*🔹ಲೈಲತುಲ್ ಖದ್‌ರ್ – ನಿರೀಕ್ಷೆಯ ರಾತ್ರಿಗೆ ಒಂದು ಮಾದರಿ ಟೈಂ ಟೇಬಲ್*
〰️〰️〰️〰️〰️〰️〰️〰️

▪️ರಮಳಾನಿನ‌ ಕೊನೆಯ ಹತ್ತು ರಾತ್ರಿಗಳು ಲೈಲತುಲ್ ಖದರ್ ಆಗಲು ಹೆಚ್ಚಿನ‌ ಸಾಧ್ಯತೆಯಿರುವ ರಾತ್ರಿಗಳು.

▪️ಲೈಲತುಲ್ ಖದರ್ ನ ರಾತ್ರಿಯೆಂದರೆ ಸಾವಿರ ತಿಂಗಳಿಗಿಂತಲೂ ಶ್ರೇಷ್ಟವಾದ ರಾತ್ರಿ.

*▪️1000 ತಿಂಗಳು,*
ಅಂದರೆ 83 ವರ್ಷ, 4 ತಿಂಗಳು .
100 ವರ್ಷ ಬದುಕಿದ ಒಬ್ಬ ವ್ಯಕ್ತಿ, ಪ್ರಾಯಕ್ಕೆ ಬಂದ ನಂತರ ಮರಣದವರೆಗೂ ಜೀವನಪೂರ್ತಿ ಆರಾಧನಾ ನಿರತನಾದರೆ ಎಷ್ಟು ಪುಣ್ಯ ಸಿಕ್ಕೀತೋ ,
ಅಷ್ಟು ಪುಣ್ಯವನ್ನು ಆ ಒಂದು ರಾತ್ರಿಯ ಆರಾಧನೆಗಳಿಂದಲೇ ಸಾಧಿಸಬಹುದು!
ಅಂತಹ ಈ ರಾತ್ರಿಯ ಪ್ರತೀ ಕ್ಷಣವನ್ನೂ ಆರಾಧನೆಯಲ್ಲಿ ವ್ಯಯಿಸಬೇಕು.

*▪️ಗಮನಿಸಿ:*
1 ಸೆಕೆಂಡ್ – ವ್ಯರ್ಥವಾದರೆ ಹೆಚ್ಚು ಕಡಿಮೆ ಒಂದು ದಿನ ಹಾಳಾದಂತೆ.
1 ನಿಮಿಷ – 50 ದಿನಕ್ಕೆ ಸಮ!
1 ಗಂಟೆ – 8 ವರ್ಷಕ್ಕಿಂತ ಹೆಚ್ಚು!
ಇಡೀ ರಾತ್ರಿ 83 ವರ್ಷ 4 ತಿಂಗಳು!
.
▪️ಈ ವೇಳೆ ಉಪಯೋಗಿಸಬಹುದಾದ ಒಂದು ವೇಳಾಪಟ್ಟಿ ಇಲ್ಲಿದೆ. ಸೌಕರ್ಯಾರ್ಥ ಬದಲಿಸಿಕೊಳ್ಳಬಹುದಾದ ಒಂದು ಮಾರ್ಗದರ್ಶನವಷ್ಟೆ. .
〰️〰️〰️〰️〰️〰️〰️〰️

*▪️ಮಗ್ರಿಬ್ – ಇಶಾ – ಸುಬಹಿ ಇಮಾಂ‌ ಜಮಾಅತ್ತಾಗಿ ನಮಾಝ್ ನಿರ್ವಹಿಸಿರಿ.*

▪️ ಮಗ್ರಿಬ್ ಅದಾನ್ ಮುಂಚೆ ವುಳೂ ಮಾಡಿ, ತಸ್ಬೀಹ್ ಹೇಳಿರಿ.
سبحان الله وبحمده سبحان الله العظيم وبحمده استغفر الله

ಅದಾನ್ ಸ್ವಲ್ಪ ಮುಂಚೆ ದುಆ ಮಾಡಿರಿ.
ಇಫ್ತಾರ್ .
ಮಗ್ರಿಬ್ ನಮಾಝ್ ಮುಂಚೆ 2 ರಕ‌ಅತ್, ನಂತರ 2 ರಕ‌ಅತ್ ರವಾತಿಬ್ ‌ಸುನ್ನತ್ ನಮಾಝ್.

*▪️ಇಫ್ತಾರ್, ಭೋಜನ*
*▪️ಖುರ್ಆನ್ ಪಾರಾಯಣ*
ಸೂರಾ ಫಾತಿಹಾ,
ಸೂರಾ ಯಾಸೀನ್,
ಸೂರಾ ವಾಖಿಅಃ,
ಸೂರಾ ಮುಲ್ಕ್,
ಸೂರಾ ಸಜದಃ
ಸೂರಾ ಮುಝ್ಸಮ್ಮಿಲ್
ಹದ್ದಾದ್

*▪️ಇಶಾ ನಮಾಝ್.*
ನಮಾಝ್ ಮುಂಚೆ ಮತ್ತು ನಂತರ 2 ರಕ‌ಅತ್ ರವಾತಿಬ್ ಸುನ್ನತ್ ನಮಾಝ್.
ತರಾವೀಅ್ – 20 ರಕ‌ಅತ್.
ವಿತ್ರ್ ನಮಾಝ್ – ಕನಿಷ್ಠ 3 ರಕ‌ಅತ್.

ಸ್ವಲ್ಪ ವಿಶ್ರಾಂತಿ.

*▪️ರಾತ್ರಿ 11 ರ ನಂತರ‌ ದ್ಸಿಕ್ರ್_ಮಜ್ಲಿಸ್*

*▪️استغفر الله العظيم – 100*
*▪️.لاإلاه إلا الله – 100*
*▪️.لا حول ولا قوة إلا بالله العلي العظيم – 33*
*▪️.سبحان الله والحمد لله ولاإلاه إلا الله والله أكبر. – 33*
*▪️.لاإلاه إلا أنت سبحانك إني كنت من الظالمين. – 33*
*▪️.لا إلاه إلا الله وحده لا شريك له له الملك وله الحمد يحيي ويميت بيده الخير وهو على كل شيئ قدير – 33*

*▪️ಸ್ವಲಾತ್*
اللهم صل على سيدنا محمد وعلى اله وصحبه وسلم
(100 ಬಾರಿ/ 10 ನಿಮಿಷ)
*▪️ಸೂರಾ ಇಖ್ಲಾಸ್ …*
(100 ಬಾರಿ/ 15 ನಿಮಿಷ)

*▪️ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿ ಕೊಟ್ಟ ಲೈಲತುಲ್ ಖದ್ರ್ ನ ವಿಶೇಷ ಪ್ರಾರ್ಥನೆ*
اللهم إنك عفو تحب العفو فاعف عني
*ಅಲ್ಲಾಹುಮ್ಮಾ‌ ಇನ್ನಕ ಅಫ್‌ವುನ್, ತುಹಿಬ್ಬುಲ್ ಅಫ್‌ವಾ, ಫ‌ಅಫು ಅನ್ನೀ*
(100 ಬಾರಿ, ಸಾಧ್ಯವಾದರೆ 300 ಬಾರಿ /10 ನಿಮಿಷ)

*▪️ಅಶ್‌ಹದು ಅಲ್ಲಾಇಲಾಹ ಇಲ್ಲಲ್ಲಾಹ್.*
*ಅಸ್ತ್‌ತಗ್‌ಫಿರುಲ್ಲಾಹ್.*
*ಅಲ್ಲಾಹುಮ್ಮಾ ಇನ್ನೀ ಅಸ‌ಅಲುಕಲ್ ಜನ್ನಃ*
*ವ‌ಅಊದ್ಸುಬಿಕ ಮಿನ ನ್ನಾರ್.*
*اشهد أن لا إله الا الله استغفر الله اللهم نسألك الجنة ونعوذ بك من النار*
(33 ಬಾರಿ/ 5 ನಿಮಿಷ)

*▪️ತಸ್ಬೀಹ್ ನಮಾಝ್*
*سبحان الله والحمدلله ولا اله الا الله والله اكبر*
ಎಂಬ ದ್ಸಿಕ್ರ್ 300 ಬಾರಿ ಬರುತ್ತದೆ
ದುಆ
ಖುರ್‌ಆನ್ ಪಾರಾಯಣ
ಸ್ವಲ್ಪ ಹೊತ್ತು ನಿದ್ರೆ

*▪️ನಿದ್ರೆಯಿಂದ ಎದ್ದ ನಂತರ ತಹಜ್ಜುದ್*
(ಕನಿಷ್ಠ 2 ರಕ್ಅತ್)
ತೌಬಾ/ದ್ಸಿಕ್ರ್, ದುಆ

*▪️ಇವುಗಳನ್ನು ಸಾಧ್ಯವಾದಷ್ಟು ಹೆಚ್ಚಿಸಿರಿ*
اللهم إنك عفو تحب العفو فاعف عني
لا اله الا انت سبحانك اني كنت من الظالمين

*▪️ದೊಡ್ಡ ಪ್ರತಿಫಲವಿರುವ ಚಿಕ್ಕ, ಚಿಕ್ಕ ಸೂರತ್‌ – ಆಯತ್‌ಗಳನ್ನು ಸಾಧ್ಯವಾದಷ್ಟು ಹೇಳಿರಿ.*

ಸೂರಾ ಇಖ್ಲಾಸ್
ಸೂರಾ ಫಲಕ್
ಸೂರಾ ನ್ನಾಸ್.
ಸೂರಾ ಕಾಫಿರೂನ್.
ಸೂರಾ ತಕಾಸುರ್
ಸೂರಾ ಖದರ್.
ಸೂರಾ ಝ್ಸಿಲ್ ಝಾಲ್.
ಆಯತುಲ್ ಕುರ್ಸಿಯ್ಯ್.
ಆಮನ‌ ರ್ರಸೂಲ್.
ಲವ್ ಅನ್‌ಝಲ್‌ನಾ..

*▪️ದಾನ*
ಸಹಾಯಕ್ಕೆ ಅರ್ಹರಾದ ವ್ಯಕ್ತಿ/ವರ್ಗವನ್ನು ಮನದಲ್ಲಿ ಇಟ್ಟುಕೊಂಡು ಒಂದು ಸಂಖ್ಯೆಯನ್ನು ಅವರಿಗೆ ತೆಗೆದಿಡಬೇಕು. ಮುಂದೆ ಕೊಟ್ಟರಾಯಿತು.
ಸಾಧ್ಯವಾಗುವುದಾದರೆ ಅಗಲೇ ಕೊಡಿರಿ.
ದುಆ ಸ್ವೀಕೃತಿಗೆ ದಾನ ಬಹಳ ಪರಿಣಾಮಕಾರಿ.

*▪️ಪ್ರತಿಜ್ಞಾ ಸ್ವೀಕಾರ*
ಬದುಕಿನಲ್ಲಿ ರೂಢಿಯಾಗಿ ಬಿಟ್ಟಿರುವ ಪಾಪಗಳನ್ನು ಪಟ್ಟಿ ಮಾಡಿ, ಅವುಗಳನ್ನು ತ್ಯಜಿಸಲು ಪ್ರಮಾಣ ಮಾಡಿರಿ.
ಕೆಲವು ವಿಶೇಷ ಸತ್ಕರ್ಮಗಳನ್ನು (ಉದಾಹರಣೆಗೆ; ಳುಹಾ, ತಹಜ್ಜುದ್, ದಿನಕ್ಕಿಷ್ಟು ಸ್ವಲಾತ್ ದ್ಸಿಕ್ರ್, ಪ್ರತಿ ಸೋಮವಾರ ಉಪವಾಸ, ಪ್ರತಿ ರಾತ್ರಿ ಮಲಗುವಾಗ ವುಳೂ ಇತ್ಯಾದಿ) ರೂಢಿ ಮಾಡಲು ಪ್ರತಿಜ್ಞೆ ಮಾಡಿರಿ.

▪️ಸಹರಿ
ತಸ್ಬೀಹ್
ಸುಬಹಿ ನಮಾಝ್
( ಸುಬಹಿ‌ ಮುಂಚೆ 2 ರಕ‌ಅತ್ ಸುನ್ನತ್ ನಮಾಝ್ )
ಸೂರ್ಯೋದಯದ ವರೆಗೆ
ಖುರ್ಆನ್, ದ್ಸಿಕ್ರ್, ದುಆ ನಡೆಸುವುದು.

*▪️ವಿಶೇಷ ಸೂಚನೆ*
ಪ್ರತಿಕ್ಷಣವೂ ವುಳೂಅ್‌ನಲ್ಲಿರಿ. ವುಳೂ ಮುರಿದ ಕೂಡಲೇ ಮತ್ತೆ ಮಾಡಿ.

▪️ನಮಾಝ್‌ಗಳನ್ನು ಜಮಾಅತ್ ಆಗಿ ಮಾಡಲು ಪ್ರಯತ್ನಿಸಿ.
ಪುರುಷರು ಈತಿಕಾಫ್ ನಿಯ್ಯತ್ ನೊಂದಿಗೆ ಮಸೀದಿಯಲ್ಲಿರುವುದು

▪️ಇಲ್ಲಿರುವ ಆರಾಧನೆಗಳನ್ನು ಒಟ್ಟುಗೂಡಿ ಮಾಡುವುದು ಉತ್ತಮ. ಒಬ್ಬಂಟಿಯಾಗುವಾಗ
ಆಲಸ್ಯ ಬಂದೀತು.

▪️ಜೊತೆಗೂಡಿ ಮಾಡುವಾಗ
ಅನ್ಯ ಸ್ತ್ರೀ ಪುರುಷ ದರ್ಶನ
(ಉದಾಹರಣೆ; ಸಹೋದರನ ಪತ್ನಿ, ಪತಿಯ ಸಹೋದರ) ಉಂಟಾಗದಂತೆ ನೋಡಿಕೊಳ್ಳಿ.
ಅನ್ಯ ಸ್ತ್ರೀ ಪುರುಷರು ಪ್ರತ್ಯೇಕ ಕೋಣೆಗಳಲ್ಲಿ ಇರುವುದು ಉತ್ತಮ.

▪️ಖುರ್‌ಆನ್ ಸರಿಯಾಗಿ ಓದಲು ಗೊತ್ತಿಲ್ಲದವರು ಗೊತ್ತಿರುವುದನ್ನು ಮಾತ್ರ ಓದಿರಿ.
ಇಲ್ಲವೇ ಅನ್ಯ ದ್ಸಿಕೃ್, ಸ್ವಲಾತ್‌ಗಳಲ್ಲಿ ತೊಡಗಿಸಬಹುದು.

▪️ನಮಾಝ್‌ಗಳು ಶಾಂತ ಚಿತ್ತತೆ, ಸಮಾಧಾನದಿಂದ ಆದಷ್ಟು ದೀರ್ಘವಾಗಿರಲಿ. ತರಾತುರಿಯಲ್ಲಿ
ಮುಗಿಸಬೇಡಿ
ಇಬಾದತ್ ಮಾಡುವುದು ಅಲ್ಲಾಹು ಸ್ವೀಕರಿಸುವುದಕ್ಕೆ ಎಂಬ ಪ್ರಜ್ಞೆ ಇರಲಿ.

▪️ಉಪವಾಸ ಕಾಲದಲ್ಲಿ ರಾತ್ರಿ ಸ್ನಾನ ಉತ್ತಮ.
ಭೋಜನ, refreshment ಅವಧಿಯಲ್ಲಿ ಸ್ನಾನ ಮುಗಿಸಲು ಪ್ರಯತ್ನಿಸಿ.ತಣ್ಣೀರ ಸ್ನಾನ ಉತ್ತಮ.

▪️ತಹಜ್ಜುದ್ ನಿರ್ವಹಿಸುವುದಕ್ಕೆ ನಿದ್ದೆ ಅನಿವಾರ್ಯವಾದ್ದರಿಂದ ತುಸು‌ ಹೊತ್ತು ಮಾತ್ರ ನಿದ್ದೆ ಸಾಕು. ವುಳೂಅ್‌ನೊಂದಿಗೆ ಆಗಿರಬೇಕು. ನಿದ್ದೆ ಬರುವವರೆಗೂ ಮನಸ್ಸಿನಲ್ಲಿ
ಅಲ್ಲಾಹನಿರಲಿ.

▪️ಆಹಾರ ಅತಿಯಾದರೆ ಆಲಸ್ಯ ಖಚಿತ. ಕರಿದ ತಿಂಡಿಗಳಂತೂ ಬೇಡವೇ ಬೇಡ. ಆರಾಧನೆಗೆ ಶಕ್ತಿ ಸಿಗಲು ತಿನ್ನುತ್ತಿದ್ದೇನೆ ಎನ್ನುವ ನಿಯ್ಯತ್ ಇದ್ದರೆ ಭೋಜನವೂ ಆರಾಧನೆಯಾಗುತ್ತದೆ.

▪️ಇದೊಂದು ಮಾದರಿ ಅಷ್ಟೇ. ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಸಮಯದ ಸದುಪಯೋಗವಾಗುವಂತೆ ನೋಡಿಕೊಳ್ಳಿ

▪️ಲೈಲತುಲ್_ಖದ್‌ರ್ ರಾತ್ರಿ ಆದರೂ ಅದರ ಹಗಲಿಗೂ ಮಹತ್ವವಿದೆ.

ನಿಮ್ಮ ಪ್ರಾರ್ಥನೆಯ ಜೊತೆಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಉಮ್ಮತ್‌ಗಳಿಗೂ ಪ್ರಾರ್ಥಿಸಿರಿ .
➖➖➖➖➖➖