*ಜುಲೈ. 04 : ಕನಕದಾಸರ ರಾಮಧಾನ್ಯ ಚರಿತೆ : ಅರ್ಥಾನುಸಂಧಾನ*

*ಗಾಯನ ವ್ಯಾಖ್ಯಾನ ಕಾರ್ಯಕ್ರಮ*

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಕಟೀಲು, ಲಲಿತಕಲಾ ಸಂಘ ಹಾಗು ಇವರ ಸಹಯೋಗದಲ್ಲಿ ಕನಕದಾಸರ ರಾಮಧಾನ್ಯ ಚರಿತೆ : ಅರ್ಥಾನುಸಂಧಾನ – ಗಾಯನ ವ್ಯಾಖ್ಯಾನ ಕಾರ್ಯಕ್ರಮವನ್ನು ಜುಲೈ 4 2023 ಮಂಗಳವಾರ ಪೂರ್ವಾಹ್ನ 10.30 ರಿಂದ ಕಾಲೇಜಿನ ವಾಗ್ದೇವಿ ಸಭಾಂಗಣ ಕಟೀಲು ಇಲ್ಲಿ ಏರ್ಪಡಿಸಲಾಗಿದೆ.

ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಮೊಕ್ತೇಸರರು, ಆದ ವೇ.ಮೂ.ಶ್ರೀ.ಕೆ. ವಾಸುದೇವ ಅಸ್ರಣ್ಣ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಅಧ್ಯಕ್ಷರಾದ ಶ್ರೀ ಸನತ್ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಡುಪಿ ಕಲ್ಮಾಡಿ ಎ.ಎಸ್.ಇ.ಎಂ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪವನ್ ಕಿರಣಕೆರೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸರಕಾರಿ ಕಾಲೇಜು, ಕಾಸರಗೋಡು ಕನ್ನಡ ಸ್ನಾತಕೋತ್ತರ ವಿಭಾಗದ ಸಂಶೋಧನಾರ್ಥಿಯಾದ ಶ್ರೀಮತಿ ಶ್ರದ್ಧಾ ಭಟ್ ನಾರ್ಯಪಳ್ಳ ಇವರು ಕನಕದಾಸರ ಕೀರ್ತನ ಗಾಯನ ನಡೆಸಿಕೊಡಲಿದ್ದಾರೆ.

ಶ್ರೀಕ್ಷೇತ್ರದ ಆನುಂಶಿಕ ಅರ್ಚಕರಾದ ವೇ.ಮೂ.ಶ್ರೀ ಶ್ರೀ ಹರಿನಾರಾಯಣದಾಸ ಅಸ್ರಣ್ಣ, ಆಡಳಿತ ಸಮಿತಿಯ ಪ್ರತಿನಿಧಿಯಾದ ಶ್ರೀ ಬಿಪಿನ್ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಮುಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಿಥುನ್ ಕೊಡೆತ್ತೂರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಕೃಷ್ಣ, ಲಲಿತಕಲಾ ಸಂಘದ ಸಂಯೋಜಕಿ ಶ್ರೀಮತಿ ಪೂಜಾ ಕಾಂಚನ್, ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿರುವರು, ಎಂದು ಕನಕದಾಸ ಸಂಶೋಧನ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.