ಬೆಂಗಳೂರು: 24 ಮೇ – ಅಲ್ಪಸಂಖ್ಯಾತ ಸಮುದಾಯ ರಾಜಕೀಯ ಪ್ರಾತಿನಿಧ್ಯ ಪಡೆಯುವುದರಲ್ಲಿ ತುಂಬಾ ಹಿಂದಿತಲ್ಲಲ್ಪಟ್ಟಿದ್ದಾರೆ. ಅವರ ಜನಸಂಖ್ಯೆ ಅನುಪಾತದಂತೆ ಸ್ಥಾನ ಮಾನ ಸಿಗಲಿಲ್ಲ . ಈ ಬಾರಿ ವಿಧಾನಪರಿಷತ ಚುನಾವಣೆಯಲ್ಲಿ ಕನಿಷ್ಠ ಇಬ್ಬರು ಮುಸ್ಲಿಂ ಮತ್ತು ಓರ್ವ ಕ್ರೈಸ್ತ ಸಮುದಾಯದ ನಾಯಕರಿಗೆ ಎಂ ಎಲ್ ಸಿ ಸ್ಥಾನ ಕೊಡಬೇಕೆಂದು ಆಗ್ರಹಿಸಲಾಯಿತು . ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಮುಸ್ಲಿಂ ಸಮುದಾಯದ 98 ಶೇಕಡ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಿದ್ದಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಮುಂದೆಯೂ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲು ಮುಸ್ಲಿಂ ಸಮುದಾಯದ ಮತಗಳು ಅನಿವಾರ್ಯವಾಗಿದೆ ಎಂದು ಸಮುದಾಯದ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಾಗಲೂ ಸಮುದಾಯದ ನೈಜ ಸಮಾಜ ಸೇವಕರು ಮತ್ತು ನಿಸ್ವಾರ್ಥವಾಗಿ ಸಮುದಾಯದ ಹಕ್ಕುಗಳ ಪರವಾಗಿ ಮಾತನಾಡುವವರಿಗೆ ಮಾತ್ರ ಅವಕಾಶ ನೀಡಬೇಕು. ನಾಯಕರ ಹಿಂಬಾಲಕರಿಗೆ ಮತ್ತು ಸೂಟ್ಕೇಸ್ ರಾಜಕಾರಣ ಮಾಡುವವರಿಗೆ ಯಾವ ಕಾರಣಕ್ಕೂ ಸ್ಥಾನಮಾನ ನೀಡಬಾರದು ಎಂದು ಮುಸ್ಲಿಂ ಸಮುದಾಯದ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮುಸ್ಲಿಂ ಶಾಸಕರ ನಿಯೋಗ ಮೇಲಿನ ಬೇಡಿಕೆ ಇಟ್ಟಿದೆ .
ನಿಯೋಗದಲ್ಲಿ ಸಚಿವರುಗಲಾದ ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಮುಖ್ಯಮಂತ್ರಿಗಳ ಸಲಹೆಗಾರ ನಶೀರ್ ಅಹ್ಮದ್, ಶಾಸಕ ಎನ್ ಎ ಹಾರೀಸ್, ಎಂಎಲ್ಸಿ ಅಬ್ದುಲ್ ಜಬ್ಬಾರ್, ಶಾಸಕಿ ಖನಿಝ್ ಫಾತಿಮಾ ಮೊದಲಾದ ಮುಖಂಡರು ನಿಯೋಗದಲ್ಲಿದ್ದರು.
ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಇಬ್ಬರು ಅಹಿಂಧ ಮಾಧ್ಯಮದೊಂದಿಗೆ ಮಾತನಾಡುತ್ತಾ ಮುಸ್ಲಿಂ ಸಮುದಾಯದ ನೈಜ ಸಮಾಜಸೇವಕರಿಗೆ ಅವಕಾಶ ಕೊಡಬೇಕು. ಉತ್ತರ ಕರ್ನಾಟಕ ಭಾಗದ ಒಬ್ಬ ಮತ್ತೊಬ್ಬ ಕರಾವಳಿ ಮಲ್ನಾಡ್ ಭಾಗದಲ್ಲಿ ಒಬ್ಬರಿಗೆ ಅವಕಾಶ ಕೊಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಡಾ ಯು ಟಿ ಇಫ್ತಿಕರ್ ಅಲಿ ಯವರಿಗೆ ಆದ್ಯತೆಯ ಅವಕಾಶ ನೀಡಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಬೇಕು. ರಾಜ್ಯದಲ್ಲಿ ಎಲ್ಲಾ ವರ್ಗಗಳ ಶೈಕ್ಷಣಿಕ ಮತ್ತು ಆರೋಗ್ಯ ರಂಗದಲ್ಲಿ ಅವರು ತುಂಬಾ ಸೇವೆ ಮಾಡಿರುತ್ತಾರೆ. ಕಾಂಗ್ರೆಸ್ ಪಕ್ಷಕ್ಕೂ ಅವರ ಕೊಡುಗೆ ಅಪಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ