ಉಳ್ಳಾಲ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯ ಒದಗಿಸಲು ಕ್ರಮ ಕೈಗೊಳಾಗುತ್ತಿದೆ ಸದನದಲ್ಲಿ ಸಚಿವರ ಉತ್ತರ.

ಬೆಂಗಳೂರು ಜುಲೈ 10 ದಕ್ಷಿಣ ಕನ್ನಡ ಜಿಲ್ಲೆ, ಉಲ್ಲಾಳ ನಗರಸಭೆಯಲ್ಲಿ ವ್ಯಾಪ್ತಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಾಗುತ್ತಿದೆ .ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆ. ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ .30 ಹಾಸಿಗೆ ಅಳವಡಿಸಲಾಗಿದೆ .ಸಾರ್ವಜನಿಕರು ಇದರ ಸದುಪಯೋಗ ಪಡೆಯುತ್ತಿದ್ದಾರೆ.
ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ತಿನಲ್ಲಿ ಹೇಳಿದರು. ಈ ಬಗ್ಗೆ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್ ರವರು ಎತ್ತಿದ ಹಲವು ಪ್ರಶ್ನೆಗಳಿಗೆ ಸಚಿವರು ಪೂರಕವಾಗಿ ಉತ್ತರಿಸಿದರು.


ಪ್ರಸೂತಿ ತಜ್ಞರು, ಮಕ್ಕಳ ತಜ್ಞರು ,ದಂತ ವೈದ್ಯಕೀಯ ಚಿಕಿತ್ಸೆ ,ಉಚಿತ ಔಷಧಿ ಮೊದಲಾದ ಹಲವು ಸೇವೆಗಳು ಈಗಾಗಲೇ ಸಾರ್ವಜನಿಕರು ಪಡೆಯುತ್ತಿದ್ದಾರೆ. ಹೆಚ್ಚಿನ ವೈದ್ಯಕೀಯ ಸೇವೆಯನ್ನು ದೇರಲಕಟ್ಟೆಯ ಯೋನ ಪೊಯ ಆಸ್ಪತ್ರೆಯರೊಂದಿಗೆ ಕರಾರು ಮಾಡಿ ಅವರಿಂದ ಸೇವೆ ಪಡೆಯ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಮಂಜೂರಾದ ಒಟ್ಟು 24 ಸಿಬ್ಬಂದಿಗಳ ಪೈಕಿ 19 ಸಿಬ್ಬಂದಿಗಳು ಈಗಾಗಲೇ ಸೇವೆ ಸಲ್ಲಿಸುತ್ತಿದ್ದಾರೆ.
ಶಾಶ್ವತ ಮಂಜೂರಾದ 31 ಸಿಬ್ಬಂದಿಗಳ ಪೈಕಿ 25 ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪೈಕಿ ಆರು ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಡಯಾಲಿಸಿಸ್ ಯಂತ್ರ ಅಳವಡಿಸಲು ಬೇಕಾದ ವ್ಯವಸ್ಥೆ ಮಾಡಲಾಗಿದೆ . ಶೀಘ್ರದಲ್ಲೇ ಯಂತ್ರ ತರಲಾಗುವುದು. ಈಗಾಗಲೇ ಕೆಲವು ನುರಿತ ವೈದ್ಯರುಗಳು ಸೇವೆ ಸಲ್ಲಿಸುತ್ತಿದ್ದು ಇನ್ನೂ ಹೆಚ್ಚಿನ ವೈದ್ಯರಗಳನ್ನು ನೇಮಕ ಮಾಡಲಾಗುವುದು. ಯೋನಪಯ ಆಸ್ಪತ್ರೆ ಮೂಲಕ ಕ್ಷ ಕಿರಣ ಯಂತ್ರವನ್ನು ಈಗಾಗಲೇ ಅಳವಡಿಸಲಾಗಿದೆ .ಅದು.ಯೋನಪಯ ಸಂಸ್ಥೆಯೊಂದಿಗೆ ಒಡಂಬಡಿಕೆ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಚಾಲನೆಗೆ ತರಲಾಗುವುದು . ಸಾರ್ವಜನಿಕರಿಗೆ ಯಾವುದೇ ವ್ಯವಸ್ಥೆಯಲ್ಲಿ ಕುಂದು ಕೊರತೆಯಾಗದಂತೆ ನೋಡಲಾಗುವುದು . ಎಂದು ಸಚಿವರು ಸದನದಲ್ಲಿ ಲಿಖಿತವಾಗಿ ಬರವಸೆ ನೀಡಿದರು. ಉಲ್ಲಾಲದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಸಾರ್ವಜನಿಕರು ನಿರಂತರವಾಗಿ ದೂರು ನೀಡುತ್ತಿದ್ದರು. ಈ ಎಲ್ಲಾ ಸಮಸ್ಯೆಗಳು ಹೊಸ ಸರಕಾರ ಪರಿಹರಿಸಬಹುದು ಎಂದು ಸ್ಥಳಿಯರು ಹೇಳುತ್ತಿದ್ದಾರೆ.
ಈ ಆಸ್ಪತ್ರೆ ಬಗ್ಗೆ ಸರ್ಕಾರದ ಗಮನಕ್ಕೆ ತಂದ ಬಿಎಂ ಫಾರೂಕ್ ರವರ ಉತ್ಸಾಹವನ್ನು ಸಾರ್ವಜನಿಕರು ಮುಕ್ತ ಕಂಠದಿಂದ ಕೊಂಡಾಡಿದರು. ಸುಸಜ್ಜಿತ ಬೃಹತ್ ಕಟ್ಟಡವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಕಟ್ಟಿಸಿ ದಿಕ್ಕಾಗಿ ಸ್ಥಳೀಯ ಶಾಸಕ ಯುಟಿ ಖಾದರ್ ಅವರ ಪ್ರಯತ್ನವನ್ನು ಸಾರ್ವಜನಿಕರು ಬೆನ್ನು ತಟ್ಟುತ್ತಿದ್ದಾರೆ.

ರಾಜಕೀಯ ಮರೆತು ಎಲ್ಲಾ ನೇತಾರರು ಒಟ್ಟುಗೂಡಿ ಉಲ್ಲಾಲೆ ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ತುರ್ತಾಗಿ ಸಿಗುವಂತಾಗಲು ಪ್ರಯತ್ನಿಸಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್ ಮತ್ತು ಉಲ್ಲಾಲ ಶಾಸಕ ಹಾಗೂ ಸದನದ ಸ್ಪೀಕರ್ ಯುಟಿ ಖಾದರ್, ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ಇತರ ವಿಧಾನ ಪರಿಷತ್ ಸದಸ್ಯರು
ಮೊದಲಾದವರನ್ನು ವಿನಂತಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯರುಗಳ ನಿಧಿ, ಮತ್ತು ವಿಧಾನ ಪರಿಷತ್ ಸದಸ್ಯರುಗಳ ನಿಧಿ ,ಸಂಸದರ ನಿಧಿ ,ಶಾಸಕರ ನಿದಿಗಳಿಂದ, ಉಲ್ಲಾಳ ಆಸ್ಪತ್ರೆಗೆ ಅಗತ್ಯ ಯಂತ್ರಗಳನ್ನು ಮಂಜೂರು ಮಾಡಬೇಕೆಂದು ಸಾರ್ವಜನಿಕರು ವಿನಂತಿಸುತ್ತಿದ್ದಾರೆ.