*ವಿವಿ ಕಾಲೇಜು: ಪ್ಲಾಸ್ಟಿಕ್ ನಿವಾರಣೆ ಸಂಕಲ್ಪದೊಂದಿಗೆ ವಿಶ್ವ ಪರಿಸರ ದಿನಾಚರಣೆ*

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಜಂಟಿ ಸಹಯೋಗದೊಂದಿಗೆ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಸೋಮವಾರ, ‘ಬೀಟ್ ಪ್ಲಾಸ್ಟಿಕ್ ಪೊಲ್ಯೂಶನ್ʼ ಎಂಬ ಸಂದೇಶದೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಿಲಿಕುಳ ಸಸ್ಯೋದ್ಯಾನ ಮತ್ತು ಔಷಧೀಯ ಸಸ್ಯಗಳ ಉದ್ಯಾನವನದ ಮೇಲ್ವಿಚಾರಕ ಉದಯ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಲಮೂಲಗಳಿಗೆ ಆಸಿಡ್ ಸೇರುತ್ತಿರುವುದರಿಂದ ಜಲಚರಗಳ ಜೀವಕ್ಕೆ ಹಾನಿಯಾಗುತ್ತಿರುವುದಲ್ಲದೆ, ಅವುಗಳನ್ನು ಆಹಾರವಾಗಿ ಸೇವಿಸುವ ಮನುಷ್ಯರ ಮೇಲೂ ದುಷ್ಪರಿಣಾಮವಾಗುತ್ತದೆ. ಈ ಬೇಜವಾಬ್ದಾರಿ, ಆಹಾರ ಸರಪಳಿಯ ಜೊತೆಗೆ, ಇಡೀ ಪರಿಸರ ವ್ಯವಸ್ಥೆಯನ್ನೇ ನಾಶಪಡಿಸುತ್ತಿದೆ, ಎಂದು ಆತಂಕ ವ್ಯಕ್ತಪಡಿಸಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿದರು. ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶೋಭಾ, ಆಂತರಿಕ ಗುಣಮಟ್ಟ ಮತ್ತು ಮೌಲ್ಯಮಾಪನದ ಕೇಂದ್ರದ ಸಂಯೋಜಕ ಡಾ. ಸಿದ್ಧರಾಜು, ಸಸ್ಯಾಶಾಸ್ತ್ರ ವಿಭಾಗದ ಉಪನ್ಯಾಸಕಿ ಕಾವ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚೈತನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಅನುಷಾ ಸ್ವಾಗತಿಸಿದರು. ಕಾರ್ತಿಕ್ ಧನ್ಯವಾದ ಸಮರ್ಪಿಸಿದರು.
//

############$$$$$$$$$$$$$#######

*ತುಳುನಾಡಿನಲ್ಲಿ ಆಹಾರ ಸಂಸ್ಕೃತಿಯ ಪ್ರತೀಕ ಡಾ. ಶೇಖರ್ ನಾಯ್ಕ್*

ಮಂಗಳೂರು: ತುಳುನಾಡಿನಲ್ಲಿ ಆಹಾರ ಸಂಸ್ಕೃತಿಯ ಪ್ರತೀಕ. ದಕ್ಷಿಣ ಕನ್ನಡದ ಪ್ರವಾಸೋದ್ಯಮ, ಆಹಾರ ಮತ್ತು ಸಂಸ್ಕೃತಿ ಒಂದಕ್ಕೊಂದು ಸಂಬಂಧಿಸಿದ್ದಾಗಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ. ಶೇಕರ್ ನಾಯ್ಕ್ ಹೇಳಿದರು. ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಬಿ.ಬಿ.ಎ ಮತ್ತು ಬಿ.ಎ ಪ್ರವಾಸೋದ್ಯಮ ವಿಭಾಗದ ವತಿಯಿಂದ ಸೋಮವಾರ ನಡೆದ ಆಹಾರ ಮೇಳ- “ಅಟಿಲ್ 2K23” ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಖಂಡಿಗೆ ಬೀಡಿನ ಶ್ರೀ ಧರ್ಮ ಅರಸು ಉಲ್ಲಾಯ ಕ್ಷೇತ್ರದ ಗಡಿ ಪ್ರಧಾನರಾದ ಶ್ರೀ ಆದಿತ್ಯ ಮುಕ್ಕಾಲ್ದಿ ಅವರು ಆಹಾರ ಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ.ಅನಸೂಯ ರೈ ವಹಿಸಿದ್ದರು. ಬಿ.ಬಿ.ಎ ವಿಭಾಗ ಮುಖ್ಯಸ್ಥ ಡಾ. ಯತೀಶ್ ಕುಮಾರ್ ಹಾಗು ಬಿ.ಎ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ಎಂ.ಎಂ, ಉಪನ್ಯಾಸಕರಾದ ಶ್ರೀರಾಜ್ ಬಿ ಎಸ್, ಪರಿಣಿತಾ ಶೆಟ್ಟಿ, ರೊವೀನಾ ಸೋನ್ಸ್, ಸುಹಾನಾ ಖುಲ್ಸಂ ಮೊದಲಾದವರು ಉಪಸ್ಥಿತರಿದ್ದರು.

ಆಹಾರ ಮೇಳದಲ್ಲಿ ಸುಮಾರು 65 ಕ್ಕೂ ಅಧಿಕ ಬಗೆಯ ಆಹಾರ ಖಾದ್ಯಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು. ಕರಾವಳಿಯ ಹೆಸರಾಂತ ಸಸ್ಯಾಹಾರ ಖಾದ್ಯಗಳೊಂದಿಗೆ ಕೋರಿ ರೊಟ್ಟಿ, ಸೇಮೆದಡ್ಯೆ ಚಿಕನ್ ಕರಿ, ಮರ್ವಾಯಿ ಸುಕ್ಕ ದಂತಹ ಮಾಂಸಹಾರಿ ಖಾದ್ಯಗಳು, ವಿಶೇಷ ಊಟ, ಚಾಟ್ಗಳು, ಬೇಕರಿ ಐಟಂಗಳು, ಜ್ಯೂಸ್, ಮಾವು, ಹಲಸು ಮೊದಲಾದ ಹಣ್ಣುಗಳು, ಸಿಹಿ ಖಾದ್ಯಗಳು, ಜ್ಯೂಸ್ಗಳು, ವಿವಿಧ ಡೆಸರ್ಟ್ಗಳು ಹೀಗೆ ಆಹಾರ ವೈವಿಧ್ಯ ಗಮನ ಸೆಳೆಯಿತು. ಆಹಾರದೊಂದಿಗೆ ಕರಾವಳಿಯ ವೈಷಿಷ್ಟ್ಯವನ್ನು ಬಿಂಬಿಸುವ ಪೋಸ್ಟರ್ಗಳು, ವಿದ್ಯಾರ್ಥಿಗಳ ಸಂಗೀತ ಸಂಭ್ರಮಕ್ಕೆ ಮೆರುಗು ನೀಡಿತು.
//