*ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರುಗಳ ಮತ್ತು ಕಾರ್ಯಕರ್ತರುಗಳ ಗಮನಕ್ಕೆ…*

*ಕಳೆದ ಮೂವತ್ತು ವರ್ಷಗಳಿಂದ ಕೈತಪ್ಪಿದ ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ಹೊಸ ಪ್ರಯೋಗ ನಡೆಸಲು ಜಿಲ್ಲಾ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ಧತೆ ನಡೆಸಿದ್ದು, ಈ ಬಗ್ಗೆ ಡಿ.02, 2023 ಶನಿವಾರ ಸಂಜೆ 5-30ಕ್ಕೆ ಲೋಕಸಭಾ ಚುನಾವಣೆಯ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಮಧು ಬಂಗಾರಪ್ಪ ಮಂಗಳೂರು ಭೇಟಿ ಸಂದರ್ಭದಲ್ಲಿ ಗಮನಹರಿಸಲು ಮುಂದಾಗಿದ್ದಾರೆ.*

*ಕಾರ್ಯಕರ್ತರುಗಳೇ ಗಮನಿಸಿ…*

*ಕಳೆದ 30 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸ್ಥಾನವನ್ನು ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುತ್ತಿರುವುದು ತಮಗೆಲ್ಲರಿಗೂ ಗೊತ್ತೇ ಇದೆ.*

*ಆ ಎಲ್ಲಾ ಸಂದರ್ಭಗಳಲ್ಲೂ ಕಾಂಗ್ರೆಸ್ಸಿಗೆ ಬೆನ್ನೆಲುಬಾಗಿ ನಿಂತವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತ ಮತದಾರರಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಬಹುಮತದಿಂದ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರು 85% ಬೆಂಬಲಿಸಿದ್ದು ಅಕ್ಷರಶಃ ನಿಜ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅನ್ನು ಶೇಕಡ 95% ಬೆಂಬಲಿಸಿದ್ದು ಇದೇ ಅಲ್ಪಸಂಖ್ಯಾತರ ಮತದಾರರು.*

*ಈಗಾಗಲೇ ಕಳೆದ ಹಲವಾರು ಚುನಾವಣೆಗಳಲ್ಲಿ ಬಿಲ್ಲವರಿಗೆ ಮತ್ತು ಬಂಟ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷದ ಲೋಕಸಭಾ ಟಿಕೆಟ್ ಗಳನ್ನು ನೀಡಿದ ಸಂದರ್ಭದಲ್ಲಿ ಸಮುದಾಯದ ಪ್ರಬಲ ನಾಯಕರು ತಮ್ಮದೇ ಸಮುದಾಯದ ಅಭ್ಯರ್ಥಿಯನ್ನು ಸೋಲಿಸಿದ್ದು ನಮಗೆ ಗೊತ್ತೇ ಇದೆ.*

*ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಅಭ್ಯರ್ಥಿಯಾಗಿ ವಿದ್ಯಾವಂತ, ಪ್ರತಿಭಾನ್ವಿತ ಉತ್ತಮ ಸಂಘಟಕ, ಜನರ ನಡುವೆ ಇರುವ ನೈಜ ನಾಯಕ, ಜನರ ಸಮಸ್ಯೆಗಳ ಮೂಲವನ್ನು ಅರಿಯುವಂತಹ ಹೃದಯವಂತ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಾರ್ಯಕರ್ತರ ಮಧ್ಯೆ ಇರುವಂತಹ ಡಾ. ಇಫ್ತೀಕಾರ್ ಅಲಿ ಫರೀದ್ ಯು ಟಿ ಯವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಲೋಕಸಭಾ ಟಿಕೆಟ್ ಅನ್ನು ನೀಡಿದರೆ ದಕ್ಷಿಣ ಕನ್ನಡ ಜಿಲ್ಲೆಯ ಜಾತ್ಯಾತೀತ ಮನಸ್ಸುಗಳು ಮತ್ತು ಕೋಮುವಾದವನ್ನು ಮಾನಸಿಕವಾಗಿ ಎದುರಿಸುವಂತಹ ಪ್ರತಿಯೊಬ್ಬ ತುಳುನಾಡಿನ ಮಕ್ಕಳು ಸ್ವ ಇಚ್ಛೆಯಿಂದ ಬೆಂಬಲಿಸಿ ಮುಂದಿನ ಲೋಕಸಭಾ ಚುನಾವಣೆಗೆ ಡಾಕ್ಟರ್ ಡಾ. ಇಫ್ತೀಕಾರ್ ಅಲಿ ಫರೀದ್ ಯು ಟಿ ಅವರನ್ನು ಖಂಡಿತವಾಗಿಯೂ ಗೆಲ್ಲಿಸುತ್ತಾರೆ.*

  • *ಕಾಂಗ್ರೆಸಿನ ಹೈಕಮಾಂಡ್ ನ ನಾಯಕರಿಗೆ ವಿನಯ ಪೂರ್ವಕವಾಗಿ ಹೇಳುತ್ತಿದ್ದೇನೆ…*
    *ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯಾವಂತ, ಬುದ್ಧಿವಂತ, ಅಲ್ಪಸಂಖ್ಯಾತ ನಾಯಕನೊಬ್ಬನ ಅಗತ್ಯ ಅಗತ್ಯವಿದೆ ಅದನ್ನು ಪೂರೈಸುವಲ್ಲಿ ಡಾ. ಇಫ್ತೀಕಾರ್ ಅಲಿ ಫರೀದ್ ಯು ಟಿ ನಿಜಕ್ಕೂ ಯಶಸ್ವಿಯಾಗುತ್ತಾರೆ.*

*- ಅಬ್ದುಲ್ ಖಾದರ್ ಅರಫಾ ಉಳ್ಳಾಲ.*