ಬೆಂಗಳೂರು ಮೇ 24, ವಿಧಾನಸೌಧದ ನೂತನ ಸ್ಪೀಕರ್ ಆಗಿ ಮಂಗಳೂರು ಶಾಸಕ ಯು ಟಿ ಅಬ್ದುಲ್ ಖಾದರ್ ಅವರು ಇಂದು ಅವಿರೋಧವಾಗಿ ಆಯ್ಕೆಯಾಗಿ ಆಸನ ಸ್ವೀಕರಿಸಿದರು. ಹಂಗಾಮಿ ಸ್ಪೀಕರ್ ದೇಶಪಾಂಡೆ ರವರು ಸ್ಪೀಕರ್ ಪೀಠ ಬಿಟ್ಟುಕೊಟ್ಟರು .ಯುಟಿ ಖಾದರ್ ಅವರು ಪೀಠದಲ್ಲಿ ಕುಳಿತುಕೊಂಡರು. ಪೀಠ ಸ್ವೀಕರಿಸಿದ ನಂತರ ಮುಖ್ಯಮಂತ್ರಿ, ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಿರಿಯ ಶಾಸಕ ಜಿ ಪರಮೇಶ್ವರ್, ಎಚ್ ಕೆ ಪಾಟೀಲ್, ಜೆಡಿಎಸ್ ಶಾಸಕ ದೇವೇಗೌಡ, ಬಿಜೆಪಿ ಶಾಸಕರುಗಳಾದ ಡಾ. ಅಶ್ವಥ್ ನಾರಾಯಣ್, ಅರಗ ಜ್ಞಾನೇಂದ್ರ, ಮೊದಲಾದ ಹಲವಾರು ಹಿರಿಯ ನಾಯಕರು ಖಾದರ್ ಅವರ ಸರಳತೆ, ಕ್ರಿಯಾಶೀಲತೆ, ಮಾನವೀಯತೆ ಸಹನೆ, ತಾಳ್ಮೆ, ತ್ಯಾಗ ಮನೋಭಾವ, ಸoಯಮ, ಮೊದಲಾದ ಹಲವು ಗುಣವಿಶೇಷಗಳನ್ನು ಹಾಡಿ ಹೋಗಲಿ ಯುಟಿ ಖಾದರ್ ರನ್ನು ಅಭಿನಂದನೆಸಿದರು. ಮತ್ತು ವಿಧಾನಸಭೆಯ ಕಾರ್ಯಕಲಾಪಗಳು ನಡೆಸಲು ಸರ್ವ ರೀತಿಯ ಸಹಕಾರ ನೀಡುವುದು ಎಂದು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರುಗಳು ತಿಳಿಸಿದರು.

ಕರ್ನಾಟಕ ಮತ್ತು ದೇಶದ ಅಭಿವೃದ್ಧಿಯಲ್ಲಿ ಮತ್ತು ಸೌಹಾರ್ದ ಪರಂಪರೆ ಕಾಯ್ದುಕೊಳ್ಳುವಲ್ಲಿ ಮುಸ್ಲಿಮರಲ್ಲಿರುವ ಬ್ಯಾರಿ ಸಮುದಾಯದ ಕೊಡುಗೆಗಳನ್ನು ಮೂರು ಪಕ್ಷದ ನಾಯಕರು ಪ್ರಶಂಸಿದ್ದರು. ಆರ್ಥಿಕ ರಂಗ, ಶಿಕ್ಷಣ ,ಉದ್ಯಮ, ಸಾಹಿತ್ಯ, ರಾಜಕೀಯ, ಧಾರ್ಮಿಕ, ಭಾಷೆ, ಸೌಹಾರ್ದ ಪರಂಪರೆ ,ಐಕ್ಯತೆ, ಸಂಸ್ಕೃತಿ ,ಮೊದಲಾದ ವಿವಿಧರಂಗಗಳಲ್ಲಿ ಕರ್ನಾಟಕವನ್ನು ದೇಶದಲ್ಲೇ ಉತ್ತಮ ಹೆಸರುವಾಸಿಯಾಗಲು ಬ್ಯಾರಿ ಸಮುದಾಯದ ಕೊಡುಗೆ ಅಪಾರ ಎಂದು ಬಿಜೆಪಿ, ಕಾಂಗ್ರೆಸ್ ,ಮತ್ತು ಜೆಡಿಎಸ್ ಪಕ್ಷದ ಹಿರಿಯ ಶಾಸಕರುಗಳು ಹಾಡಿಹೋಗಲಿದರು. ಇದರಿಂದಾಗಿ ಬ್ಯಾರಿ ಸಮುದಾಯದಿಂದ ಹುಟ್ಟಿ ಬೆಳೆದ ಯುಟಿ ಖಾದರ್ ಅವರ ಸ್ಪೀಕರ್ ಆಗಿ ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದ ಕಾರಣ ಕರ್ನಾಟಕದಲ್ಲಿರುವ 15 ಲಕ್ಷ ಬ್ಯಾರಿ ಜನಾಂಗಕ್ಕೆ ರಾಷ್ಟ್ರಮಟ್ಟದಲ್ಲಿ ಹೆಸರು ಬಂದಿದೆ. ವಿಧಾನಸೌಧದಲ್ಲಿಯೂ ಪತ್ರಕರ್ತರು ,ಅಧಿಕಾರಿಗಳು, ಶಾಸಕರುಗಳು, ಮಾಜಿ ಮಂತ್ರಿಗಳು, ಸಿಬ್ಬಂದಿಗಳು, ಬ್ಯಾರಿ ಸಮುದಾಯದ ಬಗ್ಗೆ ಅರಿಯುವ ಮತ್ತು ಅವರ ಕೊಡುಗೆಗಳನ್ನು ಪ್ರಶಂಶಿಸುವ ತಿಳಿಯುವ ಒಂದು ಅವಕಾಶವನ್ನು ರಾಜಧಾನಿಯಲ್ಲಿ ಸಿಗುವಂತಾಗಲು ಮತ್ತು ವಿಧಾನಸೌಧದಲ್ಲಿ ದಾಖಲಾಗುವಂತಾಗಲು ಒಂದು ಉತ್ತಮ ಅವಕಾಶ ಇಂದು ಒದಗಿ ಬಂದಿದೆ. ಬ್ಯಾರಿ ಮತ್ತು ಮುಸ್ಲಿಂ ಸಮುದಾಯದಲ್ಲಿ ವಿಧಾನಸೌಧದ ಪ್ರಥಮ ಸ್ಪೀಕರಾಗಿ ಯುಟಿ ಖಾದರ್ ರವರು ಅಧಿಕಾರ ಸ್ವೀಕರಿಸುವುದರಿಂದ ಸಮಸ್ತ ಮುಸ್ಲಿಂ ಸಮುದಾಯ ಮತ್ತು ದೇಶದ ಅಲ್ಪಸಂಖ್ಯಾತರು ಕರ್ನಾಟಕವನ್ನು ಕುತೂಹಲದಿಂದ ನೋಡುವಂತಾಗಿದೆ. ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಅಬ್ದುಲ್ ಕಲಾಂ ರವರು ಸೇವೆಯಿಂದಾಗಿ ಪ್ರಾಮಾಣಿಕ್ಯತೆಯಿಂದಾಗಿ ಇಡೀ ವಿಶ್ವಕ್ಕೆ ಭಾರತದ ಹೆಸರನ್ನು ಉತ್ತುಂಗಕ್ಕೆ ತಲುಪುವಂತಾಗಿದೆ. ಅದೇ ರೀತಿ ಕರ್ನಾಟಕದ ಹೆಸರನ್ನು ಮತ್ತು ಕೀರ್ತಿ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿಗೊಲ್ಲಲು ನೂತನ ಸ್ಪೀಕರ್ ಯುಟಿ ಖಾದರ್ ರವರು ತಮ್ಮದೇ ಕೊಡುಗೆ ನೀಡಲಿದ್ದಾರೆ ಎಂದು ಬಿಜೆಪಿಯ ಸಹಾಯ ನಾಯಕರುಗಳು ಅಭಿಪ್ರಾಯಪಟ್ಟರು.