ಕುಲಾಯಿ ಮೀನುಗಾರಿಕಾ ಜಟ್ಟಿ ನಿರ್ಮಾಣ ವಿಳಂಬ ಬಗ್ಗೆ ವಿಧಾನಪರಿಷತ್ ನಲ್ಲಿ ಬಿ ಎಂ ಫಾರೂಕ್ ಪ್ರಸ್ತಾಪ

ಬೆಂಗಳೂರು. ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬಿ ಎಂ ಫಾರೂಕ್ ರವರು ವಿಧಾನ ಪರಿಷತ್ ನಲ್ಲಿ ಮಂಗಳೂರು ಸಮೀಪದ ಕುಲಾಯಿಯಲ್ಲಿ ನಿರ್ಮಾಣವಾಗಬೇಕಿದ್ದ ಮೀನುಗಾರಿಕಾ ಜಟ್ಟಿಯ ಕೆಲಸ ವಿರಂಭವಾಗು ತ್ತಿರುವ ಬಗ್ಗೆ ಪ್ರಶ್ನೆ ಕೇಳಿದರು.
ಸದನದಲ್ಲಿ ಇದಕ್ಕೆ ಉತ್ತರಿಸಿದ ಮೀನುಗಾರಿಕಾ ಸಚಿವ ಮಾಂಕಾಲ ವೈದ್ಯರವರು ಕಾಮಗಾರಿ ಈಗ ಆರಂಭ ಹಂತದಲ್ಲಿದೆ . ಟೆಂಡರ್ ಪ್ರಕ್ರಿಯೆಗಳ ಬಗ್ಗೆ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು ಈಗ ಅದನ್ನೆಲ್ಲ ಸರಿಪಡಿಸಲಾಗಿದೆ. ಸ್ಥಳೀಯರು ಸಹ ಈ ಬಗ್ಗೆ ಕೆಲವು ಅಕ್ಷಪಗಳನ್ನುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸ್ಥಳೀಯರನ್ನು ಸಹ ಮನವೊಲಿಸಿರುತ್ತಾರೆ. ಕೇಂದ್ರ ಸರ್ಕಾರ ಮತ್ತು ಮಂಗಳೂರು ಬಂದರಿನ ಎನ್ ಎಂ ಪಿ ಟಿ ಜಂಟಿಯಾಗಿ 196 ಕೋಟಿಯಲ್ಲಿ ರೂಪಾಯಿ ಅನುದಾನದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಎಂದು ಉತ್ತರಿಸಿದರು. ಅಲ್ಲದೆ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಸಹ 186 ಕೋಟಿ ರೂಪಾಯಿಯ ನಿಧಿಯಲ್ಲಿ ಮೀನುಗಾರಿಕಾ ಜಟ್ಟಿ ಕಾಮಗಾರಿ ನಡೆಯುತ್ತಿದೆ ಎಂದರು. ಕರ್ನಾಟಕದಲ್ಲಿ ಮೀನುಗಾರಿಕಾ ಜಟ್ಟಿಗಲ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರಗಳು ಹಲವಾರು ಯೋಜನೆ ಹಮ್ಮಿಕೊಂಡಿದ್ದೆ ಎಂದು ಸಚಿವರು ತಿಳಿಸಿದರು.
ಬಿ ಎಂ ಪಾರೂಕ್ ರವರು ಸದನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯಿಂದ ಸರ್ಕಾರಕ್ಕೆ ದೊಡ್ಡ ಮೊತ್ತ ಆರ್ಥಿಕ ನಷ್ಟವಾಗಿದೆ ಎಂದು ನಗರಾಭಿವೃದ್ಧಿ ಸಚಿವರನ್ನು ಪ್ರಶ್ನಿಸಿದರು .ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರವರು ಹೇಳಿದ್ದೇನೆಂದರೆ 2019 ರಲ್ಲಿ ಈ ಯೋಜನೆಗೆ 69 ಕೋಟಿ ಸರ್ಕಾರದಿಂದ ಅನುದಾನ ಲಭಿಸಿತ್ತು. 2015 ರಲ್ಲಿ ಭೂಮಿಯ ಒಳಗಡೆ ಪೈಪ್ ಹಾಕಿ ತ್ಯಾಜ್ಯ ವಸ್ತು ಸಾಗುವ ಕಾಮಗಾರಿ ಪೂರ್ಣಗೊಂಡಿತ್ತು.
ಕೋಡಿ ಕೋಟೆಪುರ ದಲ್ಲಿ ತ್ಯಾಜ್ಯ ಸಂಸ್ಕರಣದ ಘಟಕದ ಕಾಮಗಾರಿ ಪೂರ್ಣಗೊಂಡಿರುತ್ತದೆ. ಇಲ್ಲಿಗೆ ಗ್ರಹ ಸಂಪರ್ಕ ಕೆಲಸವನ್ನು ಉಲ್ಲಾಳ ನಗರಸಭೆ ವತಿಯಿಂದ ಮಾಡುವ ಕೆಲಸ ಇನ್ನೂ ನಡೆಯಬೇಕಾಗಿದೆ. ಬಂಡಿ ಕೊಟ್ಟೆ ಮತ್ತು ತೊಕ್ಕೋಟುನಲ್ಲಿ ವಟ್ ವೆಲ್ ಕಾಮಗಾರಿ ಪ್ರಗತಿಯಲ್ಲಿದೆ. ಸುಭಾಷ್ ನಗರ ಕೈಕು ಸಮೀಪದ ವೆಟ್ ವೆಲ್ ಕಾಮಗಾರಿಗೆ ಸ್ಥಳೀಯರಿಂದ ಆಕ್ಷೇಪವಿದೆ. ಕಲ್ಲಾಪಿನಲ್ಲಿ ಎರಡು ವೆಟ್ ವೆಲ್ ಮತ್ತು ಒಂದು ತ್ಯಾಜ್ಯ ನೀರು ಸಂಸ್ಕರಣ ಘಟಕ ಆರಂಭಿಸಲು ವಿರೋಧ ವನ್ನು ಸ್ಥಳಿಯರು ಮಾಡಿ ಈ ಬಗ್ಗೆ ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿದೆ. ಉಳಿದ ಐದು ಕಡೆಗಳಿಗೆ ವೆಟ್ ವೆಲ್ ಮಾಡಲು ಇಲಾಖೆಗೆ ಸ್ಥಳ ಒದಗಿಸಿ ಕೊಟ್ಟರೆ ಬಾಕಿ ಇರುವ ವೆಟ್ ವೆಲ್ ಗಳನ್ನು ಪೂರ್ಣಗೊಳಿಸಲಾಗುವುದು. ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಸಮರ್ಪಕವಾಗಿ ಕೆಲಸ ಮಾಡಿದರೆ ದುರ್ವಾಸನೆ ಬೀರುವ ಸಂಭವವಿಲ್ಲ ಎಂದು ತಾರ್ತಿಕವಾಗಿ ಸರ್ವೇ ಮಾಡಲಾಗಿದೆ. ಉಲ್ಲಾಳ ನಗರಸಭೆಯಿಂದ ಒಳಚರಂಡಿ ಗ್ರಹ ಸಂಪರ್ಕಕ್ಕೆ ಅನುವು ಮಾಡಿಕೊಟ್ಟರೆ ಅಲ್ಲಿನ ಭಾಗಶಃ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಕಾರ್ಯರೂಪಕ್ಕೆ ತರಬಹುದು . ಭೂಮಿಯ ಬಗ್ಗೆ ಕೋರ್ಟಿನಲ್ಲಿ ವ್ಯಾಜ್ಯಗಳಿರುವುದರಿಂದ ಬಾಕಿ ಇರುವ ಕಾಮಗಾರಿಗಳು ನಿಲ್ಲಿಸಲಾಗಿದೆ. ಎಂದು ಸಚಿವರು ಲಿಖಿತವಾಗಿ ಉತ್ತರಿಸಿದರು.