ಬೆಂಗಳೂರು : ಕರ್ನಾಟಕ ವಿಧಾನಸಭೆಗೆ ಮಹತ್ವಪೂರ್ಣ ಚುನಾವಣೆ ನಡೆಯುತ್ತಿದೆ . ಮೇ 10 ರಂದು ಮತದಾರರು ಜವಾಬ್ದಾರಿ ಅರಿತು ಮತ ಚಲಾಯಿಸಬೇಕು.ದೇಶದ ಸಂವಿಧಾನ, ಬಹುತ್ವ , ಸಾಮಾಜಿಕ ನ್ಯಾಯ , ಸೌಹಾರ್ದ ಸಂಸ್ಕೃತಿ , ಧಕ್ಕೆ ತರುವ ಅಪಾಯವಿರುವ ಕೋಮುವಾದಿ ಪಕ್ಷಗಳನ್ನು ಸೋಲಿಸಬೇಕು.

ಗಾಂಧೀಜಿ, ನೆಹರು, ಅಂಬೇಡ್ಕರ್ , ಮೌಲಾನ ಆಜಾದ್, ಇಂದಿರಾಗಾಂಧಿ ಮೊದಲ ಹಿರಿಯರು ನಡೆದುಕೊಂಡ ಬಂದ ದಾರಿಯಲ್ಲಿಯೇ ದೇಶದ ಮುಂದಿನ ತಲೆಮಾರು ಸಾಗಬೇಕಾಗಿದೆ. ಕಾಂಗ್ರೆಸ್ ಪಕ್ಷ ಕಳೆದ 150 ವರ್ಷಗಳಲ್ಲಿ ದೇಶಕ್ಕಾಗಿ ಹಲವಾರು ರೀತಿಯ ತ್ಯಾಗ ಬಲಿದಾನ ನೀಡಿದೆ . ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶದ ಐಕ್ಯತೆ ಮತ್ತು ಅಖಂಡತೆಯನ್ನು ಉಳಿಸಲಿಕ್ಕಾಗಿ ಬಲಿದಾನ ನೀಡಿದ್ದಾರೆ. ಇಂತಹ ಉದಾತ್ತ ಮೌಲ್ಯ ಮತ್ತು ಪರಂಪರೆಯನ್ನು ಹೊಂದಿದಂತಹ ಪಕ್ಷ ಕಾಂಗ್ರೆಸ್ ಆಗಿದೆ.

 

ಎಂದು ಕಾಂಗ್ರೆಸ್ ನಾಯಕಿ ಆರತಿ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಭಾಷಣಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುತ್ತಿದ್ದ ನನ್ನ ತಂದೆ ಮಾಜಿ ಶಾಸಕರು ಬೇಗಾನೆ ರಾಮಯ್ಯ ರವರ ತರಬೇತಿಯಂತೆ ನಾನು ಎಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ರಾಹುಲ್ ಗಾಂಧಿ ,ಪ್ರಿಯಾಂಕ ಗಾಂಧಿ ,ಮಲ್ಲಿಕಾರ್ಜುನ ಖರ್ಗೆ ,ಮೊದಲಾದ ರಾಷ್ಟ್ರಮಟ್ಟದ ನಾಯಕರು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ತರಲು ನಿರಂತರ ಶ್ರಮಪಡುತ್ತಿದ್ದಾರೆ. ಕರ್ನಾಟಕದ ಮುಖಂಡರುಗಳಾದ ಸಿದ್ದರಾಮಯ್ಯ , ಡಿಕೆ ಶಿವಕುಮಾರ್ ಮೊದಲಾದ ನೂರಾರು ನಾಯಕರುಗಳು ರಾಜ್ಯದ ಮೂಲೆ ಮೂಲೆ ಸಂಚರಿಸಿ ಕರ್ನಾಟಕದ ಘನತೆ ಗೌರವವನ್ನು ಉಳಿಸಲು ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಹೋರಾಡುತ್ತಿದ್ದಾರೆ .ಪ್ರಜ್ಞಾವಂತ ಮತದಾರ ಬಾಂಧವರು ಈ ಬಾರಿ ರಾಜ್ಯದಲ್ಲಿ ಸ್ಪರ್ಧಿಸಿರುವ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳ ಹಸ್ತದ ಗುರುತಿಗೆ ಮತ ನೀಡಿ ಜಯ ಗಳಿಸಬೇಕಾಗಿ ವಿನಂತಿಸುತ್ತಿದ್ದಾರೆ ಆರತಿ ಕೃಷ್ಣರವರು.

₹₹₹₹₹₹****₹####₹₹₹₹₹₹₹₹₹₹₹₹₹₹

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ; ಬಿಜೆಪಿ ವಿರುದ್ಧ ಇನಾಯತ್‌ ಅಲಿ ಕಿಡಿ

Unprecedented support to Congress in Mangaluru North Inayat Ali lashes out at BJP Karnataka Election 2023 updates
ಸುರತ್ಕಲ್: ಈ ಬಾರಿಯ ವಿಧಾನಸಭಾ ಚುನಾವಣಾ (Karnataka Election 2023) ಕಣ ರಂಗೇರಿದೆ. ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಮತದಾರರ ಮನ ಮುಟ್ಟಲು ಶ್ರಮಿಸುತ್ತಿದ್ದಾರೆ. ಇತ್ತ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಬುಧವಾರ (ಏಪ್ರಿಲ್‌ 26) ಮುತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಕಾಂಗ್ರೆಸ್‌ನ ನಾಲ್ಕು ಗ್ಯಾರೆಂಟಿಗಳ ಕುರಿತು ಮಾಹಿತಿ ನೀಡಿದ ಇನಾಯತ್‌ ಅಲಿ, ಕ್ಷೇತ್ರದ ಪ್ರಗತಿಗಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಕೋರಿ ಮತಯಾಚಿಸಿದರು.

ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಇನಾಯತ್‌ ಅಲಿ

ಸಮಗ್ರ ಅಭಿವೃದ್ಧಿಗೆ ಮತ ನೀಡಿ

ಚುನಾವಣಾ ಪ್ರಚಾರದ ಭಾಗವಾಗಿ ಇಂದು ಮುತ್ತೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ನೌಶಾದ್ ಮುತ್ತೂರು ಅವರ ನಿವಾಸದಲ್ಲಿ ಸಭೆ ನಡೆಸಿ ಮಾತನಾಡಿದ ಇನಾಯತ್‌ ಅಲಿ, “ಮಂಗಳೂರು ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ ನೀಡುವಂತೆ ಕೋರಿದ್ದೇನೆ. ಈ ವೇಳೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನವಿರೋಧಿ ಬಿಜೆಪಿ ಸರ್ಕಾರಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬೆಂಬಲ ನೀಡುವುದಿಲ್ಲ. ಕ್ಷೇತ್ರದ ತುಂಬ ಕಾರ್ಯಕರ್ತರು ಹುಮ್ಮಸ್ಸಿನಿಂದ ಪ್ರಚಾರ ನಡೆಸುತ್ತಿದ್ದು, ಗೆಲ್ಲುವ ವಿಶ್ವಾಸ ದುಪ್ಪಟ್ಟಾಗಿದೆ” ಎಂದು ಹೇಳಿದರು.

ಮನೆ ಮನೆ ಪ್ರಚಾರದಲ್ಲಿ ಇನಾಯತ್‌ ಅಲಿ