ಕರ್ನಾಟಕ ವಿಧಾನಸಭೆ ಚುನಾವಣೆ ಅಂತಿಮ ಘಟಕ್ಕೆ ತಲುಪಿದ್ದು, ‘ಲಿಂಗಾಯತ’ ವಿಷಯ ಅಖಾಡದಲ್ಲಿ ಭಾರೀ ಸದ್ದು ಮಾಡುತ್ತಿದೆ. ‘ಬಿಜೆಪಿ ಲಿಂಗಾಯತರ ಕೈಬಿಟ್ಟಿದೆ’ ಎಂದು ಕಾಂಗ್ರೆಸ್‌ ನಿರಂತರವಾಗಿ ಆರೋಪದಲ್ಲಿ ನಿರತವಾಗಿದೆ. ಆದರೆ, ‘ಹಾಗೇನಿಲ್ಲ; ನಾವು ಲಿಂಗಾಯತರನ್ನು ಯಾವತ್ತೂ ಕೈಬಿಟ್ಟಿಲ್ಲ’ ಎಂದು ಹೇಳಿರುವ ಬಿಜೆಪಿ ಅಂಕಿ-ಅಂಶಗಳ ಮೂಲಕವೇ ತಿರುಗೇಟು ನೀಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತ್ಯಧಿಕ 68 ಲಿಂಗಾಯತರಿಗೆ ಟಿಕೆಟ್‌ ನೀಡಿದ್ದರೆ, ಕಾಂಗ್ರೆಸ್ ಕೇವಲ 51 ಲಿಂಗಾಯತರನ್ನಷ್ಟೇ ಕಣಕ್ಕಿಳಿಸಿದೆ. ಇನ್ನು ಜೆಡಿಎಸ್‌ನಿಂದ ಸ್ಪರ್ಧಿಸಿರುವ ಲಿಂಗಾಯತರು 37 ಮಾತ್ರ.

ಇದಿಷ್ಟೇ ಅಲ್ಲ. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿರುವ ಕ್ಷೇತ್ರಗಳಲ್ಲಿಯೂ ಬಿಜೆಪಿ ಲಿಂಗಾಯತರಿಗೇ ಮಣೆ ಹಾಕಿದೆ. ಆದರೆ ಈ ಬಗ್ಗೆ ಜಾಣಕುರುಡುತನ ತೋರಿರುವ ಕಾಂಗ್ರೆಸ್‌, ವಿನಾಕಾರಣ ಅಪಪ್ರಚಾರದಲ್ಲಿ ನಿರತವಾಗಿದೆ.

ಇನ್ನು ಶೆಟ್ಟರ್ ಮತ್ತು ಸವದಿ ಅವರಿಗೆ ಟಿಕೆಟ್ ನೀಡದಿರುವುದರ ಹಿಂದೆ ಬೇರೇನೂ ಉದ್ದೇಶಗಳಿಲ್ಲ. ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಬದ್ಧವಾಗಿರುವ ಪಕ್ಷ ಹೊಸ ಮುಖಗಳಿಗೆ ಅವಕಾಶ ನೀಡಿದೆ ಅಷ್ಟೇ. ಈ ಇಬ್ಬರಿಗೂ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಎಲ್ಲಾ ಅಧಿಕಾರವನ್ನೂ ಬಿಜೆಪಿ ನೀಡಿದೆ. ಶೆಟ್ಟರ್‌ ಮುಖ್ಯಮಂತ್ರಿ ಹುದ್ದೆವರೆಗೆ ಏರಿದರೆ, ಸೋತಿದ್ದ ಸವದಿಯನ್ನು ಪರಿಷತ್‌ಗೆ ಕಳುಹಿಸಿ ಡಿಸಿಎಂ ಹುದ್ದೆ ನೀಡಿತ್ತು ಬಿಜೆಪಿ. ಇಷ್ಟೊಂದೆಲ್ಲ ನೀಡಿದ್ದ ಪಕ್ಷ ಆಂತರಿಕ ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರ ಇವರಿಗೆ ಟಿಕೆಟ್‌ ನಿರಾಕರಿಸಿ ಮುಂದಿನ ಪೀಳಿಗೆಯ ನಾಯಕರಿಗೆ ದಾರಿ ಮಾಡಿಕೊಟ್ಟಿದೆ.

ಇದರ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿರುವ ಪಕ್ಷದ ಕಾರ್ಯಕರ್ತರ ಆಕಾಂಕ್ಷೆಗಳನ್ನು ಈಡೇರಿಸುವ ಉದ್ದೇಶವೂ ಇದೆ. ದಶಕಗಳಿಂದ ಒಬ್ಬರೇ ಸ್ಪರ್ಧಿಸುವುದನ್ನು ಕಾರ್ಯಕರ್ತರು ಎಂದೂ ಇಷ್ಟಪಡುವುದಿಲ್ಲ

WhatsApp Image 2023-04-28 at 8.03.36 PM (1).

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನೇ ವಿರೋಧಿಸಿತ್ತು ಕಾಂಗ್ರೆಸ್‌!

ಇವತ್ತು ಇಷ್ಟೆಲ್ಲ ಮಾತನಾಡುವ ಕಾಂಗ್ರೆಸ್‌ ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಸರ್ಕಾರ ರಚನೆ ಮಾಡಲು ಹೊರಟಿದ್ದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನೇ ವಿರೋಧಿಸಿತ್ತು. ಕಾಂಗ್ರೆಸ್‌ ಇದರ ಬಗ್ಗೆ ಈಗ ಬಾಯಿಗೆ ಬೀಗ ಹಾಕಿಕೊಂಡಿದೆ. ಹೀಗಿದ್ದೂ ಕಾಂಗ್ರೆಸ್ಸಿನ ಎಲ್ಲಾ ಪ್ರಯತ್ನಗಳನ್ನು ಧಿಕ್ಕರಿಸಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ಇದೇ ಬಿಜೆಪಿ ಸರಕಾರ. ಈ ಮೂಲಕ ವೀರಶೈವ-ಲಿಂಗಾಯತ ಸಮಾಜದ ಎಲ್ಲಾ ವರ್ಗದ ಬಾಂಧವರ ಶ್ರೇಯೋಭಿವೃದ್ಧಿಗೆ ಮತ್ತು ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವುದೂ ಬಿಜೆಪಿ ಮಾತ್ರ.

ಬಿಜೆಪಿ ಕಾಂಗ್ರೆಸ್‌ನ ಹಾಗೆ ಅಲ್ಲ. ಒಂದೇ ಸಮುದಾಯಕ್ಕೆ ಭರಪೂರ ಕೊಡುಗೆ ನೀಡುವುದೂ ಇಲ್ಲ. ಸಮಾಜದ ಎಲ್ಲಾ ವರ್ಗಗಳ ಕಲ್ಯಾಣದ ಬಗ್ಗೆ ನಂಬಿಕೆ ಇಟ್ಟಿರುವ ಬಿಜೆಪಿ, ಪಕ್ಷ ಭೇದವಿಲ್ಲದೆ ಎಲ್ಲ ಸಮುದಾಯಗಳ ಶ್ರೇಯೋಭಿವೃದ್ಧಿಗೂ ಶ್ರಮಿಸಿದೆ.

ಆದರೆ ಕಾಂಗ್ರೆಸ್‌ ಮಾಡಿದ್ದೇನು? ಅದು ಲಿಂಗಾಯತ ಸಮುದಾಯದ ಮೀಸಲಾತಿ ಕೋಟಾವನ್ನು ಹೆಚ್ಚಿಸುವ ಬಿಜೆಪಿ ಸರ್ಕಾರದ ಪ್ರಯತ್ನಗಳನ್ನು ವಿರೋಧಿಸಿತ್ತು. ಮೀಸಲಾತಿಗಾಗಿ ಲಿಂಗಾಯತ ಸಮುದಾಯದವರಿಗೆ ಪ್ರತ್ಯೇಕ ವರ್ಗವನ್ನು ರಚಿಸುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು