ಇಲ್ಲದೇ* *ಇರುತ್ತಿದ್ದರೆ ಪದ್ಮರಾಜ್* *ಮಾರ್ಜಿನ್*
*2 ಲಕ್ಷ 50,000 ಮೇಲೆ* *ಹೋಗುತ್ತಿತ್ತು*

ಒಂದು ವೇಳೆ ಚುನಾವಣೆಯಲ್ಲಿ ಎಸ್‌ಡಿಪಿಐ , ಕಮಿನಿಸ್ಟ್, ಆಮ್ ಆದ್ಮಿ ಸ್ಪರ್ಧಿಸುತ್ತಿದ್ದರೆ ಕನಿಷ್ಠ 80,000 ಮತಗಳನ್ನು ಪಡೆಯುತ್ತಿತ್ತು. ನೋಟ 23,000 ಮತ ಪಡೆದಿದೆ. ಒಟ್ಟು ಸೇರಿ ಒಂದು ಲಕ್ಷ ಆಗುತ್ತಿತ್ತು. ಇದರಿಂದ ಪದ್ಮರಾಜ್ ಮಾರ್ಜಿನ್
2 ಲಕ್ಷ 50,000 ಆಗುತ್ತಿತ್ತು. ಆದರೆ ಅದನ್ನು ತಪ್ಪಿಸಿದ್ದು ಎಸ್ ಡಿ ಪಿ ಐ, ಕಮಿನಿಸ್ಟ್, ಆಮ್ ಆದ್ಮಿ, ನೋಟಾ.
ಬಿಲ್ಲವರ ಮತ ತನಗೆ ಇದೆ ಎಂದು ಹೇಳುತ್ತಿದ್ದ ಪದ್ಮರಾಜ್ ಹಾಗೂ ಬೆಂಬಲಿಗರಿಗೆ ಬಿಲ್ಲವರ ಕನಿಷ್ಠ ಮತಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಚುನಾವಣೆ ಬಹಿರಂಗಪಡಿಸಿದೆ. ಕೇವಲ ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ ಪದ್ಮರಾಜ್ ಬೆಂಬಲಿಗರು ನಮಗೆ
ಬಿಲ್ಲವರ ಮತ ಇದೆ ಎಂದು ಹೇಳುತ್ತಿದ್ದರು. ಆದರೆ ವಾಸ್ತವ್ಯಕವಾಗಿ ಗ್ರೌಂಡಿನಲ್ಲಿ ಅಂತಹ ಯಾವುದೇ ಸ್ವಲ್ಪ ಬದಲಾವಣೆ ಆಗಿರಲಿಲ್ಲ. ಅದು ಕೇವಲ ವಾಟ್ಸಪ್ ಫೇಸ್ಬುಕ್ನಲ್ಲಿ ಅವರ ಬೆಂಬಲಿಗರು ಹೇಳುತ್ತಿದ್ದ ಅಂಶ ಎಂಬುದು ಆಗಲೇ ನಮಗೆ ಗೊತ್ತಾಗಿದೆ. ಬಿಲ್ಲವರ ಬೆಂಬಲ ನಮಗಿದೆ ಎಂದು ಹೇಳುತ್ತಿರುವ ಪದ್ಮರಾಜ್ ರವರನ್ನು
ಅಲ್ಪಸಂಖ್ಯಾತರು ಸೇರಿದಂತೆ ಕಾಂಗ್ರೆಸ್ ಸಹ ನಂಬಿತ್ತು. ಆದರೆ ಕನಿಷ್ಠ ಬಿಲ್ಲವರ ಮತಗಳನ್ನು ಸಹ ಪಡೆಯಲು ಸಾಧ್ಯವಾಗಿಲ್ಲ ಎಂಬುದು ನೂರಕ್ಕೆ ನೂರು ಸತ್ಯ. ಬಿಲ್ಲವರ ನಾಯಕ ಎಂದು ಬೆಂಬಲಿಗರು ಹಾಗೂ ಪದ್ಮರಾಜ್ ತಲೆಯಲ್ಲಿ ಇದ್ದದ್ದು ದುರಂತ. ಸ್ವಲ್ಪ ಸಂಖ್ಯೆಯ ಇವರ ಸುತ್ತ ತಿರುಗುವ ಇವರ ಬೆಂಬಲಿಗರು ನಾಯಕರು ಎಂದು ಹೇಳುತ್ತಿದ್ದಾರೆ ಹೊರತು, ಬಿಲ್ಲವರು ಒಪ್ಪಿಕೊಳ್ಳಲಿಲ್ಲ ಎಂಬುದು ಈ ಚುನಾವಣೆ ಬಹಿರಂಗಪಡಿಸಿದೆ.
ಅಲ್ಪಸಂಖ್ಯಾತರು ಯಾವ ಚುನಾವಣೆಯಲ್ಲಿ ಮಾಡದ ಓಟನ್ನು ಈ ಬಾರಿ ಮಾಡಿದ ಕಾರಣ ಈ ಮಾರ್ಜಿನ್ ಬಂದಿದೆ. ಇಲ್ಲದೆ ಹೋಗಿದ್ದರೆ ಮೂರು ಲಕ್ಷಕ್ಕೂ ಅಧಿಕ ಮಾರ್ಜಿನ್ ಬರಬಹುದಿತ್ತು.
ಬಿಲ್ಲವರ ಕನಿಷ್ಠ ಮತ ಸಹ ಬಂದಿಲ್ಲ ಎಂಬುದು ಅಷ್ಟೇ ಸತ್ಯ. ನಾನು ಒಬ್ಬ ಬೂತು ಕಾರ್ಯಕರ್ತನಾಗಿ ನನ್ನ ಬೂತಿನಲ್ಲಿ ಒಂದು ಬಿಲ್ಲವರ ಮತಗಳು ಕೊಡ ಬದಲಾವಣೆಯಾಗಿಲ್ಲ ಎಂಬುದನ್ನು ನೋಡಿ ಇದನ್ನು ಬರೆಯುತ್ತಿದ್ದೇನೆ. ಇದು ಸತ್ಯ. ನಾನು ನನ್ನ ಹತ್ತಿರದ ಬೂತುಗಳನ್ನು ನೋಡಿ ಇದನ್ನು ಬರೆದಿದ್ದೇನೆ.

– ಕಾರ್ಯಕರ್ತ

$$$$$$$$$$$######$$$$$$$$$$$

 

“ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬಿಲ್ಲವರು ಮತ ಹಾಕುತ್ತಾರೆ ಎಂದು ನಂಬಿದ್ದೆವು, ಅದಕ್ಕಾಗಿ ಬಿಲ್ಲವ ಅಭ್ಯರ್ಥಿಗೆ ಅವಕಾಶ ನೀಡಿದ್ದೆವು, ಅದು ಹುಸಿಯಾಯ್ತು” ಎಂದು ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಅಲವತ್ತುಕೊಳ್ಳುತ್ತಿದ್ದಾರೆ. ಈ ರೀತಿಯ ಸಾಮಾಜಿಕ ಸಮೀಕರಣ (ಬಿಲ್ಲವ+ಮುಸ್ಲಿಂ+ಕ್ರೈಸ್ತ) ರೂಪಿಸುವಾಗ ಮಾಡಿಕೊಂಡ ಸಿದ್ದತೆಗಳೇನು ಎಂದು ಪ್ರಶ್ನಿಸಿದರೆ ಅವರಲ್ಲಿ ಉತ್ತರಗಳಿಲ್ಲ.

ಕಾಂಗ್ರೆಸ್ ಅಭ್ಯರ್ಥಿ, ಬಿಲ್ಲವ ಸಮುದಾಯದ ಪದ್ಮರಾಜ್ ಪೂಜಾರಿಯವರು, ಬಿಜೆಪಿ ತೆಕ್ಕೆಯಲ್ಲಿದ್ದ ಬಿಲ್ಲವ ಮತಗಳನ್ನು ಸೆಳೆಯಲು ಬಹಿರಂಗವಾಗಿ ಮುಂದಕ್ಕೆ ಬಿಟ್ಟ ಪ್ರಧಾನ ಹೆಸರುಗಳು ಸತ್ಯಜಿತ್ ಸುರತ್ಕಲ್ ಹಾಗೂ ಬಿರುವೆರ್ ಕುಡ್ಲದ ಬಳ್ಳಾಲ್ ಭಾಗ್ ಉದಯ ಪೂಜಾರಿ. ಈ ಇಬ್ಬರೂ ಸಂಘಪರಿವಾರದ ಹಿನ್ನಲೆಯವರು. (ಬಿಜೆಪಿ ವಿರುದ್ದ ನಿಲ್ಲಲು ಅವರಿಗೆ, ಅವರದ್ದೇ ಆದ ವ್ಯಕ್ತಿಗತ ಕಾರಣಗಳಿದ್ದವು) ಬಿಜೆಪಿ ವಿರುದ್ಧದ (ಕಾಂಗ್ರೆಸ್ ಅಭ್ಯರ್ಥಿ ಪರವಾದ) ಅವರ ಚುನಾವಣಾ ಮಾತುಗಳಲ್ಲಿ, “ಮೋದಿ ಬೇಕು, ಮೋದಿಯವರನ್ನು ನಾವು ಬೆಂಬಲಿಸುತ್ತೇವೆ, ಹಿಂದುತ್ವಕ್ಕೆ ನಿಷ್ಟೆ ಇದೆ, ಆದರೆ ಇಲ್ಲಿ ಬಿಜೆಪಿ ಹಿಂದುಳಿದ (ಬಿಲ್ಲವ) ಜಾತಿಗಳನ್ನು ತುಳಿದಿದೆ. ಅದಕ್ಕಾಗಿ ಬಿಜೆಪಿಯನ್ನು ಬಿಲ್ಲವರು ಸೋಲಿಸಬೇಕು…” ಎಂದು ಇತ್ತು, ಅದರ ಹೊರತಾಗಿ ಸೈದ್ದಾಂತಿಕ, ರಾಜಕೀಯ ದೂರದೃಷ್ಟಿಯ, ಉದ್ದೇಶಿತ ಸಾಮಾಜಿಕ ಸಮೀಕರಣ ಯಶಸ್ಸುಗೊಳಿಸುವ ಮಾತುಗಳು ತಪ್ಪಿಯೂ ಬರುತ್ತಿರಲಿಲ್ಲ.

ಅದೇ ಸಂದರ್ಭ ದ.ಕ‌. ಮೂಲದ ಬಿಲ್ಲವ ಸಮುದಾಯದವರೇ ಆದ, ರಾಷ್ಟ್ರಮಟ್ಟದ ಪ್ರಭಾವಿ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್, ಹೆಸರಾಂತ ಚಿಂತಕ, ವಾಗ್ಮಿ ದಿನೇಶ್ ಅಮೀನ್ ಅಮೀನ್ ಮಟ್ಟು ಚುನಾವಣೆಯ ಪ್ರಚಾರ ಸಂದರ್ಭ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಬಿಲ್ಲವರಿಗೆ ನಾರಾಯಣ ಗುರುಗಳ ಚಿಂತನೆಗಳ ಮೂಲಕ ಎಚ್ಚರ ಮೂಡಿಸಬಲ್ಲ, ಇತಿಹಾಸಲ್ಲಿ ಕರಾವಳಿಯಲ್ಲಿ ಬಿಲ್ಲವರಿಗೆ ಆಗಿರುವ ಅನ್ಯಾಯಗಳನ್ನು ವಿವರಿಸಬಲ್ಲ, ಮುಸ್ಲಿಮರು, ಕ್ರೈಸ್ತರ ಜೊತೆ ಬಿಲ್ಲವರ ರಾಜಕೀಯ ಸಮೀಕರಣದ ಅಗತ್ಯದ ಕುರಿತು ಮನದಟ್ಟು ಮಾಡಿಸಬಲ್ಲ ಛಾತಿ, ಸಾಮರ್ಥ್ಯ, ವಿಶ್ವಾಸಾರ್ಹತೆ ಇದ್ದ ಈ ಇಬ್ಬರು ತುಳುನಾಡಿನ ಬಿಲ್ಲವ ಐಕಾನ್ ಗಳನ್ನು “ಹಿಂದುತ್ವದ” ಮೋದಿಯ ವಿರುದ್ದ ಮಾತಾಡುತ್ತಾರೆ ಎಂದು ಉದ್ದೇಶ ಪೂರ್ವಕವಾಗಿ ದೂರ ಇಡಲಾಯಿತು.

ಈಗ ಫಲಿತಾಂಶ ಬಂದಿದೆ. ಮತ ತಂದು ಕೊಡುತ್ತಾರೆ ಎಂದು ನಂಬಿದವರಿಂದ ಎಷ್ಟು ವೋಟು ಬಂದಿದೆ, ಸಿದ್ದಾಂತದ ರಾಜಕಾರಣದ ನೆಲದಲ್ಲಿ ಸೈದ್ದಾಂತಿಕ ಸ್ಪಷ್ಟತೆ ಇಲ್ಲದ ರಾಜಕಾರಣದಿಂದ ಏನು ಲಾಭ ಆಗಿದೆ ಎಂಬುದು ಜಾಹೀರಾಗಿದೆ‌. ಪ್ರಾಮಾಣಿಕ ಆತ್ಮ ವಿಮರ್ಶೆ, ಪ್ರಜ್ಞಾಪೂರ್ವಕ ಪ್ರಯತ್ನ ಇಲ್ಲದಿದ್ದಲ್ಲಿ ತುಳುನಾಡಿನ ರಾಜಕಾರಣದಲ್ಲಿ ಯಾವ ಸಮೀಕರಣ, ಬದಲಾವಣೆಯೂ ನಡೆಯದು.

ಮುನೀರ್ ಕಾಟಿಪಳ್ಳ