*ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಹರೇಕಳ ಗ್ರಾಮ ಸಮಿತಿ ಮಹಿಳಾ ಕಾರ್ಯಕರ್ತೆಯರ ಸಭೆ*
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಹರೇಕಳ ಗ್ರಾಮ ಸಮಿತಿ ಮಹಿಳಾ ಕಾರ್ಯಕರ್ತೆಯರ ಸಭೆಯು ಹರೇಕಳದಲ್ಲಿ ನಡೆಯಿತು.
ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ *SDPI ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷೆ ಮಿಸಿರಿಯ ಕಣ್ಣೂರು* SDPI ಪಕ್ಷವು ಮಹಿಳೆಯರಿಗೆ ರಾಜಕೀಯದಲ್ಲಿ ಪ್ರಾತಿನಿದ್ಯ ಕೊಟ್ಟಿದ್ದು, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬರಬೇಕು ಎಂದು ಕರೆಕೊಟ್ಟರು.
ವಿರೋದ ಪಕ್ಷಗಳ ಕೆಲವು ನಾಯಕರುಗಳ ಮೂದಲಿಕೆಯ ಮಾತುಗಳಿಗೆ ಉತ್ತರಿಸುತ್ತಾ ನಮ್ಮನ್ನಾಳುವ ಸರಕಾರವು ಅಲ್ಪಸಂಖ್ಯಾತ ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಕಸಿಯುತ್ತಿದ್ದು, ಈ ಸಂದರ್ಭ ವಿರೋದ ಪಕ್ಷಗಳು ಮಹಿಳೆಯರ ಜೊತೆ ನಿಂತಿದ್ದಲ್ಲಿ ಇಂದು ಮಹಿಳೆಯರು ಬೀದಿಗೆ ಬರುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ *SDPI ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ* ಮಾತನಾಡುತ್ತಾ ಅಭಿವೃದ್ದಿಯ ನಾಟಕವಾಡುತ್ತಾ, ಹಿಜಾಬ್ ವಿಷಯದಲ್ಲಿ ಮೌನ ವಹಿಸಿದ ಹಾಗೂ ಮಹಿಳೆಯ ಹಕ್ಕುಗಳಿಗೆ ಗೌರವ ಕೊಡದ ಜನಪ್ರತಿನಿಧಿಗೆ ಮನ್ನಣೆ ಕೊಡದೆ ನೈಜ್ಯ ಜಾತ್ಯತೀತ SDPI ಪಕ್ಷವನ್ನು ಈ ಕ್ಷೇತ್ರದಲ್ಲಿ ಜಯಬೇರಿ ಬಾರಿಸುವಂತೆ ಪ್ರಯತ್ನಿಸಲು ಕರೆ ಕೊಟ್ಟರು.
SDPI ಕಾರ್ಯಕರ್ತೆ ಯಾದ ಹಫೀಝಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ SDPI ಕಾರ್ಯಕರ್ತೆ ತೌಶಿನಾ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಕಾರ್ಯವನ್ನು ನಿರ್ವಹಿಸಿದರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯೆಯರಾದ ರೆಹನಾ ಮೊಹಮ್ಮದ್ ಹಾಗೂ ರೆಹನಾ ನಝೀರ್ ಉಪಸ್ಥಿತರಿದ್ದರು.












