​​​​​​​ಹುತಾತ್ಮರ ದಿನದ ಅಂಗವಾಗಿ ಸರ್ದಾರ್ ಭಗತ್ ಸಿಂಗ್ , ಸುಖ್ ದೇವ್ ಮತ್ತು ರಾಜ್ ಗುರು ಅವರಿಗೆ ನಮನ ಸಲ್ಲಿಸಿದ ಉಪರಾಷ್ಟ್ರಪತಿ


ಅವರ ಪರಂಪರೆಯು ನಮ್ಮೆಲ್ಲರಿಗೂ ಸದಾ ಸ್ಪೂರ್ತಿದಾಯಕ ಮತ್ತು ಉತ್ತೇಜನಕಾರಿಯಾಗಿದೆ’’- ಉಪರಾಷ್ಟ್ರಪತಿ

ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ, ಶ್ರೀ ಜಗದೀಪ್ ಧನಕರ್ ಅವರು ಇಂದು ರಾಜ್ಯಸಭೆಯಲ್ಲಿ ತಮ್ಮ ಭಾಷಣದ ವೇಳೆ ಹುತಾತ್ಮರ ದಿನದ ಅಂಗವಾಗಿ ಸರ್ದಾರ್ ಭಗತ್ ಸಿಂಗ್ , ಸುಖ್ ದೇವ್ ಮತ್ತು ರಾಜ್ ಗುರು ಅವರಿಗೆ ನಮನ ಸಲ್ಲಿಸಿದರು.

ಅವರನ್ನು “ನಮ್ಮ ಸ್ವಾತಂತ್ರ್ಯಹೋರಾಟದ ಪೌರಾಣಿಕ ವೀರರು’’ ಎಂದು ಬಣ್ಣಿಸಿದ ಶ್ರೀ ಧನಕರ್ ಅವರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಹುತಾತ್ಮರಾಗಿದ್ದು ಒಂದು ಮಹತ್ವದ ಮೈಲಿಗಲ್ಲು ಎಂದರು. ರಾಷ್ಟ್ರಕ್ಕಾಗಿ ಅವರು ಮಾಡಿದ ಪರಮೋಚ್ಛ ತ್ಯಾಗ ಸ್ವತಂತ್ರ ಭಾರತದಲ್ಲಿ ನಾಗರಿಕರು ತಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪಾಲಿಸಲು ದಾರಿಮಾಡಿಕೊಟ್ಟಿತು ಎಂದು ಅವರು ಹೇಳಿದರು.

ಈ ಹುತಾತ್ಮರು ತಮ್ಮ ಬಲಿದಾನ ನೀಡಿದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಶ್ರೀ ಧನಕರ್ ಅವರು ಎಲ್ಲ ದೇಶವಾಸಿಗಳಿಗೆ ಕರೆ ನೀಡಿದರು. ಹುತಾತ್ಮರ ಗೌರವಾರ್ಥ ರಾಜ್ಯಸಭೆಯ ಎಲ್ಲ ಸದಸ್ಯರು ಎದ್ದು ನಿಲ್ಲಬೇಕು ಮತ್ತು ಒಂದು ಮೌನ ಆಚರಿಸಬೇಕು ಎಂದು ಅವರು ಮನವಿ ಮಾಡಿದರು.

ಉಪರಾಷ್ಟ್ರಪತಿ ಅವರು ನೀಡಿದ ಹೇಳಿಕೆ ಹೀಗಿದೆ:

“ಗೌರವಾನ್ವಿತ ಸದಸ್ಯರೇ, ಇಂದು ಭಾರತದ ಮೂವರು ಶ್ರೇಷ್ಠಪುತ್ರರಾದ ಸರ್ದಾರ್ ಭಗತ್ ಸಿಗ್, ರಾಜ್ ಗುರು ಮತ್ತು ಸುಖದೇವ್ ಅವರು ಹುತಾತ್ಮರಾದ 92ನೇ ವಾರ್ಷಿಕೋತ್ಸವ. 1931ರ ಇದೇ ದಿನ ನಮ್ಮ ಭಾರತದ ಸ್ವಾತಂತ್ರ್ಯಕ್ಕಾಗಿ ಈ ದಿಟ್ಟ ನಾಯಕರು ತಮ್ಮ ಪ್ರಾಣಗಳನ್ನೇ ಅರ್ಪಿಸಿದ್ದಾರೆ.

ಚಿಕ್ಕವಯಸ್ಸಿನಲ್ಲೇ ಅವರ ಅತ್ಯುನ್ನತ ತ್ಯಾಗ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಷ್ಪಾಂಜಲಿಯ ಕ್ಷಣವಾಗಿದೆ. ಅವರು ಹುತಾತ್ಮರಾಗುವ ಮಾರ್ಗವನ್ನು ಆಯ್ದುಕೊಂಡರು, ಇದರಿಂದ ಪ್ರತಿಯೊಬ್ಬ ಭಾರತೀಯನು ಸ್ವಾತಂತ್ರ್ಯ ಮತ್ತು ಘನತೆಯ ಜೀವನವನ್ನು ನಡೆಸಬಹುದು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆನಂದಿಸಬಹುದು. ಅವರ ಪರಂಪರೆ ನಮ್ಮಲ್ಲರಿಗೂ ಸದಾ ಸ್ಪೂರ್ತಿದಾಯಕ ಮತ್ತು ಉತ್ತೇಜನಕಾರಿಯಾಗಿದೆ.

ಅವರು ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯದ ಅತ್ಯುನ್ನತ ಬದ್ಧತೆಗೆ ಉದಾಹರಣೆಯಾಗಿದ್ದಾರೆ. ಈ ದಿನ ಈ ಹುತಾತ್ಮರು ಯಾವುದಕ್ಕಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟರೂ ಆ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ಪಾಲಿಸಲು ಸಂಕಲ್ಪ ಮಾಡೋಣ. ಭಾರತವನ್ನು ಸದಾ ಮೊದಲ ಸ್ಥಾನದಲ್ಲಿಡುವ ಪ್ರತಿಜ್ಞೆ ಮಾಡೋಣ