*ಉಳ್ಳಾಲ ಜುಮಾ ಮಸೀದಿ (402) ಮತ್ತು ಸಯ್ಯಿದ್ ಮದನಿ ಮತ್ತು ದರ್ಗಾ ಸಮಿತಿಯಿಂದ ಅಧಿಕೃತ ಯೂಟೂಬ್ ಚಾನೆಲ್ ಪ್ರಾರಂಭ.*

ಉಳ್ಳಾಲ ಜುಮಾ ಮಸೀದಿ (402) ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿಯ ವತಿಯಿಂದ ಅಧಿಕೃತವಾಗಿ ಯೂಟೂಬ್ ಚಾನೆಲನ್ನು ದರ್ಗಾ ಕಛೇರಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.

www.YouTube.com/@ullaldargaofficial ಎಂಬ ಲಿಂಕಿನೊಂದಿಗೆ ಚಾನೆಲ್ ಕಾರ್ಯಾಚರಿಸುತ್ತದೆ.
ದರ್ಗಾ ಸಮಿತಿಯ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಈ ಚಾನೆಲ್ ಬಿತ್ತರಗೊಳಿಸುತ್ತದೆ. ಕಾರ್ಯಕ್ರಮದ ಅಪ್ಡೇಟ್ ಪಡೆಯಲು ಚಾನೆಲನ್ನು Subscribe ಮಾಡಬಹುದಾಗಿದೆ.

ದರ್ಗಾ ಸಮಿತಿ ಅಧ್ಯಕ್ಷರಾದ ಬಿ.ಜಿ‌ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿ ಇಸಾಕ್ ಮೇಲಂಗಡಿ, ಮುಸ್ತಫ ಮದನಿ ನಗರ, ಸದಸ್ಯರಾದ ಝೈನಾಕ ಮೇಲಂಗಡಿ, ಯು.ಡಿ ಅಶ್ರಫ್ ಮತ್ತು ಅಬೂಬಕ್ಕರ್ ಅಲಿನಗರ ಉಪಸ್ಥಿತರಿದ್ದರು.