ಗೆ
ಸನ್ಮಾನ್ಯಶ್ರೀ ಸಿದ್ಧರಾಮಯ್ಯ ರವರು
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ ವಿಧಾನಸೌಧ
ಬೆಂಗಳೂರು.

ಸನ್ಮಾನ್ಯಶ್ರೀ ಬಿ.ಝಡ್. ಜಮೀರಅಹ್ಮದ ಖಾನ್ ರವರು
ಅಲ್ಪಸಂಖ್ಯಾತ ಕಲ್ಯಾಣ ವಕ್ಫ್ ಮತ್ತು ನಗರಾಭಿವೃದ್ಧಿ ಸಚಿವರು
ವಿಕಾಸ ಸೌಧ ಬೆಂಗಳೂರು.

ಸನ್ಮಾನ್ಯಶ್ರೀ ನಸೀರಅಹ್ಮದ ರವರು
ಪರಿಷತ ಸದಸ್ಯರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು
ವಿಧಾನ ಸೌಧ ಬೆಂಗಳೂರು.

ಮಾನ್ಯಶ್ರೀ ಡಾ, ಸೈಯ್ಯದ ನಾಸೀರ ಹುಸೇನ ರವರು
ರಾಜ್ಯಸಭೆಯ ಸಂಸದರು ನವದೆಹಲಿ.

ವಿಷಯ: ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಅವಕಾಶ ಸ್ಥಾನಮಾನ ಹಾಗೂ ೨ಬಿ ಮೀಸಲಾತಿಯನ್ನು ಯಥಾವತ್ತ ಪುನಃ ಸ್ಥಾಪಿಸಿ ಮಿಸಲಾತಿ ಹೆಚ್ಚಿಸುವುದು ಹಾಗೂ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವ ಕುರಿತು.

ಮಾನ್ಯರೆ,

ಮೇಲ್ಕಾಣಿಸಿದ ವಿಷಯ ಕುರಿತು ಮಾನ್ಯ ಘನವೆತ್ತ ಸರ್ಕಾರಕ್ಕೆ ಕರ್ನಾಟಕ ಮುಸ್ಲಿಂ ಯೂನಿಟಿ ಸಂಘಟನೆಯ ಮನವಿ ಕರ್ನಾಟಕ ಮುಸ್ಲಿಂ ಯೂನಿಟಿಯು ರಾಜ್ಯದ ಮುಸ್ಲಿಂ ಸಮುದಾಯದ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಉದ್ಯೋಗ ಕ್ಷೇತ್ರದಲ್ಲಿ ಸರ್ವತೋಮುಖ ಅಭಿವೃದ್ಧಿ ಹಾಗೂ ಮುಸ್ಲಿಂ ರ ೨ಬಿ ಮಿಸಲಾತಿಗಾಗಿ ಸಕ್ರಿಯವಾಗಿರುವ ಸಂಘಟನೆಯಾಗಿರುವುದು ತಮಗೆಲ್ಲ ಗೊತ್ತಿರುವ ಸಂಗತಿ.
ರಾಜ್ಯದ ಜನತೆಯ ಪರವಾಗಿ ಕರ್ನಾಟಕ ಮುಸ್ಲಿಂ ಯೂನಿಟಿಯು ಈ ಕೆಳಕಂಡ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಾಮಾಜಿಕ ನ್ಯಾಯ ನೀಡಿ ರಾಜಧರ್ಮ ಪಾಲಿಸಬೇಕು ಎಂಬುದಾಗಿ ಆಗ್ರಹಿಸುತ್ತದೆ.

 ರಾಜ್ಯದ ಬಿಜೆಪಿ ಸರ್ಕಾರ ರದ್ದುಗೊಳಿಸಿರುವ ೨ಬಿ ಕೆಟಗೆರಿಯ ೪% ಮೀಸಲಾತಿಯನ್ನು ತಾವು ಸಚಿವ ಸಂಪುಟದ ಸಭೆಯಲ್ಲಿ ವಿಷಯ ಮಂಡಿಸಿ ಈ ಹಿಂದಿನ ಸರ್ಕಾದ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡು ಶೇ. ೪% ಮೀಸಲಾತಿಯನ್ನು ಪುನಃ ಯಥಾಸ್ಥಿತಿ ಮುಂದುವರೆಸಲಾಗಿರುತ್ತದೆ ಎಂಬ ನಿರ್ಧಾರ ಪ್ರಕಟಿಸಬೇಕು, ಮತ್ತು ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಭಾರತದ ಸರ್ವೊಛ್ಛ ನ್ಯಾಯಾಲಯಕ್ಕೆ ದಾಖಲೆ ಸಮೆತ ಕಳುಹಿಸಬೇಕು.
 ರಾಜ್ಯದ ಕಾಂಗ್ರೇಸ ಪಕ್ಷದ ನಾಯಕರ ಮೇಲೆ ಭರವಸೆ ಮತ್ತು ನಂಬಿಕೆ ಇಟ್ಟು ಶೇ. ೯೫% ಮುಸಲ್ಮಾನರು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತಂದು ಬೀಗುತ್ತಿದ್ದಾರೆ. ಆದ್ದರಿಂದ ಪಕ್ಷದ ಮುಸ್ಲಿಂ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತೇವೆ.
 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರಿಗೆ ನೀಡುತ್ತಿರುವ ಒಂದು ಕೋಟಿ ರೂ ವರೆಗಿನ ಎಲ್ಲ ಕಾಮಗಾರಿಗಳ ಮೀಸಲಾತಿಯನ್ನು ರಾಜ್ಯದ ಅಲ್ಪಸಂಖ್ಯಾತ ವರ್ಗದ ಎಲ್ಲ ಗುತ್ತಿಗೆದಾರರಿಗೂ ಅನ್ವಯಿಸುವ ಕ್ರಮವಾಗಬೇಕು.
 ಅಲ್ಪಸಂಖ್ಯಾತ ಸಮುದಾಯದ ಆಡಳಿತ ಮಂಡಳಿಗಳು ನಡೆಸುತ್ತಿರುವ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅನುದಾನಕ್ಕೊಳಪಡಿಸಬೇಕು. ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಟ್ಟಡ ಮತ್ತು ಇತರೆ ಮೂಲಭೂತ ಸೌಕರ್ಯಕ್ಕೆ ಕಾರ್ಯ ಯೋಜನೆ ಜಾರಿಗೊಳಿಸಬೇಕು.
 ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಗುಂಪು ಘರ್ಷಣೆ/ಗಲಾಟೆಗಳಲ್ಲಿ ಸ್ವಯಂ ಪ್ರೇರಿತ ಪ್ರಕರಣಗಳಲ್ಲಿ ಪೊಲೀಸರು ಸಮುದಾಯದ ಅಮಾಯಕರನ್ನು ಸಿಲುಕಿಸಿದ್ದು ಅಂಥಹ ಪ್ರಕರಣಗಳನ್ನು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಹಿಂಪಡೆದುಕೊಳ್ಳಬೇಕೆAದು ಒತ್ತಾಯಿಸುತ್ತೇವೆ.
 ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ನದಾಫ/ಪಿಂಜಾರ ಜನಾಂಗದ ಅಭಿವೃದ್ಧಿಗಾಗಿ ಅನುಷ್ಠಾನಗೊಂಡಿರುವ ನಿಗಮ/ಮಂಡಳಿಯನ್ನು ತ್ವರಿತಗತಿ ಕಾರ್ಯರೂಪಕ್ಕೆ ತರಬೇಕೆಂದು ಆಗ್ರಹ ಪಡಿಸುತ್ತೆವೆ.

ವಂದನೆಗಳೊAದಿಗೆ,

ತಮ್ಮ ವಿಶ್ವಾಸಿ