ಮಂಗಳೂರಿನಲ್ಲಿ ಶೀಘ್ರದಲ್ಲೇ ಹಜ್ ಭವನ ನಿರ್ಮಾಣ ಸಚಿವ ಝಮೀರ್

ಬೆಂಗಳೂರು ಜೂನ್ 22 :- ಕರ್ನಾಟಕ ದಿಂದ ಹಜ್ ಯಾತ್ರಿಕರು ಸೌದಿ ಅರೇಬಿಯಾ ದಲ್ಲಿರುವ ಕಾಬಾ ಭವನಕ್ಕೆ ತಲುಪಿ ಭಾರತದ ಸಮೃದ್ಧಿಗಾಗಿ ಪ್ರಾರ್ಥಿಸಬೇಕು. ದೇಶದಲ್ಲಿ ಶಾಂತಿ, ಸಹೋದರತ್ವ ಮತ್ತು ಅಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಮಾಡಬೇಕು. ಅಲ್ಲಾ ನೊಂದಿಗೆ ವಿಶೇಷವಾಗಿ ಯಾಚಿಸಬೇಕು. ಈಗಾಗಲೇ ಕರ್ನಾಟಕದಿಂದ ಸಾವಿರಾರು ಹಾಜಿ ಯಾತ್ರಿಕರು ಮಕ್ಕ ತಲುಪಿರುತ್ತಾರೆ, ಬೆಂಗಳೂರಿನ ಹಜ್ ಭವನದಿಂದ ಯಾತ್ರಿಕರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕರ್ನಾಟಕದ ಸ್ವಯಂಸೇವಕರು ರಾತ್ರಿ ಹಗಲು ಸೇವೆ ಸಲ್ಲಿಸಿದ್ದಾರೆ .ನನ್ನ ವೈಯಕ್ತಿಕ ನಿಧಿ ಯಿಂದ ಎಲ್ಲಾ ಯಾತ್ರಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಕಳೆದ ಮೂರು ವಾರಗಳಿಂದ ಪ್ರತಿದಿನ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. ಯಾತ್ರಿಕರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಎಲ್ಲಾ ವ್ಯವಸ್ಥೆ ಮಾಡಿದ್ದರು . ವಿಶೇಷವಾಗಿ ಕಸ್ಟಮ್ಸ್ ಅಧಿಕಾರಿಗಳು, ಇಮಿಗ್ರೇಶನ್ ಡಿಪಾರ್ಟ್ಮೆಂಟ್ , ಬಿಬಿಎಂಪಿ, ಪೊಲೀಸ್ ಇಲಾಖೆ, ಸರ್ಕಾರಿ ಅಧಿಕಾರಿಗಳು, ಹಜಿ ಸಮಿತಿ ಸದಸ್ಯರುಗಳು ಎಲ್ಲರೂ ಒಂದಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಹಜ್ಜಿ ಸಚಿವರಾದ ಅಬ್ದುಲ್ ರಹೀಮ್ ಖಾನ್, ಕಮಿಟಿ ಅಧ್ಯಕ್ಷರಾದ ರದ್ದೀನ್ ನಾವು ಸುದ್ದಿ
ರವಪ್ಫುದ್ದೀನ್ ಕಚೇರಿವಾಲ ಮತ್ತಿತರರು ನಿರಂತರ ಮಾರ್ಗದರ್ಶನ ನೀಡುತ್ತಿದ್ದರು. ಎಂದು ಅಲ್ಪಸಂಖ್ಯಾತ, ವಸತಿ ಇಲಾಖೆಗಳ ಸಚಿವರಾದ ಜಮೀರ್ ಅಹಮದ್ ಖಾನ್ ರವರು ಇಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು . ರಾಜ್ಯದ ಇತರ ಜಿಲ್ಲೆಗಳ ಮುಂದಿನ ವರ್ಷಗಳಲ್ಲಿ ಹಜ್ ಯಾತ್ರೆಗೆ ಸುಲಭವಾಗಿ ಮೂರು ನಾಲ್ಕು ಜಿಲ್ಲೆಗಳಲ್ಲಿಯೂ ಹಜ್ ಭವನ ನಿರ್ಮಿಸಲಾಗುವುದು. ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ ಮಾಡಲಿಕ್ಕೆ ಭೂಮಿಯನ್ನು ಗುರುತಿಸಲಾಗಿದೆ. ಎಂದು ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್ ರವರು ಮಾಹಿತಿ ನೀಡಿರುತ್ತಾರೆ. ರಾಜ್ಯ ಸಚಿವರುಗಳ ತಂಡ ಅಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಹಜ್ ಭವನ ನಿರ್ಮಾಣದ ಕಾರ್ಯ ಶೀಘ್ರದಲ್ಲೇ ಆರಂಭಿಸಲಾಗುವುದು. ಇದರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಹಜ್ ಯಾತ್ರಿಕರಿಗೆ ಬಹಳ ಉಪಯೋಗವಾಗುತ್ತದೆ. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಹಜ ಸಮಿತಿಯ ಸದಸ್ಯರುಗಳು . ಇಲಾಖೆಯ ಸಚಿವ ಅಬ್ದುಲ್ ರಹೀಮ್ ಖಾನ್ ,ಮತ್ತು ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಹಜ್ ಸಮಿತಿ ಸದಸ್ಯರಾದ ಬಿ ಎಂ ಫಾರೂಕ್ ಮೊದಲಾದ ಹಲವಾರು ಮುಖಂಡರು ಉಪಸ್ಥಿತರಿದ್ದರು.