ದುಃಖಿತರಿಗೆ ಧೈರ್ಯ ತುಂಬುವ ಕಾಂಗ್ರೆಸ್ ಮುಖಂಡ ಇನಾಯತ್ ಅಲಿ
ಮಂಗಳೂರು 21 ಮೇ : ಯುವ ಉದ್ಯಮಿ ಇನಾಯತ ಅಲಿ ರವರು ಈಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಸಲಾಗಿದ್ದಾರೆ. ವಿದ್ಯಾರ್ಥಿನೆಲೆಯಲ್ಲಿಯೇ ಯೆನ್ಎಸ್‌ಯುಐ ನಾಯಕತ್ವ ವಹಿಸಿ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ವಿದ್ಯಾರ್ಥಿಗಳಲ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಲು ಶ್ರಮಿಸಿದ್ದಾರೆ. 2023 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ರಾಜ್ಯದಲ್ಲಿ ಸುದ್ದಿಯಾಗಿದ್ದರು. ಆ ಬಲಿಕ ಕ್ಷೇತ್ರ ಮತ್ತು ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಹೆಮ್ಮೆಪಡುವಂತಹ ಸಾವಿರಾರು ಕೆಲಸ ಕಾರ್ಯ ಮಾಡಿದ್ದಾರೆ. ಚುನಾವಣೆಗಳ ಪ್ರಚಾರ, ಜನಪರ ಹೋರಾಟ, ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ. ಸಮಾಜ ಸೇವೆ, ಪಕ್ಷ ಸಂಘಟನೆ, ವಿಶೇಷವಾಗಿ ದುಃಖಿತರಿಗೆ ಸಾಂತ್ವನ ಹೇಳೋದು ಮೊದಲಾದ ಸಾಧನೆ ಮಾಡಿ ಕರ್ನಾಟಕದಲ್ಲಿ ಬೆಳೆಯುತ್ತಿದ್ದಾರೆ .
20204 ಮೇ ತಿಂಗಳ ಮೂರನೇ ವಾರದಲ್ಲಿ ಕೇವಲ ನಾಲ್ಕೈದು ದಿನಗಳಲ್ಲಿ ಅವರು ನೊಂದಿತರು, ರೋಗಿಗಳು, ನಿಧನ ಹೊಂದಿದವರು, ಸಂಕಷ್ಟದಲ್ಲಿರುವವರು ಮನೆಗೆ ಹೋಗಿ ಧೈರ್ಯ ತುಂಬಿದ್ದಾರೆ. ಈ ಬಗ್ಗೆ ಚಿತ್ರಸಹಿತ ವರದಿ ಕೆಳಗೆ ನೀಡಲಾಗಿದೆ. ಇಂತಹ ಸಾವಿರಾರು ಮಾದರಿ ರಾಜಕಾರಣಿಗಳು ದೇಶಾದ್ಯಂತ ಸಕ್ರಿಯವಾಗಿ ಜನಸೇವೆ ಮಾಡಿದರೆ ದೊಡ್ಡ ರೀತಿಯ ಬದಲಾವಣೆ ಬರಬಹುದು. ಶ್ರೀಮಂತರು ಮತ್ತು ರಾಜಕಾರಣಿಗಳು ದಾನ ಧರ್ಮ ಮಾಡೋದು ಸ್ವಾಭಾವಿಕ. ಕೆಲವರು ಕೇವಲ ಸಾಂತ್ವನದ ಪತ್ರಿಕೆ ಹೇಳಿಕೆ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಆದರೆ. ಇನಾಯತ್ ಅಲಿ ಹಾಗಲ್ಲ ಸ್ವಯಂ ಭೇಟಿ ನೀಡಿ ಧೈರ್ಯ ತುಂಬುತ್ತಾರೆ. ಎಷ್ಟೇ ಉದ್ಯಮ ಮತ್ತು ಕೆಲಸದ ಒತ್ತಡ ಇದ್ದರೂ ಬಿಡುವು ಮಾಡಿಕೊಂಡು ಜನಸೇವೆಗೆ ಆದ್ಯತೆ ಕೊಡುತ್ತಾರೆ. ಇದರಿಂದ ದುಃಖಿತರ ಆತ್ಮಸ್ಥೈರ್ಯ ಹೆಚ್ಚುತ್ತದೆ. ನಿರಾಶೆಯಿಂದ ಹೊರ ಬರುತ್ತಾರೆ. ಆಶಾವಾದಿಗಳಾಗಿ ಪರಿವರ್ತನೆಗೊಳ್ಳುತ್ತಾರೆ. ಇಂತಹ ಧೈರ್ಯ ತುಂಬುವ ಮನಸ್ಥಿತಿ ರಾಜಕಾರಣಿಗಳಲ್ಲಿ ಅಪರೂಪ.
ಅಲಿ ಅವರು ದುಃಖಿತರ ಮನೆಗಳಿಗೆ ಸ್ವಯಂ ಭೇಟಿ ನೀಡಿ ಸಾಂತ್ವನ ಹೇಳುವಾಗ ಪಕ್ಷ, ಧರ್ಮ, ಜಾತಿ, ಭಾಷೆ ಮತ್ತು ಪ್ರದೇಶದ ತಾರತಮ್ಯ ಮಾಡಲ್ಲ . ಉದಾತ್ತ ಮಾನವೀಯ ಗುಣವಲ್ಲ ನಾಯಕರಾಗಿದ್ದಾರೆ. ತೀರಾ ಬಡ ಕುಟುಂಬದಿಂದ ಬಂದ ಇನಾಯಕ್ ಅಲಿ. ಕಠಿಣ ಪರಿಶ್ರಮಪಟ್ಟು ಉದ್ಯಮ ಮತ್ತು ರಾಜಕೀಯದಲ್ಲಿ ಮುಂದೆ ಬರುತ್ತಿದ್ದಾರೆ.
ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಜನಸೇವೆಗೆ , ಪಕ್ಷ ಸೇವೆಗೆ ಇನ್ನೂ ಹೆಚ್ಚು ಅವಕಾಶ ಮತ್ತು ದಾರಿ ಮಾಡಿಕೊಡಬೇಕೆಂದು ಕರಾವಳಿ ಭಾಗದ ಕಾಂಗ್ರೆಸ್ ಪಕ್ಷದ ಹೆಚ್ಚಿನ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ
ಗೋವಾದಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತ್ಮೀಯರು, ಗುರುಪುರ ಬ್ಲಾಕ್ ವ್ಯಾಪ್ತಿಯ ಪಡುಪೆರಾರ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹಲ್ಯಾರ್ ರವರನ್ನು ಇಂದು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಆದ್ಯಪಾಡಿಯ ಕೃಷ್ಣ ಬಂಗೇರ ರವರ ಮನೆ ಸಿಡಿಲು ಬಡಿದು ಹಾನಿಗೊಂಡಿದ್ದು, ಇಂದು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಹಾರ ಒದಗಿಸಿಕೊಡಲು ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರುಪುರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಎಕೆ ಮೊಹಮ್ಮದ್ ಅಡ್ಡೂರು ರವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿ ಹೇಮಂತ್ ರವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾದ ಝಹೂರ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು
ಬೈಕಂಪಾಡಿ ಬೈಲಾರೆ ಮನೆ ದಿ| ಮಾಧವ ಪುತ್ರನ್ ರವರ ಧರ್ಮಪತ್ನಿ ಶ್ರೀಮತಿ ಅಪ್ಪಿ ಕರ್ಕೇರ ರವರ ಉತ್ತರಕ್ರಿಯೆಯಲ್ಲಿ ಭಾಗವಹಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಆತ್ಮೀಯರಾದ ಅಬ್ದುಲ್ ಜಲೀಲ್ ಚೊಕ್ಕಬೆಟ್ಟು ರವರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು
ನೀರಿನಲ್ಲಿ ಮುಳುಗಿ ಮೃತಪಟ್ಟ ಆದ್ಯಪಾಡಿ ನಿವಾಸಿ ಅಭಿಲಾಷ್ ರವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದರು
( ಮೇಲಿನ ಚಿತ್ರ ಮತ್ತು ಶೀರ್ಷಿಕೆ ಕೇವಲ ನಾಲ್ಕೈದು ದಿನ ಕಲ ಸಾಂತ್ವನ ಬೇಟಿ ಗಳು. ಇದಲ್ಲದೆ ನಿರಂತರ ಪಕ್ಷ ಮತ್ತು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ,)