- *ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಕೊಡಗು ಜಿಲ್ಲೆ.*
ಆಗಸ್ಟ್ 14 ಹಾಗೂ 15 2023 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬದುಕಿನ ಸ್ವಾತಂತ್ರ್ಯಕ್ಕಾಗಿ ಭೂಮಿ,ವಸತಿ ಮತ್ತು ನಿವೇಶನ ವಂಚಿತ ಬಡವರಿಂದ ಸಾಮೂಹಿಕ ಬರಿಹೊಟ್ಟೆ ಸತ್ಯಾಗ್ರಹ ನಿಗದಿ ಮಾಡಲಾಗಿತ್ತು. ಕರ್ನಾಟಕದ ಮೂಲೆ ಮೂಲೆಗಳಿಂದ ಸಾವಿರಾರು ಬಡವರು ತಮ್ಮ ಬದುಕಿನ ಹಕ್ಕಿಗಾಗಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಪ್ರಾರಂಭಿಸಿದರು. ಕೊಡಗಿನಿಂದಲೂ 300 ಕ್ಕು ಹೆಚ್ಚು ಭೂಮಿ ಹಾಗೂ ವಸತಿ ರಹಿತರು ಸತ್ಯಾಗ್ರಹದಲ್ಲಿ ಭಾಗವಹಿಸಿದರು.ಸಂಜೆಯ ಒಳಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಕುಮಾರ್ ಸಮತಳ, ನೂರ್ ಶ್ರೀದರ್,ರೈತ ಮುಖಂಡ ಬಡಗಲಪುರ ನಾಗೇಂದ್ರ ,ವಿಜಯಮ್ಮ,ಅಮೀನ್ ಮೊಹಿಸಿನ್,ಡಿ.ಎಸ್.ನಿರ್ವಾಣಪ್ಪ,ಡಿ.ಎಚ್.ಪೂಜಾರ್,ಕರಿಯಪ್ಪ ಗುಡಿಮನಿ ಒಳಗೊಂಡ ಸಮಿತಿ ಸದಸ್ಯರನ್ನು ತಮ್ಮ ಕಛೇರಿ ಕೃಷ್ಣಾಗೆ ಬರಮಾಡಿಕೊಂಡು ಬೇಡಿಕೆಗಳನ್ನು ಆಳಿಸಿದರು.
*ಬೇಡಿಕೆಗಳು*
*) ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಕಂದಾಯ,ಅರಣ್ಯ,ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಮತ್ತು ಹೋರಾಟದ ಪ್ರತಿನಿಧಿಗಳು ಇರುವಂತೆ ” ಉನ್ನತ ಮಟ್ಟದ ಸಭೆ” ಕರೆಯಬೇಕು.
*) ಭೂಮಿ,ನಿವೇಶನ ಮತ್ತು ಮನೆಗಳ ಮಂಜೂರಾತಿಯನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು.ಕಾಲಮಿತಿಯೊಳಗೆ ಇದನ್ನು ಜಾರಿಗೊಳಿಸಲಿಕ್ಕಾಗಿ ” ಹೈ ಪವರ್ ಕಮಿಟಿ “ಯನ್ನು ರಚಿಸಬೇಕು.ಈ ಹಿಂದಿನಂತೆ ಇದರಲ್ಲಿ ಹೋರಾಟದ ಪ್ರತಿನಿಧಿಗಳೂ ಇರಬೇಕು. ಸಂಬಂಧಪಟ್ಟ ವಿವಿಧ ಇಲಾಖೆಗಳ ಉನ್ನತ ಮಟ್ಟದಲ್ಲಿ ಸಮನ್ವಯವನ್ನು ಸುಲಲಿತಗೊಳಿಸಲು ಇದಕ್ಕೆ ಒಬ್ಬರು ಸಂಪುಟ ದರ್ಜೆ ಮಂತ್ರಿ ಗಳ ಉಸ್ತುವಾರಿ ಇರಬೇಕು.
*) ಎಲ್ಲಾ ವಿಧಾನಸಭಾ ಕ್ಷೇತ್ರ ಗಳಲ್ಲೂ ಭೂ ಮಂಜೂರಾತಿ ಸಮಿತಿಗಳನ್ನು ಕೂಡಲೇ ರಚಿಸಬೇಕು.ಈ ಸಮಿತಿಗಳಲ್ಲಿ ಭೂಮಿ ವಸತಿ ಹೋರಾಟದ ಒಬ್ಬ ಪ್ರತಿನಿಧಿ ಕೂಡ ಇರಬೇಕು.
*) ರೈತರು ಹೋರಾಟಗಾರರ ಮೇಲೆ ಅರಣ್ಯ,ಪೋಲೀಸ್ ಇಲಾಖೆ ದಾಖಲಿಸಿರುವ ಕೇಸುಗಳನು ತೆಗೆಯಬೇಕು.
*) 5 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ,ಅರಣ್ಯ ಭೂಮಿಯಲ್ಲಿರುವ ಯಾವುದೇ ಅರ್ಜಿದಾರರನ್ನು ಒತ್ತುವರಿ ಹೆಸರಿನಲ್ಲಿ ತೆರವುಗೊಳಿಸಬಾರದು.
ಬೇಡಿಕೆಗಳನ್ನು ಆಳಿಸಿದ ಮುಖ್ಯಮಂತ್ರಿಗಳು 20 ರ ನಂತರ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಯೊಂದಿಗೆ ಸಭೆ ಕರೆದು ಚರ್ಚಿ ತೀರ್ಮಾನಿಸಲಾಗುದು ಎಂದು ತಿಳಿಸಿದರು.
ನಂತರ ಬರಿ ಹೊಟ್ಟೆ ಸತ್ಯಾಗ್ರಹದಲ್ಲಿ ನಿರತರಾದ ಜನರನ್ನು ಸತ್ಯಾಗ್ರಹ ಕೈ ಬಿಡಲು ತಮ್ಮ ಕಡೆಯಿಂದ ಮನವಿ ಮಾಡಲೂ ಮಾಜಿ ಮಂತ್ರಿಗಳಾದ ಎಚ್.ಆಂಜನೇಯ ಅವರನ್ನು ಕಳುಹಿಸಿಕೊಟ್ಟರು. ಎಚ್.ಆಂಜನೇಯ ನವರು ಮುಖ್ಯಮಂತ್ರಿಗಳ ತೀರ್ಮಾನವನ್ನು ಸಭೆಗೆ ತಿಳಿಸಿ ಸತ್ಯಾಗ್ರಹ ನಿರತರಿಗೆ ಬಾಳೆಹಣ್ಣು ನೀಡುವ ಮೂಲಕ ಸತ್ಯಾಗ್ರಹ ಕೈ ಬಿಡುವಂತೆ ಕೊರಿಕೊಂಡರು.ಸತ್ಯಾಗ್ರಹ ನಿರತರು ಬಾಳೆಹಣ್ಣು ಸೇವಿಸಿ ಸತ್ಯಾಗ್ರಹ ಕೈ ಬಿಟ್ಟರು.
ಇದೇ ಸಂದರ್ಭದಲ್ಲಿ ನಮ್ಮನ್ನಗಲಿದ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಸ್ಥಾಪಕ ಅಧ್ಯಕ್ಷರಾದ ಹೆಚ್.ಎಸ್.ದೊರೈಸ್ವಾಮಿ,ಹೋರಾಟಕ್ಕೆ ಸ್ಪೂರ್ತಿಯಾಗಿದ್ದ ಎ.ಕೆ.ಸುಬ್ಬಯ್ಯ, ಗೌರಿಲಂಕೇಶ್ ರಿಗೆ ಸಭೆ ಸಂತಾಪ ಸೂಚಿಸಿತು.
*ಅಮೀನ್ ಮೊಹಿಸಿನ್
ಜಿಲ್ಲಾಧ್ಯಕ್ಷ
ಭೂಮಿ ಮತ್ತು ವಸತಿ ವಂಚಿತರ
ಹೋರಾಟ ಸಮಿತಿ,
ಕೊಡಗು ಜಿಲ್ಲೆ.*