ಯುವ ಪ್ರತಿಭೆ ಈಗಾಗಲೇ ಕಿರುತೆರೆಯಲ್ಲಿ ಮನೆ ಮಾತಾದ ” ಪಾಪಾ. ಪಾಂಡು” ಖ್ಯಾತಿಯ ಶ್ರೀ ವಿಕ್ರಮ್ ಸೂರಿ ನಿರ್ದೇಶನದ “ಚೌಕಬಾರ” ದೋಹಾ ನಗರದಲ್ಲಿ ಇದೆ ಬರುವ ಗುರುವಾರ (ಮೇ 25 ರಂದು ) ಬಿಡುಗಡೆಗೊಳ್ಳುತ್ತಿದೆ. ಜೊತೆಗೆ ಈ ಚಿತ್ರ ತಂಡದವರ ಜೊತೆಗೆ ಸಂವಾಡವನ್ನು ಹಮ್ಮಿಕೊಳ್ಳಲಾಗಿದೆ.
ಈ ಚಿತ್ರವು ಕಾದಂಬರಿ ಆಧಾರಿತ ಚಿತ್ರವಾಗಿದ್ದು ವಿಶಿಷ್ಟ ಪ್ರೇಮಕಥೆಯನ್ನು ಹೊಂದಿದೆ.
ವಿಕ್ರಮ್ ಸೂರಿ ಅವರು ಈ ಮೊದಲು ನಿರ್ದೇಶಸಿದ ಮೊದಲ ಚಿತ್ರ “ಎಳೆಯರು ನಾವು ಗೆಳೆಯರು” ಚಿತ್ರಕ್ಕೆ ಪ್ರತಿಷ್ಟಿತ ರಾಜ್ಯ ಪ್ರಶಸ್ತಿ ದೊರಕಿದೆ ಚೌಕಬಾರ ಇದು ಅವರ ನಿರ್ದೇಶನದ ದ್ವಿತೀಯ ಚಿತ್ರ ಹಲವಾರು ನೀರಿಕ್ಷೆ ಮೂಡಿಸಿದೆ.
ಈ ಚಿತ್ರದ ನಾಯಕಿ ಮತ್ತು ನಿರ್ಮಾಪಕಿ ನಮಿತಾ ರಾವ್ ಬಹುಮುಖ ಪ್ರತಿಭೆ. ಸಿಲ್ಲಿ ಲಲ್ಲಿ ಧಾರಾವಾಹಿಯ ನಟನೆಯ ಮೂಲಕ ಕನ್ನಡ ನಾಡಿನ ಮನೆ ಮಾತಾಗಿದ್ದರು. ಮತ್ತು ಚಿತ್ರದ ನಾಯಕ ಹೊಸ ಪ್ರತಿಭೆ ವಿಹಾನ್ ಪ್ರಭಂಜನ್ ಮಲೆನಾಡಿನ ಪ್ರತಿಭೆ. ಚಿತ್ರಕ್ಕೆ ಸುಮಧುರ ಸಂಗೀತ ನೀಡಿದವರು ಅಶ್ವಿನ್ ಕುಮಾರ್ ಇದು ಅವರ ಪ್ರಥಮ ಚಿತ್ರ. ಚಿತ್ರದ ಎಲ್ಲ ಹಾಡುಗಳು ಬಹಳ ಮಧುರವಾಗಿವೆ ಮತ್ತು ಹೊಸತನದಿಂದ ಕೂಡಿವೆ. ಅಶ್ವಿನ್ ಅವರು ಈ ಮೊದಲು ವೃತ್ತಿನಿಮಿತ್ತವಾಗಿ ದೋಹಾ ದಲ್ಲಿ ನೆಲೆಸಿದ್ದರು ಮತ್ತು ಕತಾರ್ ಕನ್ನಡಿಗರಿಗೆ ಚಿರಪರಿಚಿತರು.
ಕತಾರ್ ನಾ ಎಲ್ಲ ಕನ್ನಡ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಿನಾಂಕ: 25ನೇ ಮೇ 2023 ರಂದು ಸಂಜೆ 7:30 ಕ್ಕೆ ಏಶಿಯನ್ ಟೌನ್ ಸಿನಿಮಾ ದ ಸ್ಕ್ರೀನ್ 3 ರಲ್ಲಿ ಈ ಚಿತ್ರವನ್ನು ನೋಡಿ ಮತ್ತು ಚಿತ್ರದ ನಿರ್ದೇಶಕರು, ನಟ, ನಟಿ ಮತ್ತು ಸಂಗೀತ ನಿರ್ದೇಶಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಕನ್ನಡ ಚಿತ್ರಗಳನ್ನು ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಸಂಘಟಕರಾದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ವಿನಂತಿಸಿಕೊಂಡಿದ್ದಾರೆ.