ಉಳ್ಳಾಲ : ಏಪ್ರಿಲ್ 14.ಇಲ್ಲಿಯ ಮಾಸ್ತಿಕಟ್ಟೆ ನಿವಾಸಿ, ಉದ್ಯಮಿ, ಯುವ ನಾಯಕ ಸಲೀಂ ಯು ಬಿ ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವರು. ಯಾವುದೇ ಹುದ್ದೆ, ಪ್ರಚಾರ ಬಯಸದೇ ಕಾಂಗ್ರೆಸ್ ಪಕ್ಷದ ಸೇವೆ ಮಾಡುತ್ತಿದ್ದಾರೆ.
ಪಕ್ಷ ಸಂಘಟನೆ , ಹೋರಾಟ ಮತ್ತು ಸಮಾಜ ಸೇವೆ ನಿಸ್ವಾರ್ಥವಾಗಿ ದಶಕಗಳಿಂದ ಮಾಡುತ್ತಿದ್ದಾರೆ.
ರಾಜಕೀಯ ದಿಂದ ಬಹಳಷ್ಟು ದೂರ ಇದ್ದು ಶಾಂತಿ,ಸ್ನೇಹ, ಪರಸ್ಪರ ಗೌರವ, ನಂಬಿಕೆಯ ರಾಜಕೀಯದ ಬಗ್ಗೆ ಒಲವಿರುವ ಸಲೀಂ ಯು ಬಿ ಜಾತ್ಯತೀತ ಮೌಲ್ಯ ,. ಉತ್ತಮ ವಾಕ್ಚಾುರ್ಯ, ಪದ ಪ್ರಯೋಗ ಸ೦ಪೂರ್ಣ ಹಿಡಿತ ಹೊಂದಿರುವ ಕಾರಣದಿಂದಲೇ ಕಾಂಗ್ರೆಸ್ ಪಕ್ಷ ವಿವಿಧ ಜವಾಬ್ದಾರಿ ಪದೇ ಪದೇ ನೀಡುತ್ತಿರುತ್ತದೆ.
ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಅವಿರತವಾಗಿ ಕೆಲಸ ಮಾಡಿರುವ ಸಲೀಂ. ಸ್ಪೀಕರ್ ಯು ಟಿ ಅಬ್ದುಲ್ ಖಾದರ್ ಗೆಲುವಿಗಾಗಿ ಬಹಳಷ್ಟು ಶ್ರಮ ಪಟ್ಟಿದ್ದರು. ತಮ್ಮ ಸ್ವತಃ ಕಾರಲ್ಲೇ ಹಲವು ಹಿರಿಯ ಮತದಾರರನ್ನು ಮತಗಟ್ಟೆಗೆ ಕೊಂಡೊಯ್ದು ಮತ ಹಾಕಿಸುತ್ತಿದ್ದರು.

ಕಳೆದ ಬಾರಿ KPCC ಅಲ್ಪಸಂಖ್ಯಾತರ ಘಟಕದ ಕರಾವಳಿ ವಲಯದ ಅಧ್ಯಕ್ಷ, KPCC ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ, ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿಯೂ ಪ್ರಾಮಾಣಿಕ ವಾಗಿ ಜವಾಬ್ದಾರಿ ನಿರವಹಿಸದ್ದಾರೆ . ಅಬ್ಬರ ಪ್ರಚಾರ ಮಾಡದೆ. ಸಾಮಾಜಿಕ ಜಾಲತಾಣದಲ್ಲಿ ವಿಜ್ರಂಭಣೆ ಮಾಡದೆ ತಮ್ಮ ಪಾಡಿಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
.
ಈಗ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಉಪಾಧ್ಯಕ್ಷರ ಜವಾಬ್ದಾರಿಯನ್ನು ಯು ಬಿ ಸಲೀಂ ರಿಗೆ ಪಕ್ಷ ವಹಿಸಿ ಕೊಟ್ಟಿದೆ. ಸಕ್ರಿಯ ವಾಗಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಉಳ್ಳಾಲ ದಿಂದ ಕನಿಷ್ಟ ಅರುವತ್ತು ಸಾವಿರ ಮತ ಲೀಡ್ ಕೊಡಿಸಬೇಕೆಂದು ಪಣತೊಟ್ಟಿದ್ದಾರೆ. ಸಲೀಮ್ ರವರು ಇಡೀ ಜಿಲ್ಲಯಾದಂತ ಹಿಂದೂ ಮತ್ತು ಕ್ರೈಸ್ತ ಸಮುದಾಯದ ಸಾವಿರಾರು ಯುವ ಮಿತ್ರ ಪಡೆ ಕಟ್ಟಿಕೊಡಿರುತ್ತಾರೆ. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತು ಕಾಂಗ್ರೆಸ್ ಮುಖಂಡ ಯು ಟಿ ಇಫ್ತಿಕಾರ್ ರವರ. ಮಾರ್ಗದರ್ಶನದಂತೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.