80%,90% ಶೇಕಡ ಮಾರ್ಕ್ಸ್ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಿ, ನಮ್ಮ ಕಾಲೇಜ್ ಗೆ 100% ಎಂದು ಕಟೌಟು , ದಿನಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ಕಂಡಾಗ, ಜಸ್ಟ್ ಪಾಸಾದವರಿಗೆ ಕಡಿಮೆ ಫೀಸ್ ಪಡೆದು ಅಡ್ಮಿಷನ್ ಕೊಡುವ ಮತ್ತು ಮಕ್ಕಳು ಫಸ್ಟ್ ಕ್ಲಾಸ್ ಪಡೆದು ಪಾಸಾಗುವಂತೆ ವ್ಯಾಸಂಗ ನೀಡುವ ಮಂಗಳೂರಿನ ಬದ್ರಿಯಾ ಕಾಲೇಜು, ರೊಸರಿಯಾ ಕಾಲೇಜು, ಉಳ್ಳಾಲದ ಟಿಪ್ಪುಸುಲ್ತಾನ್ ಕಾಲೇಜ್ ಗಳ ಶಿಕ್ಷಕರ ಶ್ರಮಕ್ಕೆ ಕಟೌಟು, ಪ್ರಶಸ್ತಿ ನೀಡ ಬೇಕು ಎಂದನಿಸುತ್ತಿತ್ತು. ಈ ದಿನ ನನ್ನ ಅಭಿಪ್ರಾಯವನ್ನೇ ಧ್ವನಿಸುವ ಪೋಸ್ಟೊಂದು ವಾಟ್ಸಪ್ ನಲ್ಲಿ ಕಾಣಲು ಸಿಕ್ಕಿತು. ಉಳ್ಳಾಲದ ಟಿಪ್ಪುಸುಲ್ತಾನ್ ಕಾಲೇಜಿನ ಢೀ ಶಕ್ತಿಯ ಬಗ್ಗೆ ಆ ಕಾಲೇಜಿನ ಹಳೇ ವಿದ್ಯಾರ್ಥಿಯೊಬ್ಬ ತನ್ನ ಅನಿಸಿಕೆ ಹೇಳಿ ಕೊಂಡಿದ್ದ. ವರ್ಷಗಳ ಹಿಂದೆ ಇದೇ ಅನಿಸಿಕೆಯನ್ನು ಅಕ್ಷರಕ್ಕಿಳಿಸಲು ನಾನು ಬಯಸಿದ್ದೆ.
ಆದ್ದರಿಂದ ಆ ಪೋಸ್ಟ್ ಅನ್ನು ಅನಾಮತ್ತಾಗಿ ಇಲ್ಲಿ ಕಾಪಿ ಮಾಡಿದ್ದೇನೆ.ದಯವಿಟ್ಟು ಓದಿ,ಪ್ರೋತ್ಸಾಹಿಸಿ.
— ಫಾರೂಕ್ ಉಳ್ಳಾಲ್.

#ಉಳ್ಳಾಲ ಟಿಪ್ಪು ಸುಲ್ತಾನ್ ಕಾಲೇಜಿನ ಸಾಧನೆಯ ಬೋರ್ಡ್ ಎಲ್ಲಾದರೂ #ನೋಡಿದ್ದೀರಾ?

ತಂತಮ್ಮ ಕಾಲೇಜುಗಳ ಫಲಿತಾಂಶವನ್ನು ರಸ್ತೆ ಬದಿ ಬೋರ್ಡ್ ಹಾಕಿ ಘೋಷಿಸುವ ಕಾಲೇಜುಗಳೇ ತುಂಬಿರುವ ಇಂದಿನ ದಿನಗಳಲ್ಲಿ ಹೀಗೆ ಘೋಷಿಸುವುದಕ್ಕೆ ಅರ್ಹತೆ ಇದ್ದೂ ಘೋಷಿಸದೇ ಮೌನವಾಗಿ ಸಾಧನೆ ಮಾಡುತ್ತಿರುವ ಶಿಕ್ಷಣ ಸಂಸ್ಥೆ ಇದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿರುವ ಟಿಪ್ಪು ಸುಲ್ತಾನ್ ಕಾಲೇಜು.

ಎಲ್ಲೂ ಸಲ್ಲದ ಮಕ್ಕಳನ್ನು ಇಲ್ಲಿ ದಾಖಲಿಸಿ ತೇರ್ಗಡೆಗೊಳಿಸಬೇಕೆಂಬುದು ದರ್ಗಾದ ಹಿಂದಿನ ಅಧ್ಯಕ್ಷ ದಿವಂಗತ ಇಬ್ರಾಹಿಂ ಹಾಜಿ ಅವರ ಉದ್ದೇಶವಾಗಿತ್ತು. ಇವತ್ತಿಗೂ ಈ ಕಾಲೇಜಿನಲ್ಲಿ ಈ ನಿಯಮ ಪಾಲನೆಯಾಗುತ್ತಿದೆ. ಎಸ್ ಎಸ್ ಎಲ್ ಸಿ ಯಲ್ಲಿ ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳನ್ನು ಸೈನ್ಸ್ ವಿಭಾಗಕ್ಕೆ ಸೇರಿಸುವ ಮತ್ತು ಅವರನ್ನು ತೇರ್ಗಡೆಗೊಳಿಸಲು ಪದೇಪದೇ ಯಶಸ್ವಿಯಾಗುತ್ತಿರುವ ಬಹುಶಃ ಜಿಲ್ಲೆಯ ಏಕೈಕ ಕಾಲೇಜು ಟಿಪ್ಪು ಸುಲ್ತಾನ್.

ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಇಲ್ಲದ ಸುಸಜ್ಜಿತ ಸೈನ್ಸ್ ಲ್ಯಾಬ್ ಇಲ್ಲಿದೆ. ಹತ್ತು ವರ್ಷಗಳಿಗಿಂತಲೂ ಹೆಚ್ಚು ಸೇವೆ ಸಲ್ಲಿಸಿರುವ ಅನುಭವಿ ಉಪನ್ಯಾಸಕರು, ವಿದ್ಯಾರ್ಥಿ ಸ್ನೇಹಿ ಕ್ಯಾಂಪಸ್, ಜಿಲ್ಲೆಯಲ್ಲೇ ಅತಿ ಕಡಿಮೆ ಪ್ರವೇಶ ಶುಲ್ಕ ಮತ್ತು 95 ಶೇಕಡಕ್ಕಿಂತಲೂ ಅಧಿಕ ರಿಸಲ್ಟ್- ಬಹುಶಃ ಟಿಪ್ಪು ಸುಲ್ತಾನ್ ಹೊರತುಪಡಿಸಿ ಜಿಲ್ಲೆಯ ಇತರ ಯಾವುದೇ ಕಾಲೇಜು ಇಂತಹ ಸಾಧನೆ ಮಾಡುತ್ತಿರುವುದು ನನಗೆ ಗೊತ್ತಿಲ್ಲ. ಎಲ್ಲ ಕಾಲೇಜುಗಳೂ ಡಿಸ್ಟಿಂಕ್ಷನ್ ಅಥವಾ 70- 80% ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನೇ ಸೈನ್ಸ್ ಗೆ ಸೇರಿಸಿಕೊಳ್ಳುತ್ತವೆ. ಆರ್ಟ್ಸ್ ಮತ್ತು ಕಾಮರ್ಸ್ ಗೂ ಕಡಿಮೆ ಅಂಕ ಪಡೆದವರಿಗೆ ಕೊನೆಯ ಚಾನ್ಸ್ ಕೊಡುತ್ತವೆ. ಮಾತ್ರವಲ್ಲ ದುಬಾರಿ ಶುಲ್ಕವನ್ನೂ ಪಡೆಯುತ್ತವೆ. ಅಷ್ಟಿದ್ದೂ 100 ಶೇಕಡ ಫಲಿತಾಂಶ ಕೊಡುವ ಕಾಲೇಜುಗಳು ಕೆಲವೇ ಕೆಲವು.

ಇವುಗಳಿಗೆ ಹೋಲಿಸಿದರೆ ಸೈಯದ್ ಮದನಿ ದರ್ಗಾದ ವತಿಯಿಂದ ನಡೆಯುವ ಟಿಪ್ಪು ಸುಲ್ತಾನ್ ಕಾಲೇಜು ಎಲ್ಲಾ ರೀತಿಯಲ್ಲೂ ಇವೆಲ್ಲಕ್ಕಿಂತ ಅತ್ಯಂತ ಮುಂಚೂಣಿಯಲ್ಲಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ, ಅತ್ಯಂತ ಕಡಿಮೆ ಅಂಕ ಪಡೆದ ಮಕ್ಕಳನ್ನು ಸೈನ್ಸ್ ಕಾಮರ್ಸ್ ಮತ್ತು ಆರ್ಟ್ಸ್ ವಿಭಾಗಕ್ಕೆ ಸೇರಿಸಿಕೊಂಡು ರಾಜ್ಯದ ಇತರೆಲ್ಲ ಕಾಲೇಜುಗಳಿಗೆ ಸಡ್ಡು ಹೊಡೆಯುವಂತೆ ರಿಸಲ್ಟ್ ತಂದುಕೊಡುತ್ತಿದೆ. 95 ಶೇಕಡಕ್ಕಿಂತಲೂ ಅಧಿಕ ಅಂಕ ಪಡೆದ ಮಕ್ಕಳು ಮತ್ತು ಜಸ್ಟ್ ಪಾಸ್ ಆದ ಮಕ್ಕಳು ಜೊತೆಯಾಗಿ ಕಲಿಯುವ ಏಕೈಕ ಕಾಲೇಜೂ ಇದುವೇ.

ಸುಸಜ್ಜಿತ ಲೈಬ್ರರಿ, ಕ್ರೀಡೆಗೆ ಪ್ರೋತ್ಸಾಹ, ಇಂಟರ್ ಕಾಲೇಜ್ ಕಾಂಪಿಟಿಷನ್ ಗೆ ತರಬೇತಿ, ಕ್ಯಾರಿಯರ್ ಗೈಡೆನ್ಸ್, ಮಾರಲ್ ತರಗತಿಗಳು, ಸ್ಕಾಲರ್ಶಿಪ್ ವ್ಯವಸ್ಥೆ ಮತ್ತು ಶುಲ್ಕ ವಿನಾಯಿತಿ ಇತ್ಯಾದಿ ಸೌಲಭ್ಯಗಳೂ ಈ ಕಾಲೇಜಿನಲ್ಲಿದೆ. ಇಷ್ಟಿದ್ದೂ

ಉಳ್ಳಾಲ, ತೊಕ್ಕೊಟ್ಟು, ಮಂಗಳೂರು ಪರಿಸರದಲ್ಲಿ ಓಡಾಡುತ್ತಿರುವ ಯಾರೇ ಆಗಲಿ ಟಿಪ್ಪು ಸುಲ್ತಾನ್ ಕಾಲೇಜಿನ ಫಲಿತಾಂಶದ ಬ್ಯಾನರ್ ಅನ್ನು ಅಥವಾ ಅತಿ ಹೆಚ್ಚು ಅಂಕ ಪಡೆದ ಮಕ್ಕಳ ಫೋಟೋ ಇರುವ ಬೋರ್ಡನ್ನು ರಸ್ತೆ ಬದಿಯಲ್ಲಿ ನೋಡಿರಲಾರರು. ಪ್ರಚಾರ ಬಯಸದೆ ಸಾಧನೆ ಮಾಡುತ್ತಿರುವ ಜಿಲ್ಲೆಯ ಏಕೈಕ ಕಾಲೇಜು ಉಳ್ಳಾಲದ ಟಿಪ್ಪು ಸುಲ್ತಾನ್. ಈ ಕಾಲೇಜು ನನ್ನನ್ನು ಬದಲಿಸಿದೆ. ಆ ಋಣವನ್ನು ಹೀಗೆ ತೀರಿಸುತ್ತಿದ್ದೇನೆ. ಪೋಷಕರೇ, ನಿಮ್ಮ ಮಕ್ಕಳನ್ನು ಈ ಕಾಲೇಜಿಗೆ ಸೇರಿಸಿ. ಸಂಪರ್ಕ ಸಂಖ್ಯೆ:

ಕಚೇರಿ ಸಂಖ್ಯೆ: 08242465610

*ಪ್ರಾಂಶುಪಾಲರು*
9480157954
9980063029

*ಕಾಲೇಜಿನ ಹಳೆ ವಿದ್ಯಾರ್ಥಿ*