ಕರ್ನಾಟಕ ಮುಸ್ಲಿಮ್ ಯುನಿಟಿ ಯು ರಾಜ್ಯದ ಮುಸ್ಲಿಮರ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ, ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಪಾಲು ಹಾಗು ಮುಸ್ಲಿಮರ ಮೀಸಲಾತಿಗಾಗಿ ಸಕ್ರಿಯ ವಾಗಿರುವ ಸಂಘಟನೆ ಯಾಗಿದೆ. ಈಗಾಗಲೇ ರಾಜ್ಯಾದಂತ್ಯ ಜನಪರ, ಜಾತ್ಯತೀತ, ಪ್ರಗತಿಪರ ವಿಶೇಷ ವಾಗಿ ಮುಸ್ಲಿಮ್ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದೆ.
ಇದರಮುಂದುವರಿದು ಇಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ವತಿಯಿಂದ KMU ಸಂಘಟನೆಯ ಅಧಿಕೃತ ರಾಜ್ಯ ಸಮಿತಿಯನ್ನು ಘೋಶಿಸಲಾಯಿತು.
ಕಾರ್ಯಧ್ಯಕ್ಷರಾಗಿ ಮುಸ್ಲಿಮ್ ಸಮುದಾಯದ ಹಿರಿಯ ನಾಯಕರು, ಸಮಾಜ ಸೇವಕರು, ಚಿಂತಕರು,ನಿವೃತ್ತ ಪೊಲೀಸ್ ಅಧಿಕಾರಿಗಳು ಆದ G A ಬಾವ,ರಾಜ್ಯಾಧ್ಯಕ್ಷರಾಗಿ ಮುಸ್ಲಿಮ್ ಸಮುದಾಯದ ಹಿರಿಯ ಮುಖಂಡರು, ಯಶಸ್ವಿ ಉದ್ಯಮಿ, ಪ್ರಖರ ವಾಗ್ಮಿ, ಅಬ್ದುಲ್ ಸತ್ತಾರ್ ರವರು,
ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಯುವ ನಾಯಕ, ರಾಜಕೀಯ ಚಿಂತಕರು ಆಗಿರುವ ಡಾ. ಖಾಸಿಂ ಸಾಬ್, ರಾಜ್ಯ ಉಪಾಧ್ಯಕ್ಷರಾಗಿ T M ನಾಸಿರ್ ಇಂಪಾಲ್, ಉತ್ತರ ಕರ್ನಾಟಕ ರಾಜ್ಯ ಸಂಚಾಲಕರಾಗಿ ಅಬ್ದುಲ್ ಜಬ್ಬಾರ್ ಕಲ್ಬುರ್ಗಿ ಹಾಗು ದಕ್ಷಿಣ ಕರ್ನಾಟಕ ರಾಜ್ಯ ಸಂಚಾಲಕರಾಗಿ ಅಬ್ದುಲ್ ವಹೀದ್ ಅಹ್ಮದ್ ಮಾಗುಂಡಿ ರವರು ಆಯ್ಕೆ ಗೊಂಡರು.