ರಾಜಕೀಯ ಮತ್ತು ಚುನಾವಣೆಯಲ್ಲಿ ಜಾತಿ ಮತ್ತು ಧರ್ಮಗಳು ಪ್ರಮುಖ ಪಾತ್ರ ವಹಿಸುತ್ತಿದೆ. ಹೆಚ್ಚಿನ ಚುನಾವಣೆಗಳು ಹಣಬಲ ,ಜಾತಿಬಲ, ಮತ್ತು ತೋಳಬಲದ, ಹೆಸರಿನಲ್ಲಿಯೇ ನಡೆಯುತ್ತದೆ. ಈ ಪೈಕಿ ಬಲಾಢ್ಯರೆ ಹೆಚ್ಚಾಗಿ ರಾಜಕೀಯ ಅಧಿಕಾರ ವಹಿಸಿಕೊಂಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಸಾವಿರಾರು ಸಣ್ಣ ಪುಟ್ಟ ಜಾತಿಯವರು ಮತ್ತು ಅಲ್ಪಸಂಖ್ಯಾತರು ರಾಜಕೀಯ ಪ್ರಾತಿನಿತ್ಯ ಪಡೆದಿಲ್ಲ. ಶೋಷಿತ ವರ್ಗಗಳು ಅಧಿಕಾರದಲ್ಲಿ ಸಮಾನ ಪಾಲು ಪಡೆಯ ಬೇಕಂದರೆ ಮೊದಲಿಗೆ ಇಲ್ಲಿಯ ಜಾತಿ ವ್ಯವಸ್ಥೆ ಮತ್ತು ಜಾತಿ ರಾಜಕಾರಣವನ್ನು ಅರಿತಿರಬೇಕು.
ಭಾರತದಲ್ಲಿ ಹಿಂದೂ ಧರ್ಮ ಬಹುಸಂಖ್ಯಾತ ಧರ್ಮವಾಗಿದೆ. ಆರು ರಾಷ್ಟ್ರೀಯ ಅಲ್ಪಸಂಖ್ಯಾತ ಧರ್ಮಗಳಿವೆ – ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಜೈನರು, ಬೌದ್ಧರು ಮತ್ತು ಝೋರಾಸ್ಟ್ರಿಯನ್ನರು (ಪಾರ್ಸಿಗಳು). ಜುದಾಯಿಸಂ ಮತ್ತು ಬಹಾಯಿಸಂ ಕೂಡ ಆಚರಣೆಗಳಾಗಿವೆ. ಆದರೆ, ಬಾನ್ನಿಂದ ಕಿರಾತಿಯವರೆಗೆ, ಅನೇಕ ಸಣ್ಣ ನಂಬಿಕೆಗಳೂ ಇವೆ.
ನೂರಾರು ಭಾರತೀಯ ಬುಡಕಟ್ಟುಗಳು ತಮ್ಮದೇ ಆದ ಧರ್ಮವನ್ನು ಹೊಂದಿದ್ದಾರೆ, ಆಗಾಗ್ಗೆ ತಮ್ಮದೇ ಆದ ಭಾಷೆಯೊಂದಿಗೆ (ವಿಶ್ವಾಸಾರ್ಹ ಅಂದಾಜು ಪಡೆಯಲು ಉತ್ತಮವಾಗಿ ದಾಖಲಿಸಲಾಗಿಲ್ಲ ಅಥವಾ ದಾಖಲಿಸಲಾಗಿಲ್ಲ). ಅದರ ಮೇಲೆ, ಹಿಂದೂ ಧರ್ಮವು ಬಹಳ ಸುಸಂಬದ್ಧವಾಗಿ ಕ್ರೋಡೀಕರಿಸಿದ ಧರ್ಮವಲ್ಲ. ಇದು ಅನೇಕ ವಿಭಿನ್ನ ಮತ್ತು ಕೆಲವೊಮ್ಮೆ ಸಂಘರ್ಷದ ನಂಬಿಕೆಗಳಿಗೆ ಆಶ್ರಯ ನೀಡುವ ತೆರೆದ ಮೂಲ ವೇದಿಕೆಯಂತಿದೆ. ಈ ಮಹಾನ್ ನಂಬಿಕೆಗಳ ಈ ಭಾಗವು ಕೆಲವೊಮ್ಮೆ ಭಕ್ತಿ ಚಳುವಳಿಯಂತಹ ವಿಭಿನ್ನ ಸಮಯಗಳಲ್ಲಿ ಪ್ರತ್ಯೇಕ ಧರ್ಮಗಳನ್ನು ಹೊಂದಿದೆ ಎಂದು ಗುರುತಿಸಲಾಗಿದೆ. ವೀರಶೈವ ಲಿಂಗಾಯತರು ತಮ್ಮದು ಸ್ವತಂತ್ರ ಧರ್ಮ ನಾವು ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ.
ಸಂಕ್ಷಿಪ್ತವಾಗಿ, ಭಾರತದಲ್ಲಿ ಎಷ್ಟು ಧರ್ಮಗಳಿವೆ ಎಂದು ಯಾರಿಗೂ ತಿಳಿದಿಲ್ಲ.
ಭಾರತಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 31 ಕೋಟಿ 75 ಲಕ್ಷ 42 ಸಾವಿರ. ಇದು ಒಟ್ಟು ಜನಸಂಖ್ಯೆಯ ಶೇಕಡ 25.4 ರಷ್ಟಿದೆ.
ಇದರಲ್ಲಿ ಪರಿಶಿಷ್ಟ ವರ್ಗಗಳ ಜನಸಂಖ್ಯೆಯನ್ನು ಸೇರಿಸಿಲ್ಲ. ಅದನ್ನೂ ಸೇರಿಸಿದರೆ ಒಟ್ಟು ಶೇಕಡಾವಾರು ಎಷ್ಟಾಗಬಹುದು ಊಹಿಸಿರಿ. ತ್ರಿಪುರಾ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಮೀಜೋರಾಂ ಮತ್ತು ಸಿಕ್ಕಿಂ ನಲ್ಲಿ ಅವರ ಜನಸಂಖ್ಯೆ ಶೇಕಡ 70ರಷ್ಟಿದೆ. ಅಲ್ಲದೆ ಜಾರ್ಖಂಡ್, ಛತ್ತೀಸ್ ಘಡ್ ಮತ್ತು ಅಸ್ಸಾಂ ನಲ್ಲಿಯೂ ಅವರ ಜನಸಂಖ್ಯೆ ಸಾಕಷ್ಟು ಇದೆ. ಮುಸ್ಲಿಂ ಸಮುದಾಯದ ಜನಸಂಖ್ಯೆ 20 ಕೋಟಿ ಮೀರಿದೆ. ಕ್ರೈಸ್ತರು ನಾಲ್ಕು ಕೋಟಿ ಇದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ 13 ವರ್ಷಗಳಿಂದ ರಾಷ್ಟ್ರಮಟ್ಟದಲ್ಲಿ ಜನಗಣತಿ ನಡೆಸಲಾಗಿಲ್ಲ. ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ. ಜಾತಿಗ ಗಣತಿ ಗಳನ್ನು ಹಿಂದೆ ಬ್ರಿಟಿಷ್ ಸರ್ಕಾರದಲ್ಲಿ ನಡೆಸಲಾಗಿತ್ತು. ಸ್ವತಂತ್ರ ಭಾರತದಲ್ಲಿ ಜಾತಿ ಗಣತಿ ನಡೆದಿರಲಿಲ್ಲ. ಕರ್ನಾಟಕದಲ್ಲಿ 10 ವರ್ಷಗಳ ಹಿಂದೆ ಜಾತಿ ಗಣತಿ ನಡೆಸಲಾಗಿತ್ತು. ಆದರೆ ಸರ್ಕಾರಗಳು ಅಧಿಕೃತವಾಗಿ ಜಾತಿ ಗಣತಿ ಸ್ವೀಕರಿಸಲಿಲ್ಲ. ಬಹಿರಂಗಪಡಿಸಲಿಲ್ಲ. ಆದರೆ ಈ ಜಾತಿಗ ನಥಿಯನ್ನು ಮಾಧ್ಯಮಗಳಲ್ಲಿ ಸೋರಿಕೆಯಾಗಿತ್ತು. ಸದ್ಯ ಅದೇ ಅಂಕಿ ಅಂಶ ಪ್ರಚಾರದಲ್ಲಿದೆ.
ಮಾಧ್ಯಮಗಳಲ್ಲಿ ಸೋರಿಕೆಯಾಗಿರುವ ಅಂತಹ
ಜಾತಿಗನತಿ ಪ್ರಕಾರ ಕರ್ನಾಟಕದ ವಿವಿಧ ಜಾತಿಗಳ ಜನಸಂಖ್ಯೆ ಈ ರೀತಿ ದಾಖಲಿಸಲಾಗಿದೆ. ಸಮೀಕ್ಷೆಗೊಳಪಟ್ಟ ಜಾತಿಗಳ ಸಂಖ್ಯೆ 1,351.
ಹೊಸದಾಗಿ ದಾಖಲಾದ ಜಾತಿಗಳ ಸಂಖ್ಯೆ 192.
ಸರಕಾರ ಗುರುತಿಸಿರುವ ಇತರೆ ಹಿಂದುಳಿದ ಜಾತಿಗಳು(ಓಬಿಸಿ) 816.
ಪರಿಶಿಷ್ಟ ಜಾತಿ(ಎಸ್’ಸಿ)ಯವರ ಸಂಖ್ಯೆ 1.08 ಕೋಟಿ
* ಪರಿಶಿಷ್ಟ ಪಂಗಡ(ಎಸ್’ಟಿ)ದವರ ಪ್ರಮಾಣ 40.45 ಲಕ್ಷ
* ಮುಸ್ಲಿಮರು 88 ಲಕ್ಷ
* ಲಿಂಗಾಯತ: 67 ಲಕ್ಷ
* ಒಕ್ಕಲಿಗ: 61 ಲಕ್ಷ
* ಕುರುಬರು 45 ಲಕ್ಷ
* ಈಡಿಗ: 15 ಲಕ್ಷ
* ವಿಶ್ವಕರ್ಮ: 14
* ಬೆಸ್ತ: 15 ಲಕ್ಷ
* ಬ್ರಾಹ್ಮಣ: 12 ಲಕ್ಷ
* ಗೊಲ್ಲ(ಯಾದವ) 10 ಲಕ್ಷ
* ಮಡಿವಾಳ ಸಮಾಜ: 6
* ಅರೆ ಅಲೆಮಾರಿ 6 ಲಕ್ಷ
* ಕುಂಬಾರ 5 ಲಕ್ಷ
* ಸವಿತಾ ಸಮಾಜ 5 ಲಕ್ಷ
ಜನಗಣತಿಯ ಮಾಹಿತಿಯ ಪ್ರಕಾರ, ದಲಿತರು ಮತ್ತು ಮುಸ್ಲಿಮರು ಲಿಂಗಾಯತರು ಮತ್ತು ಒಕ್ಕಲಿಗರನ್ನು ಮೀರಿಸುತ್ತಾರೆ. ಪರಿಶಿಷ್ಟ ಜಾತಿಗಳು (SCs) ರಾಜ್ಯದ ಒಟ್ಟು ಜನಸಂಖ್ಯೆಯ 19.5 ಪ್ರತಿಶತವನ್ನು ಹೊಂದಿದ್ದು, ಇದು ಏಕೈಕ-ದೊಡ್ಡ ಜಾತಿ ಘಟಕವಾಗಿದೆ. 16 ರಷ್ಟು ಮುಸ್ಲಿಮರು ನಂತರದ ಸ್ಥಾನದಲ್ಲಿದ್ದಾರೆ. ಈ ಎರಡು ಗುಂಪುಗಳನ್ನು ಲಿಂಗಾಯತರು ಮತ್ತು ವೊಕ್ಕಲಿಗರು ಅನುಸರಿಸುತ್ತಾರೆ, ಅವರು ಕ್ರಮವಾಗಿ ಜನಸಂಖ್ಯೆಯ ಶೇಕಡಾ 14 ಮತ್ತು 11 ರಷ್ಟಿದ್ದಾರೆ. ಮೇಲ್ಜಾತಿಯೆಂದು ಮೀಸಲಾತಿಗೆ ಗುರುತಿಸಲಾದ ಪ್ರಮುಖ ಜಾತಿಗಳು ಬ್ರಾಹ್ಮಣ, ಮೊದಲಿಯಾರ್, ನಾಯರ್, ಆರ್ಯವೈಶ್ಯ, ಜೈನರು.
ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪೈಕಿ ಕುರುಬರು ಮಾತ್ರ ರಾಜ್ಯದ ಜನಸಂಖ್ಯೆಯ ಶೇ.7ರಷ್ಟಿದ್ದಾರೆ. ಒಟ್ಟಾರೆಯಾಗಿ, ಒಬಿಸಿಗಳು ಕರ್ನಾಟಕದ ಜನಸಂಖ್ಯೆಯ ಶೇಕಡಾ 20 ರಷ್ಟಿದ್ದಾರೆ.
ಅಂಕಿಅಂಶಗಳ ಪ್ರಕಾರ, ಎಸ್ಸಿಗಳು, ಎಸ್ಟಿಗಳು, ಮುಸ್ಲಿಮರು ಮತ್ತು ಕುರುಬರು ಒಟ್ಟಾಗಿ ಒಟ್ಟು ಜನಸಂಖ್ಯೆಯ ಶೇಕಡಾ 47.5 ರಷ್ಟಿದ್ದಾರೆ,
ಕರ್ನಾಟಕದ 7 ಕೋಟಿ ಜನಸಂಖ್ಯೆಯಲ್ಲಿ ಸುಮಾರು 80 ಪ್ರತಿಶತದಷ್ಟು ಜನರು ಅಲ್ಪಸಂಖ್ಯಾತರು, ಒಬಿಸಿಗಳು, ಎಸ್ಸಿ ಮತ್ತು ಎಸ್ಟಿಗಳಿಗೆ ಸೇರಿದ್ದಾರೆ. ಆದರೆ 80% ಈ ಜನಸಮುದಾಯಗಳಿಗೆ ರಾಜಕೀಯ ಅಧಿಕಾರದಿಂದ ವಂಚಿತರಾಗಿದ್ದಾರೆ
ಕರ್ನಾಟಕದಲ್ಲಿ ರಾಜಕೀಯ ಅಧಿಕಾರ ಲಿಂಗಾಯಿತ ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯಗಳು ಹೆಚ್ಚಾಗಿ ಪಡೆಕೊಂಡಿದೆ. ಹಿಂದುಳಿದ ವರ್ಗಗಳಲ್ಲಿ ಕೆಲವು ಜಾತಿಗಳು. ದಲಿತರಲ್ಲಿ ಕೆಲವು ಜಾತಿಗಳು ಮುಸ್ಲಿಮರು ಕ್ರೈಸ್ತರು ಮೊದಲಾದವರೇ ರಾಜಕೀಯ ಪ್ರಾತಿನಿಧ್ಯ ತಮ್ಮ ಜನಸಂಖ್ಯೆಯ ಅನುಪಾತದಷ್ಟು ಸಿಗಲೇ ಇಲ್ಲ. ಇದಕ್ಕಾಗಿ ಸಂಪೂರ್ಣ ಮೀಸಲಾತಿ ವ್ಯವಸ್ಥೆಯನ್ನು ಪುನರ್ ರಚಿಸಬೇಕಾಗಿದೆ ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿಯಾಗಲಿ ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯಾಗಲಿ ಎಲ್ಲವೂ ಮತ್ತೊಮ್ಮೆ ಪರಿಶೀಲನೆ ಮಾಡಿ ಯಾರಿಗೆಲ್ಲ ಅವಕಾಶ ಸಿಕ್ಕಿಲ್ಲ ಆ ಎಲ್ಲಾ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕೊಡಬೇಕಾದದ್ದು ಸವಿದಾನದ ಮೂಲ ಆಶಯವಾಗಿದೆ ಅದುವೇ ನಿಜವಾದ ಪ್ರಜಾಪ್ರಭುತ್ವ ,ಸಮಾಜವಾದ ,ಮತ್ತು ಜಾತ್ಯಾತೀತ ಸಿದ್ದಾಂತ.
ಮಂಡ್ಯ , ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ವಕ್ಕಲಿಗ (ಒಕ್ಕಲಿಗ) ಜನಾಂಗದವರು ಇದ್ದಾರೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವೀರಶೈವರು (ಲಿಂಗಾಯತರು) ಇದ್ದಾರೆ.
ಹಿಂದುಳಿದ ವರ್ಗಗಳ ನೂರಾರು ಜಾತಿಗಳು, ದಲಿತ ಸಮುದಾಯಗಳ ನೂರಾರು ಜಾತಿಗಳು, ಬ್ರಾಹ್ಮಣರು ಇತರ ಮೇಲ ವರ್ಗ ಮುಸ್ಲಿಮರು ಕ್ರೈಸ್ತರು ಮತ್ತಿತರ ಅಲ್ಪಸಂಖ್ಯಾತ ವರ್ಗ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹರಡಿಕೊಂಡಿದ್ದಾರೆ.
.
ಒಕ್ಕಲಿಗ ಸಮುದಾಯದ ಮುಖ್ಯಮಂತ್ರಿ ಸ್ಥಾನ ಪಡೆಯುವ ಅವಕಾಶಗಳು 8 ಬಾರಿ ಸಿಕ್ಕಿರುತ್ತದೆ.
ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳು 14 ಬಾರಿ. ಹಿಂದುಳಿದ ವರ್ಗಕ್ಕೆ ಒಟ್ಟು ಏಳು ಬಾರಿ ( ಅರಸು
ಕುರುಬ, ಈಡಿಗ, ದೇವಾಡಿಗ,ರಜಪೂತ )
ಬ್ರಾಹ್ಮನ 4 ಬಾರಿ. ರಾಮಕೃಷ್ಣ ಹೆಗಡೆ ಮೂರು ಬಾರಿ. ಗುಂಡು ರಾವ್ ಒಮ್ಮೆ. ಈ ರೀತಿ ಕರ್ನಾಟಕದಲ್ಲಿ ಒಟ್ಟು 33 ಬಾರಿ ಮುಖ್ಯಮಂತ್ರಿ ಸ್ಥಾನ ಸಿಕ್ಕಿದವು. ದಲಿತರು ಮತ್ತು ಮುಸಲ್ಮಾನರಿಗೆ ಒಮ್ಮೆಯೂ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಲಿಲ್ಲ. ಹಿರಿತನ ಮತ್ತು ಅನುಭವದ ಆಧಾರದಲ್ಲಿ ಮುಸ್ಲಿಂ ಸಮುದಾಯದ ಮಹಮ್ಮದ್ ಆಲಿ, ಅಜಿತ್ ಸೆಟ್, ನಜೀರ್ ಸಾಬ್, ಜಾಫರ್ ಷರೀಫ್ ಮೊದಲಾದವರು ಸಮರ್ಥರಾಗಿದ್ದರು. ದಲಿತರಲ್ಲಿ ಬಸವಲಿಂಗಪ್ಪ, ರಾಚಯ್ಯ, ಜಿ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಸಮರ್ಥರಾಗಿದ್ದರು.
2073ರ ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಲಿಂಗಾಯತರು. 8 ಒಕ್ಕಲಿಗರು. 5 ಎಸ್ಸಿಗಳು. 6 ಎಷ್ಟಿಗಲು3
ಮುಸ್ಲಿಮರು 2 ಕುರುಬ, 2, ಬ್ರಾಹ್ಮಣ, ಕ್ರೈಸ್ತ ,ಮೊಗವೀರ, ಈಡಿಗ, ಜೈನ , ರೆಡ್ಡಿ, ಮರಾಠ,ತಲಾ ಒಂದು.
2023 ಮೇ ತಿಂಗಳಲ್ಲಿ ನಡೆದಂತಹ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಲಿಷ್ಠ ಜಾತಿಗಳ ಹೆಚ್ಚಿನ ಶಾಸಕರು ಚುನಾಯಿತಗೊಂಡಿದ್ದಾರೆ ಲಿಂಗಾಯತ ಸಮುದಾಯದಿಂದ 54 ಶಾಸಕರುಗಳು ಒಕ್ಕಲಿಗರಿಂದ 46 ಕುರುಬ ಸಮುದಾಯದ 13 ಮುಸ್ಲಿಂ 9 ಕ್ರೈಸ್ತ ಒಂದು ಜೈನ ಒಂದು ಬೆಸ್ತ ಕೋಲಿ ಮೊಗವೀರ ಮೂರು ಬಿಲ್ಲವಾ ಈಡಿಗ 9 ಬಂಟ ಐದು ಮರಾಠ ಮೂರು ಕೊಡವ ಒಂದು ರಜಪೂತ ಒಂದು ರೆಡ್ಡಿ ಹೇಳು ಎಸ ಟಿ ವಾಲ್ಮೀಕಿ ಎಂಟು ಎಸ್ಸಿ ಬಲಗೈ 14 ಎಸ್ ಸಿ ಎಡಗೈ 8 ಎಸ್ ಸಿ ಭೋವಿ 7 ಎಸ್ಸಿ ಲಂಬಾಣಿ ಆರು ಎಸ್ಸಿ ಮೊಗವೀರ ಒಂದು ಉಪ್ಪಾರ ಒಂದು ಇತರ ಸಣ್ಣ ಪುಟ್ಟ ಜಾತಿಗಳಿಂದ ಆರು ಮಂದಿ ಸೇರಿದಂತೆ ಒಟ್ಟು 224 ಶಾಸಕರು ಆಯ್ಕೆಯಾಗಿದ್ದಾರೆ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಮತ್ತು ಹಲವಾರು ಸಣ್ಣ ಪುಟ್ಟ ಜಾತಿಗಳಿಂದ ನಿರಂತರವಾಗಿ ತೀರಾ ಕಡಿಮೆ ಸಂಖ್ಯೆಯ ಶಾಸಕರುಗಳು ಆಯ್ಕೆಯಾಗುತ್ತಿರುವುದು ಖೇದಕರ ಅವಕಾಶ ವಂಚಿತ ಜನಸಮುದಾಯಗಳ ರಾಜಕೀಯ ಪ್ರಾತಿನಿಧ್ಯಕ್ಕೆ ವಿಶೇಷ ಪ್ರಯತ್ನ ನಡೆಯಬೇಕಾಗಿದೆ.
ಭಾರತದ ಸಂವಿಧಾನದ ಮುಖ್ಯ ಆಶಯವಾಗಿದೆ ಸಾಮಾಜಿಕ ನ್ಯಾಯ. ಅವಕಾಶ ವಂಚಿತ ಜನಸಮುದಾಯಗಳನ್ನು ಮೇಲುತ್ತೋದು ಅದಕ್ಕಾಗಿ ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿಯನ್ನು ತಂದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಂಸತ್ತು ಮತ್ತು ವಿಧಾನಸಭೆಗಳಿಗೆ ದಲಿತರಿಗೆ ಮೀಸಲಾತಿ ಕಲ್ಪಿಸಲಾಗಿದೆ.
ಮಾಜಿ ಪ್ರಧಾನಿ ವಿಪಿ ಸಿಂಗ್ ಅಧಿಕಾರ ಅವಧಿಯಲ್ಲಿ ಮಂಡಲ್ ಆಯೋಗದ ಶಿಫಾರಸ್ಸಿನಂತೆ ಹಿಂದುಳಿದ ವರ್ಗ ಮತ್ತು ಮುಸ್ಲಿಮರಿಗೆ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಅನುಷ್ಠಾನಕ್ಕೆ ತಂದಿದ್ದಾರೆ. ಕರ್ನಾಟಕದಲ್ಲಿಯೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ದಲಿತರು ಮುಸ್ಲಿಮರು ಒಕ್ಕಲಿಗರು ಲಿಂಗಾಯಿತರು ಮತ್ತು ಇತರ ಹೆಚ್ಚಿನ ಜಾತಿಗಳಿಗೆ ಮೀಸಲಾತಿ ಘೋಷಿಸಲಾಗಿದೆ. ಅದೇ ರೀತಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಸಹ ಹೆಚ್ಚಿನ ಧರ್ಮ ಮತ್ತು ಜಾತಿಬಾಂಧವರಿಗೆ ಮೀಸಲಾತಿ ನೀಡಲಾಗುತ್ತಿದೆ. ಕೇವಲ ಬೆರಳಣಿಕೆಯಷ್ಟೇ ಬಲಿಷ್ಠ ಮತ್ತು ಮುಂದುವರಿದ ಸಮುದಾಯಗಳಿಗೆ ಹಿಂದೆ ಮೀಸಲಾತಿ ಕೊಟ್ಟಿರಲಿಲ್ಲ. ಆ ವರ್ಗಗಳಿಗೂ ಇತ್ತೀಚಿಗೆ 10% ಮೀಸಲಾತಿ ನೀಡಲಾಗುತ್ತಿದೆ. ಈ ಪ್ರಕಾರ ದೇಶದಲ್ಲಿ ಮತ್ತು ರಾಜ್ಯದಲ್ಲಿ ಯಾವುದೇ ಧರ್ಮ ಮತ್ತು ಜಾತಿಯವರನ್ನು ಮೀಸಲಾತಿಯಿಂದ ವಂಚಿಸಲಾಗಿಲ್ಲ. ಈಗ ಮೀಸಲಾತಿಯ ಪ್ರಯೋಜನವನ್ನು ಪ್ರತಿಯೊಬ್ಬ ಭಾರತೀಯನು ಪಡೆಯುತ್ತಿದ್ದಾನೆ.
ಆದರೆ ಸ್ವತಂತ್ರ ಭಾರತದಲ್ಲಿ ಇಂದಿಗೂ ದಲಿತರು ಮುಸಲ್ಮಾನರು , ಆದಿವಾಸಿಗಳು, ಬುಡಕಟ್ಟು ಜನ ಸಮುದಾಯಗಳು ಮತ್ತು ಕೆಲವು ಅವಕಾಶ ವಂಚಿತ ವರ್ಗಗಳು ರಾಜಕೀಯವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ ಈ ಅಸಮತೋಲನವನ್ನು ಹೋಗಲಾಡಿಸಲು ರಾಜಕೀಯ ಪಕ್ಷಗಳು ಆದ್ಯತೆಯಲ್ಲಿ ದಿಟ್ಟ ಹೆಜ್ಜೆ ಇಡಬೇಕಾಗಿದೆ.
.












