ಅಬುದಾಬಿ ಮಾರ್ಚ್ 27 : ಇಲ್ಲಿನ ಪಂಚತಾರಾ ಹೋಟೆಲ್ ರೋಠಾಣದಲ್ಲಿ ಅಂತರಾಷ್ಟ್ರೀಯ ಗಣ್ಯರ ವಿಶೇಷ ಇಫ್ತಾರ್ ಕೂಟ ನಡೆಯಿತು. ಭಾರತದ ಪ್ರತಿನಿಧಿಗಳ ತಂಡದ ನೇತೃತ್ವವನ್ನು ಕನ್ನಡಿಗ ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ರವರು ವಹಿಸಿದ್ದರು.

ಅಂತರಾಷ್ಟ್ರೀಯ ಮುಸ್ಲಿಂ ರಾಷ್ಟ್ರಗಳ ಒಕ್ಕೂಟವಾದ ಒಐಸಿ ಮತ್ತು ಭಾರತ ನಡುವಿನ ವ್ಯಾಪಾರ ಸಂಬಂಧಗಳ ಸಂಸ್ಥೆಯ ಅಧ್ಯಕ್ಷರಾಗಿ ಇತ್ತೀಚಿಗೆ ಫಾರೂಕ್ ರವರು ಆಯ್ಕೆಯಾಗಿದ್ದರು. ಈ ವಿಶೇಷ ಗೌರವಕ್ಕೆ ಅವರನ್ನು ಅತಿಥಿಗಳು ಅಭಿನಂದಿಸಿದರು. ಫಾರೂಕ್ ರವರ ಪತ್ನಿ, ಮಕ್ಕಳು. ಮೊಮ್ಮಕ್ಕಳು, ಸಹೋದರರು, ಮಾಜಿ ಶಾಸಕ ಮೈದೀನ್ ಭಾವ ಮತ್ತು ಭಾರತದ ಹಲವರು ಗಣ್ಯರು ನಿಯೋಗದಲ್ಲಿ ಪಾಲ್ಗೊಂಡಿದ್ದರು.


ಅಬುದಾಬಿಯ ಸರಕಾರದ ಉನ್ನತ ಅಧಿಕಾರಿಗಳು, ಆಫ್ರಿಕಾ ಮತ್ತು ಅರಬ್ ಮುಸ್ಲಿಂ ರಾಷ್ಟ್ರಗಳ ರಾಯಭಾರಿಗಳು, ಉದ್ಯಮಿಗಳು, ಗಣ್ಯರು ಮೊದಲಾದವರು ಭಾಗವಹಿಸಿದ್ದರು . ಬಿ ಎಂ ಫಾರೂಕ್ ರವರು ವಿಶೇಷ ಉಪನ್ಯಾಸ ನೀಡಿದರು

ಭಾರತ ಮತ್ತು ಮುಸ್ಲಿಂ ರಾಷ್ಟ್ರಗಳ ಮಧ್ಯೆ ವ್ಯಾಪಾರ ವಹಿವಾಟು ಇನ್ನೂ ಹೆಚ್ಚಿಸುವ ಬಗ್ಗೆ ಅಭಿಪ್ರಾಯ ಮಂಡಿಸಲಾಯಿತು. ಶತಮಾನಗಳ ಭಾರತ ಮತ್ತು ಇಸ್ಲಾಮಿ ರಾಷ್ಟ್ರಗಳ ಬಾಂಧವ್ಯ ಇನ್ನೂ ಹೆಚ್ಚು ಗಟ್ಟಿಗೊಳಿಸಲು ಕರೆ ನೀಡಲಾಯಿತು.