*ವಕ್ಫ್ ಮಂಡಳಿಯನ್ನು*
*ಅಭಿವೃದ್ಧಿ ಪಥದಲ್ಲಿ* *ಯಶಸ್ವಿಯಾಗಿ ಮುನ್ನೆಲೆಯಲ್ಲಿ*
*ಕೊಂಡೊಯ್ಯುತ್ತಿರುವ ಶಾಫಿ ಸಅದಿ*

*ಪ್ರಾಮಾಣಿಕವಾಗಿ ಚಿಂತನೆ ಮಾಡುವವರು ಆದ್ಯತೆ ಮೇರೆಗೆ ಹೇಳುತ್ತಾರೆ*
*ಶಾಫಿ ಸಅದಿ ವಕ್ಫ್ ಬೋರ್ಡ್ ಅಧ್ಯಕ್ಷರಾದ ಬಳಿಕ ವಾಗಿದೆ*
*ವಕ್ಫ್ ಮಂಡಳಿ ಸಾರ್ವತ್ರಿಕವಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದೆಯೆಂದು*
*ವಕ್ಫ್ ಮಂಡಳಿಗೆ ಹಲವು ದಶಕಗಳ ಇತಿಹಾಸವಿದ್ದರೂ ಹಲವು ಪ್ರತಿಭಾವಂತ ಹನಫಿಗಳು ಅಲ್ಲದವರೂ ಅದನ್ನು ಮುನ್ನಡೆಸಿದರೂ ಕೂಡ ಅದು ಒಂದು ಕಾಲದಲ್ಲಿ ಹನಫಿಗಳಿಗೆ ಸೀಮಿತ ಸಂಸ್ಥೆಯಂತಿತ್ತು*
*ಶಾಫಿ ಸಅದಿ ಅಧಿಕಾರ ವಹಿಸಿಕೊಂಡ ಬಳಿಕ ಶಾಫಿ ಹನಫಿ ಮದ್ಸ್ ಹಬ್ ಗಳ ಮಧ್ಯೆ ನಿಕಟ ಸಂಪರ್ಕದ ಕೊಂಡಿಯಾಗಿ ಮುನ್ನೆಲೆಯಲ್ಲಿ ಸ್ಥುತಾರ್ಹ ಸೇವೆಗೈದ ಪರಿಣಾಮವಾಗಿ ಇಂದು ವಕ್ಫ್ ಮಂಡಳಿ ದೈನಂದಿನ ಅಹರ್ನಿಶಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೆ*
*ಕಾಲಕ್ಕನುಗುಣವಾಗಿ ಸರ್ಕಾರಗಳು ಬದಲಾಗುತಿದ್ದರೂ ಅವರೆಲ್ಲರೊಂದಿಗೆ ನಿಕಟ ಸಂಬಂಧವಿರಿಸಿ ತಮ್ಮ ಆದ್ಯತೆ ರಾಜಕೀಯ ವಲ್ಲವೆಂದು ಕೃತಿಯ ಮೂಲಕ ತೋರಿಸಿ ಯಾವುದೇ ರಾಜಕೀಯ ಪಕ್ಷಗಳ ಅಧಿಕೃತ ಸದಸ್ವತ ಕೂಡ ಸ್ವೀಕರಿಸದೆ ಸರ್ವರೊಂದಿಗೂ ಸಮಾನ ಒಡನಾಟ ಹೊಂದೂದರೊಂದಿಗೆ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಮಾನ್ಯ ಶಾಫಿ ಸಅದಿರವರ ಜಾಣ್ಮೆಯನ್ನು ಮೆಚ್ಚಲೇ ಬೇಕು*
*ಕಬಳಿಕೆಯಾದ ಸಾವಿರಾರು ಕೋಟಿ ಮೌಲ್ಯದ ವಕ್ಫ್ ಆಸ್ತಿಗಳನ್ನು ಮರಳಿ ವಕ್ಫ್ ಮಂಡಳಿಯ ಸುಪರ್ದಿಗೆ ತೆಗೆದುಕೊಳ್ಳಲು ವಕ್ಫ್ ಮಂಡಳಿಯಿಂದ ನಮ್ಮ ಸಮಾಜಕ್ಕೆ ಮದ್ರಸಕ್ಕೆ, ಮಸೀದಿಗಳಿಗೆ,ಮುಅಲ್ಲಿಮರಿಗೆ,ಖತೀಬರಿಗೆ,ಮುಹದ್ದಿನ್ ಗಳಿಗೆ*
*ಮತ್ತಿತರ ನಮ್ಮ ಸಮಾಜದ ವಿಭಿನ್ನ ಸ್ತರಗಳಲ್ಲಿರುವವರಿಗೆ ವಕ್ಫ್ ಮಂಡಳಿಯ ಆಯ್ದ ಸವಾಲತ್ತುಗಳನ್ನು ತಮ್ಮ ಮೊನಚಾದ ಬರಹ, ಭಾಷಣಗಳ ಮೂಲಕ ತಿಳಿಸಿ ಸಮಾಜವನ್ನು ಸರ್ಕಾರದ ಅರ್ಹ ಸವಾಲತ್ತುಗಳನ್ನು ಪಡೆಯಲು ಅತ್ತ ಗಮನಹರಿಸಲು ಪ್ರೇರಿಪಿಸಿರುವುದಕ್ಕೆ ನಾವು ಅಭಾರಿಯಾಗ ಬೇಕೆ ವಿನಃ ಅವರೊಂದಿಗೆ ಕೃತಘ್ನ ರಾಗಬಾರದು*
*ವಕ್ಫ್ ಆಸ್ತಿಯಾದರೂ ಅದರ ಪರಿವೇ ಇಲ್ಲದ ಮನಸ್ಸುಗಳಿಗೆ ಪ್ರತೈಕ ವಿದ್ವಾಂಸರು ತಮ್ಮ ಮೊಹಲ್ಲಾ ಜಮಾಅತ್ ನೀಡುವ ವೇತನವನ್ನು ಮಾತ್ರ ಆರ್ಥಿಕ ಮಾರ್ಗವಾಗಿ ಕಾಣುತ್ತಿರುವ ಗಳಿಗೆಯಲ್ಲಿ ವಕ್ಫ್ ಸವಾಲತ್ತನ್ನು ಪಡೆಯಲು ಮಾನ್ಯ ಶಾಫಿ ಸಅದಿ ಪ್ರೇರಣೆಯಾದರು*
*ರಾಜ್ಯದ ಅನೇಕ ಮೊಹಲ್ಲಾ ಗಳಲ್ಲಿರುವ ಆಂತರಿಕ ಕಲಹಗಳಿಗೆ ತಾರ್ಕಿಕ ಅಂತ್ಯ ಕಾಣಲು ಯಶಸ್ವಿಯಾಗಿ ರಾಜ್ಯದ ಪಾಲಿಗೆ ಮುಸ್ಲಿಂ ಸಮುದಾಯದ ಪ್ರಬಲ ನಾಯಕರಾಗಿ ಮೆರೆಯುವಾಗ ಕನಿಷ್ಠ “ಸುನ್ನೀ ಆಲಿಂ”ಎಂಬ ದೃಷ್ಟಿಕೋನದಿಂದ ಬೆಂಬಲಿಸುವುದು ಬಿಟ್ಟು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅವರನ್ನು ಕೂಡ ಮುಲೆಗುಂಪು ಮಾಡಲು ತೆರೆಯ ಹಿಂದೆ ಯಾರೇ ಪ್ರಯತ್ನ ಮಾಡಿದ್ದರೂ ಅವರು ಯಶಸ್ಸು ಸಾಧಿಸುವುದು ಹಗಲುಕಣಸು*
*ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರಲ್ಲಿ ಸಹಜ ಪ್ರಕ್ರಿಯೆ ಎಂಬಂತೆ ಕೆಲವೊಮ್ಮೆ ಲೋಪದೋಷಗಳು ಬಂದಿರಬಹುದು*
*ಆದರೆ ನಾವು ಚಿಂತನೆ ಮಾಡಬೇಕಾಗಿದ್ದು ಧನಾತ್ಮಕ ಅಂಶಗಳು ಹೆಚ್ಚಿದ್ದರೆ ಅವರನ್ನು ಬೆಂಬಲಿಸುವುದು*
*ಅದುಬಿಟ್ಟು ಮನೋಸ್ಥೈರ್ಯ ಕಳೆದುಕೊಳ್ಳುವ ರೂಪದಲ್ಲಿ ಟೀಕಿಸುವುದು ಸಮಂಜಸವಲ್ಲ*
*ನಮ್ಮ ರಾಜ್ಯದ 90ಲಕ್ಷ ಮುಸ್ಲಿಮರ ಪೈಕಿ ಗರಿಷ್ಠ ಪ್ರಮಾಣದಲ್ಲಿ ಹನಫಿ ಭಾಂದವರಿದ್ದಾರೆ*
*ಅವರಲ್ಲಿ ಬಹುತೇಕ ಮಂದಿ. ಸುಲ್ತಾನುಲ್ ಉಲಮಾರ ಹಾದಿಯಲ್ಲಿ ಶಾಫಿ ಸಅದಿಯ ನಾಯಕತ್ವಕ್ಕೆ ಬೆಂಬಲ ಸೂಚಿಸುವವರೇ ಇದ್ದಾರೆ*
*ಇನ್ನುಳಿದಂತೆ ಶಾಫಿಗಳ ಪೈಕಿ ಗರಿಷ್ಠ ಪ್ರಮಾಣದಲ್ಲಿ ಶೈಖುನಾ ಸುಲ್ತಾನುಲ್ ಉಲಮಾರ ಅನುಯಾಯಿಗಳು*
*ಅವರಿಗೂ ಶಾಫಿ ಸಅದಿಯ ನಾಯಕತ್ವಕ್ಕೆ ತಕರಾರಿಲ್ಲ*
*ರಾಜ್ಯದ ಎಸ್ ಎಸ್ ಎಫ್, ಎಸ್, ವೈ, ಎಸ್, ಮುಸ್ಲಿಂ* *ಜಮಾಅತ್, ಇದರ ಮುಂದಾಳತ್ವ ವಹಿಸಿದ ಮಾನ್ಯ ಶಾಫಿ ಸಅದಿ ರವರಿಗೆ*
*ಸಹಜವಾಗಿಯೇ ಈ ಎಲ್ಲಾ ಸಂಘಟನೆಗಳ ಬೆಂಬಲವಿದೆ*
*ಅಲ್ಲದೆ ಸಾವಿರಾರು ವಿದ್ವಾಂಸರ ನೈತಿಕ ಬೆಂಬಲ ದುಆ ಆಶೀರ್ವಾದವಿದೆ*
*ಓರ್ವ ನಾಯಕನಾಗಲು ಮತ್ತೇನು ಬೇಕು*
*ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಮಠಾಧೀಶರು ಒಕ್ಕಲಿಗ, ಲಿಂಗಾಯತ, ಕುರುಬ*
*ಮತ್ತಿತ್ತರ ಕಾರ್ಡ್ ಪ್ರಯೋಗಗಳನ್ನು ಮಾಡುವಾಗ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಸಂಸ್ಥಾಪನೆಗಾಗಿ ಮತ ಚಲಾಯಿಸಿದ ನಮ್ಮ ‌ಸಮಾಜದ ಪರವಾಗಿ ಆಡಳಿತದಲ್ಲಿ ಐವರು ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡಲು*
*ಓರ್ವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಬೇಡಿಕೆ ಇಡುವುದರಲ್ಲಿ ತಪ್ಪೇನೀದೆ*
*ನಮ್ಮ ಸಮಾಜದಲ್ಲಿ ಟೀಕಿಸುವವರು ಕೂಡ ಕಾರ್ಯ ಸಾಧನೆಗೆ ಅವರನ್ನೇ ನೆಚ್ಚಿಕೊಂಡಿರುವುದು ಗುಟ್ಟಾದ ವಿಷಯವಲ್ಲ*
*ಶಾಫಿ ಸಅದಿ ರವರನ್ನು ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ತೆರೆಯ ಹಿಂದೆ ಅಭಿಪ್ರಾಯ ಹೇಳುವವರು ಅವರಿಗೆ ಸಮರ್ಥ ಬದಲಿಗರೊಬ್ಬರನ್ನು ತೋರಿಸಿದರೆ ಒಮ್ಮೆ ನೋಡಬಹುದಿತ್ತು*
*ಕೇವಲ ಮಸೀದಿಯ ಮಿಂಬರ್ ಮಿಹ್ರಾಬಿಗೆ ಸೀಮಿತ ವಾದ ವಿದ್ವಾಂಸರು ಇಂದು ಶೈಖುನಾ ಸುಲ್ತಾನುಲ್ ಉಲಮಾರ ಅವಿರತ ಪ್ರಯತ್ನದಿಂದ ವಕೀಲಿಕೆ ನಡೆಸಲು ಸುಪ್ರೀಂ ಕೋರ್ಟ್ ತನಕ ತಲುಪಿದ್ದು*
*ಪ್ರಾದೇಶಿಕ, ರಾಜ್ಯ, ದೇಶೀಯ,ಅಂತರ್ದೇಶೀಯ ಭಾಷೆಗಳಲ್ಲಿ ನಿರರ್ಗಳವಾಗಿ ವೃವಹರಿಸಲು ಸಾಮರ್ಥ್ಯ ಹೊಂದಿದೆ*
*ಮತ ಲೌಕಿಕ ಶಿಕ್ಷಣ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಕೂಡಾ ಸಲೀಸಾಗಿ ಪಡೆದು ಬಹುಮುಖ ವ್ಯಕ್ತಿತ್ವದ ಪ್ರತಿಭೆಗಳಾಗಿ ಸಮಾಜ ಸೇವೆಯಲ್ಲಿ ಮುನ್ನೆಲೆಯಲ್ಲಿ ಸ್ಥುತಾರ್ಹ ಸೇವೆಗೈಯ್ಯುವಾಗ ಇದನ್ನು ಕಂಡು ಶೈಖುನಾ ಸುಲ್ತಾನುಲ್ ಉಲಮಾ, ನೂರುಲ್ ಉಲಮಾರ ಘನತೆವೆತ್ತ ಸೇವೆಯನ್ನು ಕೊಂಡಾಡುವುದನ್ನು ಬಿಟ್ಟು ನಾಲಿಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಟೀಕಾಕಾರರು ಕನಿಷ್ಠ ತಮ್ಮ ಮಕ್ಕಳನ್ನು ತಮ್ಮ ಆಜ್ಞಾಪಾಲಕರಾಗಿ ಮಾರ್ಪಡಿಸಲು ಯಶಸ್ವಿಯಾದರೆ,5 ವಕ್ತ್ ನಮಾಝ್ ಮತ್ತಿತ್ತರ ಕಡ್ಡಾಯ ಕರ್ಮಗಳನ್ನಾದರೂ ನಿರ್ವಹಣೆ ಮಾಡಲು ಹಣೆಗೊಳಿಸಲು ಪ್ರಯತ್ನ ಮಾಡಿದ್ದರೆ ಉತ್ತಮ ವಾಗುತ್ತಿತ್ತು*
*ಪೇಟ ಧರಿಸಿ ಗೂಟದ ಕಾರಿನಲ್ಲಿ ವಿದ್ವಾಂಸರು ಸಂಚರಿಸುವುದು ಕಾಣುವಾಗ*
*ಕೆಲವರಿಗಾದರೂ ಹೊಟ್ಟೆ ಹುರಿದರೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ*
*ಟೀಕಾಕಾರರು ಕನಿಷ್ಠ ತಾವು ಸಮೂದಾಯಕ್ಕೆ ಮಾಡಿದ ಸೇವೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು*
*ಎಡವಿದರೆ ತಿದ್ದಬೇಕು*
*ಹೊರತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ವಾದವಿವಾದಗಳಲ್ಲಿ ನಿರತರಾಗಿ ಸಮಯ ವೈರ್ಥಮಾಡುವುದು*
*ವಿದ್ವಾಂಸರ ಹಸಿಮಾಂಸ ತಿನ್ನುವುದು ಇನ್ನಾದರೂ ಕಡಿಮೆ ಮಾಡದಿದ್ದರೆ ಪರಲೋಕಕ್ಕೆ ಕಾಯಬೇಕಿಲ್ಲ*
*ಈ ಲೋಕದಲ್ಲಿಯೇ ತಕ್ಕ ಶಿಕ್ಷೆಯನ್ನು ಪಡೆಯಬೇಕಾದೀತು*
*ಅಲ್ಲಾಹು ನಮ್ಮೆಲ್ಲರನ್ನು ಧರ್ಮದ ನಿಷ್ಕಲ್ಮಶ ವಿದ್ವಾಂಸರು,ಖಾದ್ಮ್ ಗಳ ಪಂಕ್ತಿಯಲ್ಲಿ ಒಗ್ಗೂಡಿಸಲೆಂದು ಮನದಾಳದಿಂದ ಪ್ರಾರ್ಥಿಸುತ್ತೇನೆ*

*ಲೇಖಕರು, ಸಿ, ಎ, ಮುಹಮ್ಮದ್ ನಿಝಾರ್ ಸಖಾಫಿ ಅಫ್ಳಲ್ ಸಅದಿ ಕಡಂಗ*
*೯೪೮೩೯೦೯೦೯೫*