ಪತ್ರಿಕಾ ಪ್ರಕಟಣೆಗಾಗಿ ===================== ದಿನಾಂಕ 6-10-2022………………ಕೊಪ್ಪಳ ನಗರದ ಗದಗ ರಸ್ತೆಯ ಪಕ್ಕದ ಸ.ನಂ.655, ಹಾಗೂ 626 ಇತರೆ ಸರ್ಕಾರಿ ಭೂಮಿಯನ್ನು ನಗರದ ರಿಯೆಲ್ ಎಸ್ಟೇಟ್ ದಂದೆಕೋರೊಬ್ಬರು ಅತಿಕ್ರಮಿಸಿದ್ದಾರೆ. ಎರಡು ಗುಡ್ಡಗಳ ನಡುವೆ ಖಾಸಗಿ ವ್ಯಕ್ತಿಯೊಬ್ಬರ ಸ್ವಲ್ಪ ಭೂಮಿ ಇದೆ. ಸರ್ಕಾರಿ ಪರಂಪೋಕ್ ಭೂಮಿಯ ನಡುವಿನಲ್ಲಿರುವ ಊ ಆಕಾರದ 2 ಎಕರೆ ಭೂಮಿಯನ್ನು ಖರೀದಿಸಿದ ಪ್ರಭಾವಿ ವ್ಯಕ್ತಿಯೊಬ್ಬರು, ಎರಡು ಭಾಗದ ಇಳಿಜಾರಿನ ಸರ್ಕಾರಿ ಭೂಮಿ ಕಬಳಿಸಲು ಯೋಜನೆ ರೂಪಿಸಿ, ಕಾರ್ಯಾರಂಭ ಮಾಡಿದ್ದರು. ಸರ್ಕಾರಿ ಪರಂಪೋಕ್ ಭೂಮಿಯಲ್ಲಿನ ಕಲ್ಲುಗಳನ್ನು ಅಗೆದು, ರಸ್ತೆ ದೊಡ್ಡ ಚರಂಡಿಗಳನ್ನು ಮಾಡುವ ತಯಾರಿ ನಡೆಸಿದ್ದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಳೆದ ಆರು ತಿಂಗಳ ಹಿಂದೆ,ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರಿಗೆ ಕಂಪ್ಲೇಂಟ್ ಕೊಡಲಾಗಿತ್ತು. ಅಧಿಕಾರಿಗಳಿಗೆ ನಿರಂತರ ಒತ್ತಡ ಮಾಡಿದ ನಂತರ, ಅತಿಕ್ರಮಣಕಾರರ ಮೇಲೆ ಎರಡು ಕ್ರಿಮಿನಲ್ ಕೇಸ್ ಗಳು ದಾಖಲಾಗಿವೆ….

ಆದರೆ ಅಕ್ರಮ ಕಲ್ಲು ಗಣಿಗಾರಿಕೆಗೆ ಬಳಸಿದ, ಜೇಸಿಬಿ ಇತರೆ ವಾಹನಗಳನ್ನು ಇದುವರಿಗೆ ಪೋಲಿಸರು ಜಪ್ತಿ ಮಾಡಿಕೊಂಡಿಲ್ಲ. ಲಕ್ಷಾಂತರ ಬೆಲೆ ಬಾಳುವ ಕಲ್ಲುಗಳು,ಕಟ್ಟಡ ನಿರ್ಮಾಣಕ್ಕೆ ಬಳಸಲು ತಂದಿದ್ದ ಸಣ್ಣ ಕಂಕರ್ ಜಲ್ಲಿಕಲ್ಲುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳದೆ ಇರುವುದು ಅಧಿಕಾರಿಗಳ ನಿರ್ಲಕ್ಷ್ಯ ದೋರಣೆಯ ಕುರಿತು ಹಲವು ಅನುಮಾನಗಳು ಮೂಡಿವೆ. 30 ಎಕರೆ ಪರಂಪೋಕ್ ಕಂದಾಯ ಹಾಗೂ ನೂರಾರು ಎಕರೆ ಅರಣ್ಯ ಭೂಮಿಯ (ಬೆಟ್ಟ ಗುಡ್ಡದಲ್ಲಿ) ಸುತ್ತಲು ಐತಿಹಾಸಿಕ ಶಿಲಾಶಾಸನಗಳಿವೆ. ಜಿಲ್ಲಾಡಳಿತ ಗಂಭೀರ ಕ್ರಮಕ್ಕೆ ಮುಂದಾಗದಿದ್ದರೆ,ಭೂಮಿಯು ಉಳಿಯುದಿಲ್ಲ ಮತ್ತು ಶಿಲಾಶಾಸನಗಳಿಗೆ ಅಪಾಯವಾಗುತ್ತದೆ. ನಗರಕ್ಕೆ ಹೊಂದಿಕೊಂಡಿರುವ ಈ ಭೂಮಿಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಸುತ್ತೇವೆ. ****************************** *ಡಿ.ಹೆಚ್.ಪೂಜಾರ……ಬಸವರಾಜ ಶೀಲವಂತರ …….. ಮಹಾಂತೇಶ ಕೊತಬಾಳ ಸಂಚಾಲಕರು*