*▪️ಮುಸ್ಲಿಮರು ಯಾಕಾಗಿ ಫೆಲೆಸ್ತೀನನ್ನು ಪ್ರೀತಿಸುತ್ತಾರೆ ಗೊತ್ತಾ ?*

ಮುಸ್ಲಿಮರು ಅತ್ಯಧಿಕವಾಗಿ ಫೆಲೆಸ್ತೀನನ್ನು ಪ್ರೀತಿಸಲು ಕಾರಣ ..?

▪️ ಪ್ಯಾಲೆಸ್ತೀನ್ ಪ್ರವಾದಿಗಳ ನಾಡು,
ಅವರೆಲ್ಲರಿಗೂ ಶಾಂತಿ ಸಿಗಲಿ.

▪️ಪ್ರವಾದಿ ಇಬ್ರಾಹಿಂ (ಸ) ರವರು ಮೊದಲು ಪ್ಯಾಲೆಸ್ತೀನ್‌ಗೆ ವಲಸೆ ಹೋದರು.

▪️: ಪ್ರವಾದಿ ಲೂತ್ (‌ಅ‌) ರವರನ್ನು ಅಲ್ಲಾಹನು ಪ್ಯಾಲೆಸ್ತೀನ್‌ನಲ್ಲಿ ತಮ್ಮ ಜನರಿಗೆ ಸಂಭವಿಸಿದ ಶಿಕ್ಷೆಯಿಂದ ರಕ್ಷಿಸಿದನು.

▪️ ಪ್ರವಾದಿ ದಾವೂದ್ (ಸ) ಫೆಲೆಸ್ತೀನ್ ನ ನೆಲದಲ್ಲಿ ವಾಸಿಸುತ್ತಿದ್ದರು ಮತ್ತು ಇಲ್ಲಿ ಮಸೀದಿಯನ್ನು ನಿರ್ಮಿಸಿದರು.

▪️ ಪ್ರವಾದಿ ಸುಲೈಮಾನ್ (ಸ) ಫೆಲೆಸ್ತೀನ್ ನಲ್ಲಿ ಕುಳಿತು ಇಡೀ ಜಗತ್ತನ್ನೇ ಆಳಿದರು.
.
▪️: ಖುರ್‌ಆನ್‌ನಲ್ಲಿ ಇರುವೆ ಮತ್ತು ಸುಲೈಮಾನ್‌ ( ಅ ) ರವರ ನಡುವಿನ‌ ಸಂಭಾಷಣೆಯ ಪ್ರಸಿದ್ಧ ಕಥೆಯಿದೆ.
ಇದರಲ್ಲಿ ಇರುವೆಯು ತನ್ನ ಉಳಿದ ಇರುವೆಗಳಿಗೆ “ಓ ಇರುವೆಗಳೇ, ನಿಮ್ಮ ಬಿಲಗಳಿಗೆ ಹೋಗಿ ಅಡಗಿಕೊಳ್ಳಿ” ಎಂದು ಹೇಳುವ ಕಥೆಯು ಪ್ಯಾಲೆಸ್ತೀನ್ ನ ಅಶ್ಕೆಲೋನ್ ನಗರದ ಕಣಿವೆಯಲ್ಲಿ ನಡೆದಿದೆ.
ನಂತರ ಅದಕ್ಕೆ “ವಾದಿ ಅಲ್-ನಮ್ಲ್” ಎಂದು ಹೆಸರಿಸಲಾಯಿತು – ಇರುವೆಗಳ ಕಣಿವೆ”.

▪️ ಪ್ರವಾದಿ ಝಕರಿಯ್ಯ(ಸ) ರವರ ಮಿಹ್ರಾಬ್/ಪ್ರಾರ್ಥನಾ ಸ್ಥಳವೂ ಫೆಲೆಸ್ತೀನ್ ನ ಜೆರುಸಲೇಂ ನಗರದಲ್ಲಿದೆ.

▪️ ಪ್ರವಾದಿ ಮೂಸಾ (ಸ) ತಮ್ಮ ಸಂಗಡಿಗರಿಗೆ ಈ ದೇಶದ ಬಗ್ಗೆ ಮತ್ತು ಈ ಪವಿತ್ರ ನಗರವನ್ನು ಪ್ರವೇಶಿಸಲು ಹೇಳಿದರು.
ಶಿರ್ಕ್ ಮುಕ್ತ ಮತ್ತು ಪ್ರವಾದಿಗಳ ನಾಡು ಎಂಬ ಕಾರಣಕ್ಕಾಗಿ ಅವರು ಈ ನಗರವನ್ನು ಪವಿತ್ರ ಎಂದು ಕರೆದರು.

▪️ ಪೂಜ್ಯ ಮತ್ತು ಶುದ್ಧ ಕನ್ಯೆ ಸಯ್ಯಿದಿನಾ ಮರ್ಯಮ್ ( ರ ) ಪವಾಡದಂತೆ ಗರ್ಭಿಣಿಯಾಗಿ ಪ್ರವಾದಿ ಈಸಾ ( ಅ ) ರನ್ನು ಹೆತ್ತದ್ದು ಫೆಲೆಸ್ತೀನ್ ನ ಜೆರುಸಲೇಂನಲ್ಲಿ.

▪️ ಯಹೂದಿಗಳು ಪ್ರವಾದಿ ಈಸಾ (ಸ) ರವರನ್ನು ಕೊಲ್ಲಲು ಬಯಸಿದಾಗ ,
ಅಲ್ಲಾಹನು ಪ್ರವಾದಿ‌ ಈಸಾ ( ಅ ) ರನ್ನು ಜೆರುಸಲೆಮ್ನಿಂದ ಆಕಾಶಕ್ಕೆ ಮೇಲೆತ್ತಿದನು.

▪️ ಹೆರಿಗೆಯಾದ ಬಳಿಕ ಮಹಿಳೆ ದೈಹಿಕ ದೌರ್ಬಲ್ಯದ ಪರಮಾವಧಿಯಲ್ಲಿದ್ದಾಗ, ಇಂತಹ ಸ್ಥಿತಿಯಲ್ಲಿ‌ಸಿಹಿಯಾದ ಖರ್ಜೂರ ಪಡೆಯಲು ಸೈಯ್ಯಿದಿನಾ ಮರ್ಯಮ್ ಅವರು ಒಣಗಿದ ಮರವನ್ನು ಅಲುಗಾಡಿಸಿ ಸಿಹಿಯಾದ ಖರ್ಜೂರ ಪಡೆದದ್ದು ಈ ಪ್ಯಾಲೆಸ್ತೀನ್ ಮಣ್ಣಿನಲ್ಲಿ.

▪️ಅಂತ್ಯದಿನದಂದು ಈ ಪ್ಯಾಲೆಸ್ತೀನ್‌ಗೆ ಈಸಾ ನಬಿ ( ಅ ) ಮರಳುತ್ತಾರೆ.

▪️ ಇಮಾಂ ಮಹ್‌ದಿ ( ರ ) ರವರು ಪ್ಯಾಲೆಸ್ತೀನ್ ಗೆ ಆಗಮಿಸಿ, ಭಯೋತ್ಪಾದಕ‌ ಸಿಯೋನಿಷ್ಟ ಯಹೂದಿಗಳ ವಿರುದ್ಧ ಸಮರ ಸಾರಿ, ಅವರನ್ನು ನಾಶ ಮಾಡುತ್ತಾರೆ.

▪️ಪ್ರವಾದಿ ಈಸಾ (ಅ) ‌ಈ ಪೆಲೆಸ್ತೀನ್‌ನ ಬಾಬ್ ಲುದ್ ನಲ್ಲಿ ದಜ್ಜಲ್ ನನ್ನು ಕೊಲ್ಲುತ್ತಾರೆ

▪️ಗೋಗ್ ( ಯ‌ಅ್‌ಜೂಜ್ ) ಮತ್ತು ಮಾಗೋಗ್ ( ಮ‌ಅ್‌ಜೂಜ್ ) ಭೂಮಿಯಾದ್ಯಂತ ಹರಡಿ, ಗಲಭೆ‌ ಸೃಷಿಸಿದಾಗ ಅವರನ್ನು ಕೊಲ್ಲುವುದು ಇದೇ ಫೆಲೆಸ್ತೀನ್ ಭೂಮಿಯಲ್ಲಿ

▪️ ಖುರ್‌ಆನ್ ಹೇಳಿದ ತಾಲೂತ್ ಮತ್ತು ಗೋಲಿಯಾತ್ ಚರಿತ್ರೆ.
ಗೋಲಿಯಾತ್ ವಿರುದ್ಧ ತಾಲೂತ್ ( ರ ) ವಿಜಯದ ಕಥೆ ನಡೆದದ್ದು ಇದೇ ಫೆಲೆಸ್ತೀನ್ ನಲ್ಲಿ

▪️ ಐದು ನಮಾಝ್ ಕಡ್ಡಾಯವಾದ ಬಳಿಕ ಮುಸ್ಲಿಮರ ಮೊದಲ ಕಿಬ್ಲಾ ಎಂಬ ಗೌರವವೂ ಪ್ಯಾಲೆಸ್ತೀನ್ ಪಡೆದುಕೊಂಡಿದೆ.
ಹಿಜ್ರಾದ ನಂತರ, ಸಯ್ಯಿದಿನಾ ಜಿಬ್ರೀಲ್ (ಸ) ನಮ್ಮ ಪ್ರವಾದಿ‌‌ ﷺ ರವರಿಗೆ ಪ್ರಾರ್ಥನೆಯ ಸಮಯದಲ್ಲಿ ಮಸ್ಜಿದ್ ಅಲ್-ಅಕ್ಸಾ (ಜೆರುಸಲೇಂ) ನಿಂದ ಕಾಬಾ (ಮಕ್ಕಾ) ಗೆ ಮುಖವನ್ನು ತಿರುಗಿಸಲು ನಿರ್ದೇಶಿಸಿದರು.
ಈ ಘಟನೆ ನಡೆದ ಮಸೀದಿಯನ್ನು ಇಂದಿಗೂ ಕಿಬ್ಲಾತೈನ್ ಮಸೀದಿ ಎಂದು ಕರೆಯಲಾಗುತ್ತದೆ.

▪️ಪ್ರವಾದಿ ಪೈಗಂಬರ್ ﷺ ರು ಮಿಅ್‌ರಾಜ್ ( ಆಕಾಶ ಆರೋಹಣ ) ಹೊರಡುವ ಮುಂಚೆ ,
ಮಕ್ಕಾದಿಂದ ಬೈತುಲ್ ಮುಖದ್ದಸ್‌ಗೆ ಬಂದು,
ಹಿಂದಿನ ಎಲ್ಲಾ ಪ್ರವಾದಿಗಳನ್ನು ಕರೆಸಿ, ಅವರಿಗೆ ಇಮಾಂ ಆಗಿ ನಮಾಝ್ ಮಾಡಿ, ಅವರ ಆಶೀರ್ವಾದ ಪಡೆದು ಅಲ್ಲಾಹನನ್ನು ಸಂದರ್ಶಿಸಲು ಹೋದದ್ದು ಇದೇ ಭೂಮಿಯಿಂದ.

▪️ ಎಲ್ಲಾ ಪ್ರವಾದಿಗಳು
ನಮ್ಮ ಪ್ರವಾದಿ ﷺ ಹಿಂದೆ ಇಲ್ಲಿ ನಮಾಝ್ ಮಾಡಿದ್ದರು. ಹೀಗಾಗಿ, ಪ್ಯಾಲೆಸ್ತೀನ್ ಮತ್ತೊಮ್ಮೆ ಎಲ್ಲಾ ಪ್ರವಾದಿಗಳ ನಾಡಾಯಿತು.

▪️ಭೂಮಿಯ ಮೇಲೆ ನಿರ್ಮಿಸಲಾದ ಮೊದಲ ಮಸೀದಿ ಯಾವುದು ಎಂದು ನಾನು ಅಲ್ಲಾಹನ ಸಂದೇಶವಾಹಕರಲ್ಲಿ ಕೇಳಿದೆ ಎಂದು ಸಯ್ಯಿದಿನಾ ಅಬೂ ದರ್ ( ರ ) ಹೇಳುತ್ತಾರೆ.
ಆಗ ರಸೂಲ್ ﷺ ರವರು ಹೇಳಿದರು:
ಮಸ್ಜಿದ್ ಅಲ್-ಹರಾಮ್ (ಅಂದರೆ ಕಾಬಾ).
ಅದರ ನಂತರ ಯಾವುದೆಂದು
ಕೇಳಿದೆ?
ಆಗ‌ ರಸೂಲ್ ﷺ ಹೇಳಿದರು: ಅಲ್-ಅಕ್ಸಾ ಮಸ್ಜಿದ್.
ಅದರ ನಡುವೆ ಎಷ್ಟು ವರ್ಷಗಳು ಎಂದು ಕೇಳಿದೆ.
ಪ್ರವಾದಿ ﷺ ಹೇಳಿದರು: “ನಲವತ್ತು ವರ್ಷಗಳು, ಮತ್ತು ನಿಮಗೆ ಸಾಧ್ಯವಾದಾಗ, ನೀವು ಅಲ್ಲಿ ಹೋಗೆ ಪ್ರಾರ್ಥಿಸಬೇಕು ಎಂದರು”

▪️ ಇಸ್ಲಾಂ ಧರ್ಮದ ಸುವರ್ಣ ಯುಗದಲ್ಲಿ, ಸಯ್ಯಿದುನಾ ಉಮರ್ ( ರ ) ಖಲೀಫಾ ಆಗಿ, ಪ್ರಪಂಚದಾದ್ಯಂತದ ಇತರ ಹಲವಾರು ಮುಸ್ಲಿಂ ವಿಜಯಗಳನ್ನು ಬದಿಗಿಟ್ಟು, ಕೇವಲ ಪ್ಯಾಲೆಸ್ತೀನ್ ವಿಮೋಚನೆಗಾಗಿ, ಸ್ವತಃ ಮದೀನಾದಿಂದ ಹೋಗಿ ಅಲ್ಲಿ ಪ್ರಾರ್ಥಿಸಿ, ಈ ನಗರದ ಮಹತ್ವ ಮತ್ತು ಹಿರಿಮೆಯನ್ನು ಎತ್ತಿ ತೋರಿಸಿದರು.

▪️ಜೆರುಸಲೇಮ್‌ನ ಹೆಸರು ಬೈತುಲ್ ಮುಖದ್ದಿಸ್ ಮತ್ತು ಅಲ್ ಕುದ್ಸ್ ಎಂದು ಕರೆಯಲಾಗುತ್ತದೆ.
ಈ ನಗರದ ಪಾವಿತ್ರ್ಯತೆಯಿಂದಾಗಿ ಇದು ಎಲ್ಲಾ ನಗರಗಳಿಗಿಂತ ಭಿನ್ನವಾಗಿದೆ.
ಈ ನಗರವನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ರೋಮನ್ನರ ದಬ್ಬಾಳಿಕೆಯಿಂದ ರಕ್ಷಿಸಲು 5000 ಕ್ಕೂ ಹೆಚ್ಚು ಸ್ವಹಾಬಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಮತ್ತು ಹುತಾತ್ಮತೆಯ ಆ ಅಧ್ಯಾಯವು ಈ ದಿನದವರೆಗೂ ಮುಚ್ಚಿಲ್ಲ. ಈ ಜೆರುಸಲೆಮ್ ನಗರವನ್ನು ಹುತಾತ್ಮರ ನಗರ ಎಂದೂ ಕರೆಯುತ್ತಾರೆ.

*📝 ಅಬೂ ರಾಝೀ*

➖➖➖➖➖➖➖➖
ಸ್ಸು್